H.Ai Bot Logo
H.Ai Bot
Powered by GPT-4
Terms of Service

I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.

ವೈಯಕ್ತಿಕ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

13.png
ತತ್ ಕ್ಷಣ ಅನುಮೋದನೆ

ವೈಯಕ್ತಿಕ ಸಾಲ ತ್ವರಿತ ಅನುಮೋದನೆ ನಿಮಿಷಗಳಲ್ಲಿ ನಡೆಯುತ್ತದೆ. ನಿಮ್ಮ ಫೋನ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅಗತ್ಯವಿರುವ ವಿವರಗಳನ್ನು ನಮೂದಿಸಿ. ರಿಯಲ್ ಟೈಮ್ ಮೌಲ್ಯಮಾಪನದ ನಂತರ, ಸಾಲ ತತ್ ಕ್ಷಣವೇ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.

income.png
ತತ್ ಕ್ಷಣ ವಿತರಣೆ

ಸಲ್ಲಿಕೆಯಾಗಿರುವ ಕೆವೈಸಿ ವಿವರಗಳ ಪರಿಶೀಲನೆಯಾದ ನಂತರ, ಸಾಲವು ತತ್ ಕ್ಷಣವೇ ಬ್ಯಾಂಕ್ ಖಾತೆಗೆ ವಿತರಣೆಯಾಗುತ್ತದೆ. ಜಾಲತಾಣದಲ್ಲಿ ನೀಡಲಾಗಿರುವ ಬ್ಯಾಂಕುಗಳ ಪಟ್ಟಿಯ ಪೈಕಿ ಯಾವುದಾದರೊಂದು ಬ್ಯಾಂಕಿನಲ್ಲಿ ನೀವು ಬ್ಯಾಂಕ್ ಖಾತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.

verify-requirements.png
ಕಾಗದರಹಿತ ದಾಖಲೆ ಸಲ್ಲಿಕೆ

ಭೌತಿಕ ದಾಖಲೆಗಳ ಅಪ್ಲೋಡ್ ಅಥವಾ ಸಲ್ಲಿಕೆಯ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಗೆ ಆಧಾರ್, ಪ್ಯಾನ್ ಕಾರ್ಡ್ ಜೋಡಣೆ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಿದ್ಧವಾಗಿ ಇರಿಸಿಕೊಳ್ಳಿ.

emi-calculator.png
ಇಎಂಐ ಕ್ಯಾಲುಕ್ಯುಲೇಟರ್

ಮಾಸಿಕ ಕಂತುಗಳನ್ನು ಲೆಕ್ಕ ಹಾಕಲು ಇಎಂಐ ಸಾಧನ ಉಪಯೋಗಿಸಿ. ಅಸಲು ಮೊತ್ತ, ಅವಧಿ, ಮತ್ತು ಬಡ್ಡಿದರಗಳನ್ನು ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಸರಿಹೊಂದುವಂತೆ ಇಎಂಐ ನಂತೆ ಸಮಾನವಾಗಿ ವಿಭಜಿಸಿ, ವ್ಯತ್ಯಾಸಗಳನ್ನು ಪರಿಶೀಲಿಸಿ. ಫಲಿತಾಂಶಗಳು ಶೇಕಡಾ 100 ರಷ್ಟು ನಿಖರವಾಗಿರುತ್ತವೆ ಮತ್ತು ಸೆಕೆಂಡುಗಳಲ್ಲಿ ಲೆಕ್ಕಿಸಲ್ಪಡುತ್ತದೆ.

tenure-and-interest-rates.png
ಕಡಿಮೆ ಬಡ್ಡಿ ದರ

ಆರಂಭಿಕ ಬಡ್ಡಿ ದರವು ವಾರ್ಷಿಕವಾಗಿ 11% ರಷ್ಟು ಕಡಿಮೆ ಇರುತ್ತದೆ, ಅಂತೆಯೇ, ಅಗತ್ಯವಿರುವ ವ್ಯಕ್ತಿಗಳಿಗೆ ಕೈಗೆಟುಕುವ ವೈಯಕ್ತೀಕರಣ ಸಾಲ ದೊರೆಯುವಂತೆ ಮಾಡುವುದಕ್ಕಾಗಿ ಬಡ್ಡಿಯ ಶೇಕಡಾವಾರನ್ನು ಕಡಿಮೆ ವಿಧಿಸಲಾಗುತ್ತದೆ. ಹಾಗೆಯೇ, ಬಳಸಲಾದ ಸಾಲ ಮೊತ್ತದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ ಸಂಪೂರ್ಣ ಅನುಮೋದಿತ ಮಿತಿಯ ಮೇಲಲ್ಲ.

multiple-repayment-modes.png
ಫ್ಲೆಕ್ಸಿಬಲ್ ಮರುಪಾವತಿ ಅವಧಿ

ನಿಮ್ಮ ಮರುಪಾವತಿ ಅವಧಿಯನ್ನು 6 ತಿಂಗಳುಗಳಿಂದ 24 ತಿಂಗಳುಗಳ ನಡುವೆ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆದ್ದರಿಂದ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ಗಳ ಪಾವತಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

8.png
ಮೇಲಾಧಾರ – ರಹಿತ

ವೈಯಕ್ತಿಕ ಸಾಲದ ಅತ್ಯುತ್ತಮ ವೈಶಿಷ್ಟ್ಯವೆಂದರೆ ಇದರ ಅನುಮೋದನೆಗಾಗಿ ಯಾವುದೇ ಭದ್ರತೆ ಅಥವಾ ಮೇಲಾಧಾರ ಅಗತ್ಯವಿರುವುದಿಲ್ಲ. ಇದರಿಂದಾಗಿ ವೈಯಕ್ತಿಕ ಸಾಲಗಳನ್ನು ತಕ್ಷಣವೇ ಮಂಜೂರು ಮಾಡುವುದಕ್ಕೆ ಸಾಲ ದಾತರಿಗೆ ಇದರಿಂದ ಸುಲಭವಾಗುತ್ತದೆ.

maximum-loan-amount.png
ಬಳಕೆದಾರ ಸುರಕ್ಷಿತ ವಿಧಾನ

ಹೀರೋಫಿನ್‌ಕಾರ್ಪ್ ಆಪ್ ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರಾ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ಅಲ್ಲದೇ, ಈ ವೈಯಕ್ತಿಕ ಸಾಲ ಆಪ್, ಅಧಿಕ ವಿಶ್ವಾಸಾರ್ಹ ಹಣಕಾಸು ಸೇವಾ ಕಂಪೆನಿಯಾದ, ಹೀರೋ ಫಿನ್ ಕಾರ್ಪ್ ನಿಂದ ಚಾಲಿತವಾಗಿದೆ. ಆದ್ದರಿಂದ, ಬಳಕೆದಾರ ದತ್ತಾಂಶ ಸುರಕ್ಷಿತವಾಗಿದೆ ಮತ್ತು ಬಾಹ್ಯ ಮೂಲಗಳಿಗೆ ಇದನ್ನು ನೋಡಲು ಅವಕಾಶವಿರುವುದಿಲ್ಲ.

ವೈಯಕ್ತಿಕ ಸಾಲ ಅರ್ಹತಾ ಮಾನದಂಡ

ಆನ್ಲೈನ್ ನಲ್ಲಿ ವೈಯಕ್ತಿಕ ಸಾಲ ಸುಲಭವಾಗಿ ಲಭ್ಯವಾಗುವಂತೆ ಮಾಡುವುದೇ ಹೀರೋಫಿನ್‌ಕಾರ್ಪ್ ನ ಗುರಿಯಾಗಿದೆ. ಹೀಗಾಗಿ, ಅರ್ಹತಾ ಮಾನದಂಡಕ್ಕಾಗಿ ಎರಡು ಸರಳ ಮಾನದಂಡಗಳಿವೆ–ವೇತನದಾರರಿಗಾಗಿ ವೈಯಕ್ತಿಕ ಸಾಲ ಮತ್ತು ಸ್ವ ಉದ್ಯೋಗಿಗಳಿಗಾಗಿ ವೈಯಕ್ತಿಕ ಸಾಲ.

ಈ ಆನ್ಲೈನ್ ವೈಯಕ್ತಿಕ ಸಾಲ ಆಪ್ ನ ಹೆಚ್ಚು ಬಳಕೆ ಮಾಡಬಹುದಾದವರಿಗಾಗಿ ಹೀರೋಫಿನ್‌ಕಾರ್ಪ್ ಎರಡು ಅರ್ಹತಾ ಮಾನದಂಡವನ್ನು ನಿಗದಿ ಪಡಿಸಿದೆ.

ವೇತನಸಹಿತ ಉದ್ಯೋಗಿಗಳಿಗಾಗಿ

age_632f917159.png

ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕಾಗಿ ನಿಮ್ಮ ವಯಸ್ಸು 21 ವರ್ಷಗಳಿಂದ 58 ವರ್ಷಗಳ ನಡುವಿನದ್ದಾಗಿರಬೇಕು.

maximum_loan_amount_e10a48018e_1_a39410b4b3.png

ಮಹಾನಗರ ಮತ್ತು ನಾನ್ ಮೆಟ್ರೋ ನಗರಗಳಲ್ಲಿನ ಅರ್ಜಿದಾರರ ಕನಿಷ್ಠ ಮಾಸಿಕ ಆದಾಯ ಪ್ರತಿ ತಿಂಗಳಿಗೆ ರೂ. 15,000 ಇರಲೇಬೇಕು.

ಸ್ವ ಉದ್ಯೋಗಿಗಳಿಗಾಗಿ

age_632f917159.png

ಸ್ವ ಉದ್ಯೋಗಿಗಳಾಗಿರುವ ಅರ್ಜಿದಾರರಿಗಾಗಿ ಅರ್ಹತಾ ವಯಸ್ಸು 21 ವರ್ಷಗಳಿಂದ 58 ವರ್ಷಗಳು

maximum-loan-amount.png

ಅತಿ ಹೆಚ್ಚು ಸಕ್ರಿಯ ಬ್ಯಾಂಕ್ ಖಾತೆಯ 6 ತಿಂಗಳುಗಳ ಸಂಪೂರ್ಣ ಬ್ಯಾಂಕ್ ಸ್ಟೇಟ್ಮೆಂಟ್

ಇಎಂಐಗಳನ್ನು ಲೆಕ್ಕಹಾಕುವಂತಹ ಸಂಕೀರ್ಣ ಇಂಎಗಳಿಗಾಗಿ ಹಸ್ತಚಾಲಿತ ಕ್ಯಾಲುಕ್ಯುಲೇಟರ್ ಗಳನ್ನು ಉಪಯೋಗಿಸಬೇಡಿ. ಅಸಲು ಮೊತ್ತ, ಬಡ್ಡಿ ಮತ್ತು ಅವಧಿಯನ್ನು ನಮೂದಿಸಿ ಕೆಲವೇ ಸೆಕೆಂಡುಗಳಲ್ಲಿ ನಿಖರ ಫಲಿತಾಂಶ ನೀಡುವ ಹೀರೋಫಿನ್‌ಕಾರ್ಪ್ ಇಎಂಐ ಕ್ಯಾಲುಕ್ಯುಲೇಟರ್ ಗಳನ್ನು ಬಳಸುವುದು ಬಹಳ ಉತ್ತಮ. ಇದೊಂದು ಸುಲಭವಾಗಿ ಲಭ್ಯವಾಗುವ ಸಾಧನವಾಗಿದ್ದು, ನೀವು ಒಂದು ಸಂತೃಪ್ತಿಕರ ಇಎಂಐ ಮೊತ್ತ ಪಡೆದುಕೊಳ್ಳುವವರೆಗೂ ಪುನಃ ಪುನಃ ಉಪಯೋಗಿಸುವುದಕ್ಕೆ ಉದ್ದೇಶಿತವಾಗಿದೆ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಹೀರೋಫಿನ್‌ಕಾರ್ಪ್ ನಂತಹ ಆನ್ಲೈನ್ ತತ್ ಕ್ಷಣ ಸಾಲ ಆಪ್ ಗಳ ಮೂಲಕ ವೈಯಕ್ತಿಕ ಸಾಲವನ್ನು ತಕ್ಷಣವೇ ಪಡೆದುಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಿಂದ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ, ಅರ್ಹತಾ ಮಾನದಂಡ ಪರಿಶೀಲಿಸಿ, ಸಾಲ ಅರ್ಜಿ ಸಲ್ಲಿಸಿ ಮತ್ತು 24 ಗಂಟೆಗಳೊಳಗಾಗಿ ಸಾಲ ಮಂಜೂರಾತಿ ಮತ್ತು ವಿತರಣೆ ಪಡೆದುಕೊಳ್ಳಿ.
ಸಾಲ ಪಡೆಯುವವರ ಮರುಪಾವತಿ ತನಿಖೆ ಮಾಡಲು ಸಾಲದಾತರು ಸಿಐಬಿಐಲ್ ಸ್ಕೋರ್ ಪರಿಗಣಿಸುತ್ತಾರೆ. ಒಂದುವೇಳೆ ಸಿಐಬಿಐಎಲ್ ಸ್ಕೋರ್ 300 ರ ಸಮೀಪದಲ್ಲಿದ್ದರೆ, ಅದು ಕಡಿಮೆ ಕ್ರೆಡಿಟ್ ಸ್ಕೋರ್ ಅನ್ನು ಪ್ರತಿಬಿಂಬಿಸುತ್ತದೆ, 900 ರ ಸಮೀಪದಲ್ಲಿದ್ದರೆ, ಒಂದು ತ್ವರಿತ ವೈಯಕ್ತಿಕ ಸಾಲ ಅನುಮೋದನೆಗಾಗಿ ಅದು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಅನ್ನು ಪ್ರತಿಬಿಂಬಿಸುತ್ತದೆ.
ವೈಯಕ್ತಿಕ ಸಾಲ ಇಎಂಐಗಳನ್ನು ಪ್ರತಿ ತಿಂಗಳ ನಿಗದಿತ ಗಡುವಿನ ದಿನಾಂಕದಂದು ಪಾವತಿಸುವುದು ಸೂಕ್ತ. ಆದಾಗ್ಯೂ, ಇದು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ. ಸಾಧಾರಣವಾಗಿ ಸಾಲದ ಪೂರ್ವ-ಪಾವತಿ ಅಥವಾ ಮುಂಚಿತ ಪಾವತಿಯು ಸಾಲಪಡೆದ ವ್ಯಕ್ತಿಯ ಮೇಲೆ ದಂಡ ಬೀಳುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಇನಿಷಿಯೇಟ್ ಮಾಡುವುದಕ್ಕೆ ಮುನ್ನ ಪೂರ್ವ ಪಾವತಿ ನೀತಿಗಳನ್ನು ಓದಿ.
ವೇತನಸಹಿತ ಮತ್ತು ಸ್ವ ಉದ್ಯೋಗಿಗಳಿಬ್ಬರೂ ತಿಂಗಳಿಗೆ ಕನಿಷ್ಠ 15,000 ಆದಾಯದೊಂದಿಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ನಿಮ್ಮ ಮಾಸಿಕ ವೇತನ ಮಾನದಂಡದ ಆಧಾರದಲ್ಲಿ, ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕನಿಷ್ಠ ದಾಖಲೆ ಸಲ್ಲಿಕೆಗಳೊಂದಿಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದಾದ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಸ್ವ ಉದ್ಯೋಗಿ ಅಥವಾ ವೇತನಸಹಿತ ವ್ಯಕ್ತಿಯು ತಿಂಗಳಿಗೆ 15,000 ರೂಪಾಯಿಯ ಕನಿಷ್ಠ ವೇತನದೊಂದಿಗೆ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ಹೌದು, ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೌಡ್ ಮಾಡಿಕೊಳ್ಳಲಾಗಿರುವ ವಿಶ್ವಾಸಾರ್ಹ ಸಾಲ ಆಪ್ ಗಳ ಮೂಲಕ ಆನ್ಲೈನ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಸುರಕ್ಷಿತ. ಸಂಪರ್ಕ ವಿವರಗಳಲ್ಲಿ ಯಾವುದೇ ವ್ಯತ್ಯಾಸ ಅಥವಾ ಅನುಪಸ್ಥಿತಿಯನ್ನು ನೀವು ಗಮನಿಸಿದರೆ, ಅಂತಹ ಸಾಲ ಆಪ್ ಗಳನ್ನು ಅಥವಾ ಸಾಲ ಜಾಲತಾಣಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ ಅಥವಾ ಸಂದರ್ಶಿಸಬೇಡಿ. ಹಾಗೆಯೇ, ಆನ್ಲೈನ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಆಪ್ ರೇಟಿಂಗ್ ಗಳನ್ನು ಮತ್ತು ಗ್ರಾಹಕರ ಸಮೀಕ್ಷೆಗಳನ್ನು ಪರಿಶೀಲಿಸಿ.
