ವೈಯಕ್ತಿಕ ಸಾಲಗಳು ಹಣಕಾಸು ಅಗತ್ಯಗಳನ್ನು ಪೂರೈಕೆ ಮಾಡುವಲ್ಲಿ ಮತ್ತು ಜೀವನದ ಅನಿಶ್ಚಿತತೆಯೊಂದಿಗೆ ವ್ಯವಹರಿಸುವುದಕ್ಕೆ ಸಹಾಯ ಮಾಡುತ್ತವೆ. ಶಿಕ್ಷಣ, ವಿವಾಹ, ಪ್ರಯಾಣ, ಆಸ್ತಿ, ಆಸ್ಪತ್ರೆ ಇತ್ಯಾದಿಗಳಿಗೆ ಸಂಬಂಧಿಸಿದ ಹಣಕಾಸುಗಳನ್ನು ನಿರ್ವಹಿಸುವುದಕ್ಕೆ ಒಂದು ವರದಾನದಂತೆ ರುಜುವಾತಾಗಿರುವಂತಹ ಅನೇಕ ಉದ್ದೇಶಗಳಿವೆ. ಸಾಲ ಅರ್ಜಿ ಸಲ್ಲಿಸುವುದಕ್ಕೆ ದೀರ್ಘಾವಧಿಯ ಮತ್ತು ಸಮಯ ಬಳಕೆಯ ಪ್ರಕ್ರಿಯೆ ಈಗಿಲ್ಲ, ಬಳಕೆದಾರ-ಸ್ನೇಹಿ
ಇನ್ಸ್ ಟೆಂಟ್ ಸಾಲ ಆಪ್ ಗಳು ಮತ್ತು ಜಾಲತಾಣಗಳಿಗೆ ಧನ್ಯವಾದ. ಈಗ ತಲೆ ಎತ್ತುವ ಪ್ರಶ್ನೆ ಎಂದರೆ, ನನ್ನ ಆದಾಯ ಅಥವಾ ವೇತನದ ಆಧಾರದ ಮೇಲೆ ನಾನು ಪಡೆದುಕೊಳ್ಳಬಹುದಾದ ಸಾಲದ ಮೊತ್ತ ಎಷ್ಟು. ಈಗ ನನ್ನ ರೂ. 30,000 ವೇತನದ ಮೇಲೆ ನಾನು ಎಷ್ಟು ಸಾಲ ಪಡೆದುಕೊಳ್ಳಬಹುದು?
ಈ ಪ್ರಶ್ನೆಗೆ ಉತ್ತರ ಸಾಲದಾತರಿಂದ ಸಾಲದಾತರಿಗೆ ಮತ್ತು ನೀವು ಒಳಪಡುವ ಅರ್ಹತಾ ಮಾನದಂಡಕ್ಕೆ ಭಿನ್ನವಾಗಿರುತ್ತದೆ. ಸಾಧಾರಣವಾಗಿ, ರೂ. 30,000 ವೇತನದೊಂದಿಗೆ ಸಾಲ ಪಡೆಯುವವರು 15,000 ರೂಪಾಯಿಯಿಂತ 2 ಲಕ್ಷದವರೆಗೆ
ಸಣ್ಣ ನಗದು ಸಾಲಗಳನ್ನು ಪಡೆದುಕೊಳ್ಳಬಹುದು. ತಕ್ಷಣದ ನಗದು ಅಗತ್ಯಗಳನ್ನು ಮತ್ತು ಸಾಲಗಳನ್ನು ತೀರಿಸಲು ಉಪಯೋಗಿಸಬಹುದು. ಕಂಪೆನಿಯ ಜನಪ್ರಿಯತೆ ಹೆಚ್ಚಾಗಿದ್ದರೆ ಮತ್ತು ಉತ್ತಮ ವೇತನವಿದ್ದಲ್ಲಿ, ಅಧಿಕ ಸಾಲ ಮೊತ್ತ ಪಡೆದುಕೊಳ್ಳುವ ಅವಕಾಶಗಳು ಹೆಚ್ಚಾಗಿರುತ್ತವೆ.
ಮರುಪಾವತಿಗಾಗಿ ಸೆಟ್ ಮಾಡಿರುವ ಇಎಂಐ ಮೊತ್ತವನ್ನು ಉಪಯೋಗಿಸಿ ಗರಿಷ್ಠ ಸಾಲ ಮೊತ್ತವನ್ನು ಲೆಕ್ಕ ಹಾಕಬಹುದು. ಇಂಎಐ ಗಳ ಶ್ರೇಣಿ ಮತ್ತು ಲೆಕ್ಕಾಚಾರಗಳನ್ನು ಪರಿಶೀಲಿಸಲು ನೀವು
ಇಎಂಐ ಕ್ಯಾಲುಕ್ಯುಲೇಟರ್ ಅಥವಾ ವೈಯಕ್ತಿಕ ಸಾಲ ಅರ್ಹತಾ ಕ್ಯಾಲುಕ್ಯೇಟರ್ ಅನ್ನು ನಿಖರ ಫಲಿತಾಂಶಗಳಿಗಾಗಿ ಉಪಯೋಗಿಸಬಹುದು.
ರೂ. 30,000 ವೇತನದೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಇರುವ ಅರ್ಹತಾ ಮಾನದಂಡಗಳು ಯಾವುವು?
ವೈಯಕ್ತಿಕ ಸಾಲ ಅರ್ಹತೆಯ ವಿಷಯ ಬಂದಾಗ, ವ್ಯಕ್ತಿಯ ಮಾಸಿಕ ಆದಾಯ ಮಹತ್ವದ್ದೆನಿಸುತ್ತದೆ. ವೈಯಕ್ತಿಕ ಸಾಲಗಳಿಗಾಗಿ ವಿಭಿನ್ನ ಸಾಲದಾತರು ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತಾರೆ.