ರೂ. 15,000 ವೇತನದೊಂದಿಗೆ ಒಂದು ತತ್ ಕ್ಷಣ ವೈಯಕ್ತಿಕ ಸಾಲ ಸಂಬಂಧಿತ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ:
ಸಣ್ಣ ನಗದು ಸಾಲಗಳು
ರೂ. 50,000 ದಿಂದ 1.5 ಲಕ್ಷ ರೂಪಾಯಿ ನಡುವಿನ ಸಣ್ಣ ನಗದು ಸಾಲಗಳು ತತ್ ಕ್ಷಣ ಸಾಲ ಆಪ್ ಗಳ ಮೂಲಕ, ಸಾಲಪಡೆಯುವ ವ್ಯಕ್ತಿ ಒಂದು ವೇಳೆ ವ್ಯಾಪಾರಕ್ಕೆ ಹೊಸಬನಾಗಿದ್ದರೂ ಕೂಡಾ, ಸುಲಭವಾಗಿ ಅನುಮೋದನೆಯಾಗುತ್ತದೆ. ರೂ. 15,000 ವೇತನವಿದ್ದಲ್ಲಿ, ಸುಲಭ ಇಎಂಐ ಗಳಲ್ಲಿ ಸಣ್ಣ ನಗದು ಸಾಲಗಳನ್ನು ಮರುಪಾವತಿ ಮಾಡುವುದು ಕೂಡಾ ಸುಲಭ.
ಮೇಲಾಧಾರ ಮುಕ್ತ
ತತ್ ಕ್ಷಣ ವೈಯಕ್ತಿಕ ಸಾಲಗಳಿಗೆ ಗ್ಯಾರಂಟರ್ ಅಥವಾ ಸಾಲದ ಪ್ರತಿಯಾಗಿ ಆಸ್ತಿಯ ಅಗತ್ಯ ಇರುವುದಿಲ್ಲ. ಸಾಲ ಮೊತ್ತ ಸೀಮಿತವಾಗಿರುವುದರಿಂದ ಮತ್ತು ಸಾಲಪಡೆಯುವ ವ್ಯಕ್ತಿಯ ಆದಾಯ ಸ್ಲ್ಯಾಬ್ 15,000 ರೂಪಾಯಿಯಿಂತ ಆರಂಭವಾಗುವುದರಿಂದ, ತುರ್ತು ಸಮಯದಲ್ಲಿ ತ್ವರಿತವಾಗಿ ಹಣ ಸಹಾಯ ಪಡೆದುಕೊಳ್ಳುವುದಕ್ಕೆ ಮೇಲಾಧಾರ ಮುಕ್ತ ವೈಯಕ್ತಿಕ ಸಾಲ ಒಂದು ಉತ್ತಮ ಆಯ್ಕೆಯಾಗಿದೆ.
ಭದ್ರತೆ
ಇದೊಂದು ಭದ್ರತೆಯುಳ್ಳ ಡಿಜಿಟಲ್ ವೇದಿಕೆಯಾಗಿದ್ದು, ವೈಯಕ್ತಿಕ ವಿವರಗಳನ್ನು ಮತ್ತು ಕನಿಷ್ಠ ವೇತನದ ಆದಾಯ ಪುರಾವೆಗಳನ್ನು ಸಲ್ಲಿಸಲು ನೀವು ಇದನ್ನು ನಂಬಬಹುದಾಗಿದೆ.
ಕಾಗದರಹಿತ ದಾಖಲೆ ಸಲ್ಲಿಕೆ
ಕಾಗದ ರಹಿತ ಫಾರ್ಮಾಟ್ ನಲ್ಲಿ ಡಿಜಿಟಲ್ ಕೆವೈಸಿ ಪರಿಶೀಲನೆ ಮತ್ತು ಆದಾಯ ಪರಿಶೀಲನೆಯ ಕಾರಣದಿಂದಾಗಿ ಒಂದು ಗಣನೀಯ ಪ್ರಮಾಣದ ಸಮಯದ ಉಳಿತಾಯವಾಗುತ್ತದೆ. ರೂ.15,000 ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪಡೆಯುವ ಸಾಲ ಪಡೆಯುವ ವ್ಯಕ್ತಿಗಳು, ತಮ್ಮ ವೇತನ ಸ್ಲಿಪ್/ಬ್ಯಾಂಕ್ ಸ್ಟೇಟ್ಮೆಂಟ್ ಸಲ್ಲಿಸಬೇಕಾಗುತ್ತದೆ.