ವೈಯಕ್ತಿಕ ಸಾಲಗಳನ್ನು ತಕ್ಷಣವೇ 24 ಗಂಟೆಗಳಿಂದ 48 ಗಂಟೆಗಳ ಸಮಯಾವಧಿಯೊಳಗೆ ಪಡೆದುಕೊಳ್ಳಬಹುದಾಗಿದೆ. ಇದು ಅರ್ಜಿದಾರನ ಸಾಲದ ಉದ್ದೇಶ, ಅರ್ಹತಾ ಮಾನದಂಡ ಮತ್ತು ಆದಾಯವನ್ನು ಆಧರಿಸಿರುತ್ತದೆ. ವೈಯಕ್ತಿಕ ಸಾಲಗಳು ತುರ್ತು ನಗದನ್ನು ಒದಗಿಸುವ ಕಾರಣ, ಇದು ಮೇಲಾಧಾರ ಮುಕ್ತವಾಗಿರುತ್ತದೆ ಮತ್ತು ತುರ್ತು ಹಣಕಾಸು ಅಗತ್ಯಗಳ ಪೂರೈಕೆಗಾಗಿ ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ.
ವೈಯಕ್ತಿಕ ಸಾಲವೆಂದರೆ ಒಂದು ತತ್ ಕ್ಷಣ ಸಾಲ, ಇದು ತುರ್ತು ನಗದು ಅಗತ್ಯಗಳನ್ನು ಪೂರೈಸಲು ಸಾಕಷ್ಟು ಉಪಯುಕ್ತವಾಗಿರುತ್ತದೆ. ತುರ್ತು ಹಣಕಾಸು ಅಗತ್ಯತೆಗಳನ್ನು ನಿರ್ವಹಿಸಲು ವೈಯಕ್ತಿಕ ಸಾಲ ಪಡೆದುಕೊಳ್ಳುವುದು ಬಹಳ ಉತ್ತಮವಾಗಿರುತ್ತದೆ.
ವೈಯಕ್ತಿಕ ಸಾಲವು ಅನಿರೀಕ್ಷಿತ ಪರಿಸ್ಥಿತಿಗಳಲ್ಲಿ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸುತ್ತದೆ. ವಿವಿಧ ತುರ್ತು ಸ್ಥಿತಿಗಳ ನಿರ್ವಹಣೆಗಾಗಿ ವಿವಿಧ ರೀತಿಯ ವೈಯಕ್ತಿಕ ಸಾಲಗಳು ಲಭ್ಯವಿದೆ. ಉದಾಹರಣೆಗೆ, ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ವೈದ್ಯಕೀಯ ಸಾಲ, ವಿದೇಶದಲ್ಲಿ ಶಿಕ್ಷಣ ಪಡೆಯುವುದಕ್ಕಾಗಿ ಶಿಕ್ಷಣ ಸಾಲ, ಉನ್ನತ ಮಟ್ಟದ ವಿದ್ಯುನ್ಮಾನ ಉತ್ಪನ್ನಗಳು ಇತ್ಯಾದಿ ಖರೀದಿಗಾಗಿ ಗ್ರಾಹಕ ಉಪಭೋಗ್ಯ ಸಾಲ.
ಹೀರೋಫಿನ್‌ಕಾರ್ಪ್ಎನ್ನುವುದು 1.5 ಲಕ್ಷ ರೂಪಾಯಿವರೆಗಿನ ನಿಮ್ಮ ತಕ್ಷಣದ ನಗದು ಅಗತ್ಯಗಳನ್ನು ಪೂರೈಸುವುದಕ್ಕಾಗಿ ತಕ್ಷಣವೇ ಲಭ್ಯವಿರುವ ಒಂದು ಸುರಕ್ಷಿತ ವೈಯಕ್ತಿಕ ಸಾಲ ಆಪ್ ಆಗಿದೆ. ಅಲ್ಲದೇ, ಸಾಲ ಅರ್ಜಿ ಪ್ರಕ್ರಿಯೆಯು ಕಾಗದ ರಹಿತ ದಾಖಲೆ ಸಲ್ಲಿಕೆಯನ್ನು ಒಳಗೊಂಡಿದ್ದು, ಗೊಂದಲ ಮುಕ್ತವಾಗಿದೆ.
ಸಾಲ ಅರ್ಜಿದಾರರು, ವೇತನದಾರರಾಗಿರಲಿ ಅಥವಾ ಸ್ವ ಉದ್ಯೋಗಿಳಾಗಿರಲಿ, ಅವರು ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಪಡೆದುಕೊಳ್ಳಬೇಕಾದಲ್ಲಿ, ಅವರ ವಯಸ್ಸು 21 ವರ್ಷಗಳಿಂದ 58 ವರ್ಷಗಳಾಗಿರಬೇಕು. ಅಲ್ಲದೇ, ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಕಡ್ಡಾಯ ಹಾಗೆಯೇ 6 ತಿಂಗಳ ಆದಾಯ ಪುರಾವೆ ಕೂಡಾ ಕಡ್ಡಾಯವಾಗಿರುತ್ತದೆ.
ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳಲ್ಲಿ, ಆಧಾರ್ ಕಾರ್ಡ್ ಅಥವಾ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ವಿಳಾಸ ಪುರಾವೆ, ಆದಾಯ ಪುರಾವೆ ಮತ್ತು ಭಾವಚಿತ್ರಗಳು. ಸ್ವ ಉದ್ಯೋಗಿಗಳಿಗಾಗಿ ಕಂಪೆನಿ ವಿವರಗಳ ಸಲ್ಲಿಕೆ ಕೂಡಾ ಅಗತ್ಯವಿರುತ್ತದೆ.
ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಕನಿಷ್ಠ ಮಾಸಿಕ ವೇತನ 15,000 ರೂ. ಇರಲೇಬೇಕು, ಇದು ವೇತನದಾರರು ಹಾಗೂ ಸ್ವ ಉದ್ಯೋಗಿಗಳು ಇಬ್ಬರಿಗೂ ಅನ್ವಯವಾಗುತ್ತದೆ.
ಸಿಂಪ್ಲಿ ಕ್ಯಾಶ್ ಮೂಲಕ ಒಂದು ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ 500 ಕ್ಕಿಂತ ಅಧಿಕಾವಾಗಿರುವ ಕ್ರೆಡಿಟ್ ಸ್ಕೋರ್ ಸೂಕ್ತವಾಗಿರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ರಚನೆಗೆ ಸಾಲ ಮರುಪಾವತಿ ಇತಿಹಾಸ ಮಹತ್ವದ್ದಾಗಿರುತ್ತದೆ. ತಪ್ಪಿಹೋದ ಇಎಂಐ ಗಳು ನಿಮ್ಮ ಕ್ರೆಡಿಟ್ ಸ್ಕೋರ್ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಸಾಲ ಮೊತ್ತದ ಅಸಲಿನ ಮೇಲೆ ಕೈಗೆಟಕುವ ದರದಲ್ಲಿ ಅಂದರೆ ಮಾಸಿಕ ಶೇಕಡಾ 2.08 ರಿಂದ ಆರಂಭವಾಗುವ ಮತ್ತು ವಾರ್ಷಿಕ ಶೇಕಡಾ 20 ರಷ್ಟು ಬಡ್ಡಿ ದರ ಅನ್ವಯವಾಗುತ್ತದೆ.
ಅರ್ಜಿದಾರರು ಹೀರೋಫಿನ್‌ಕಾರ್ಪ್ ಆಪ್ ನಿಂದ ಗರಿಷ್ಠ 1,50,000 ಸಾಲ ಮೊತ್ತಗಳಿಗಾಗಿ ಅರ್ಜಿ ಸಲ್ಲಿಸಬಹುದು.
ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ತತ್ ಕ್ಷಣ ಸಾಲ ಆಪ್. ಅರ್ಜಿದಾರರು ಅಗತ್ಯವಿರುವ ಕಾಗದರಹಿತ ದಾಖಲೆಗಳನ್ನು ಮತ್ತು ಕೆವೈಸಿ ದಾಖಲೆಗಳನ್ನು ಸಲ್ಲಿಸಿದ ನಂತರ, ವೈಯಕ್ತಿಕ ಸಾಲ ನಿಮಿಷಗಳಲ್ಲೇ ಅನುಮೋದನೆಯಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ.
ಹೀರೋಫಿನ್‌ಕಾರ್ಪ್ ಎನ್ನುವುದು ಸಂಪೂರ್ಣ ಡಿಜಿಟಲ್ ಆಪ್. ಇಎಂಐಗಳನ್ನು ಸುಲಭವಾಗಿ ಆಪ್ ಮೂಲಕ ಸುಲಭವಾಗಿ ಪಾವತಿ ಮಾಡಬಹುದು ಅಥವಾ ಮನವಿಯ ಮೇರೆಗೆ ಪ್ರತಿತಿಂಗಳೂ ಸ್ವಯಂ ಡೆಬಿಟ್ ಆಗುವಂತೆ ಮಾಡಬಹುದು.