ಹೀರೋಫಿನ್‌ಕಾರ್ಪ್ ನಲ್ಲಿ ರೂ. 15,000 ವೇತನದೊಂದಿಗೆ ತತ್ ಕ್ಷಣದ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
ಸಾಲ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಲು ಕೆಲವು ಸರಳ ಹಂತಗಳನ್ನು ಪೂರ್ಣಗೊಳಿಸಿ:
1. ಅಗತ್ಯ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಪಿನ್ ಕೋಡ್
2. ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ನಿಮ್ಮ ಇಚ್ಛೆಯ ಇಎಂಐ ನಿಗದಿ ಮಾಡಿಕೊಳ್ಳಿ
3. ಒಂದು ಭದ್ರತಾ ಕೋಡ್ ಉಪಯೋಗಿಸಿ ಕೆವೈಸಿ ವಿವರಗಳ ಕಾಗದ ರಹಿತ ಪರಿಶೀಲನೆ
4. ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ; ಕ್ರೆಡೆನ್ಷಿಯಲ್ ಗಳನ್ನು ಎಂದಿಗೂ ಸಂಗ್ರಹ ಮಾಡುವುದಿಲ್ಲ
5. ನಿಮಿಷಗಳಲ್ಲಿ ತತ್ ಕ್ಷಣ ಸಾಲ ಅನುಮೋದನೆಯಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಕನಿಷ್ಠ ಮಾಸಿಕ ಆದಾಯ ರೂ. 15,000 ಹೊಂದಿರುವ ವೇತನ ಸಹಿತ ಮತ್ತು ಸ್ವ-ಉದ್ಯೋಗಿಗಳಾಗಿರುವವರು ಇಬ್ಬರೂ ಕೂಡಾ ಹೀರೋಫಿನ್‌ಕಾರ್ಪ್ನ ಲ್ಲಿ ಒಂದು ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ತತ್ ಕ್ಷಣದ ಸಾಲಗಳು ಭದ್ರತೆ ರಹಿತ ಸಾಲಗಳಾಗಿರುತ್ತವೆ ಮತ್ತು ಯಾವುದೇ ಗ್ಯಾರಂಟಿ ಅಗತ್ಯವಿಲ್ಲದ ಕಾರಣ ಯಾವುದೇ ಮೇಲಾಧಾರ ಬೇಕಾಗುವುದಿಲ್ಲ.
ರೂ. 15,000 ವೇತನದೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಇರುವ ಅರ್ಹತಾ ಮಾನದಂಡಗಳು ಯಾವುವು?
ವೈಯಕ್ತಿಕ ಸಾಲ ಅರ್ಹತೆಯ ವಿಷಯಕ್ಕೆ ಬಂದಾಗ, ಮಾಸಿಕ ಆದಾಯ ಎನ್ನುವುದು ಮಹತ್ವದ್ದಾಗಿರುತ್ತದೆ. ವೈಯಕ್ತಿಕ ಸಾಲಕ್ಕಾಗಿ ವಿಭಿನ್ನ ಸಾಲದಾತರು ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತಾರೆ.
15000 ವೇತನದೊಂದಿಗಿನ ವೈಯಕ್ತಿಕ ಸಾಲ ಅರ್ಜಿಗಾಗಿ ಈ ಕೆಳಗಿನ ಅರ್ಹತಾ ಮಾನದಂಡ ಪೂರ್ಣಗೊಳಿಸಿ.
- ಭಾರತೀಯ ಪೌರತ್ವದ ಪುರಾವೆ
- ಆದಾಯ ಪುರಾವೆಗಳಂತೆ ಹಿಂದಿನ ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ವೇತನ ಸ್ಲಿಪ್
- ಅರ್ಜಿದಾರರ ವಯಸ್ಸಿನ ಅರ್ಹತಾ ಮಾನದಂಡವು 21 – 58 ರ ಶ್ರೇಣಿಯಲ್ಲಿರುತ್ತದೆ
- ನೀವು ವೇತನ ಪಡೆಯುವವರಾಗಿರಬೇಕು ಅಥವಾ ಸ್ವಉದ್ಯೋಗಿ/ವ್ಯಾಪಾರಿ ಆಗಿರಬೇಕು
- ನೀವು ಖಾಸಗಿ/ಅಥವಾ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವವರಾಗಿರಬೇಕು
- ಸಾಲದಾತರು ನಿಗದಿಪಡಿಸಿರುವ ಮಾನದಂಡವನ್ನು ನಿಮ್ಮ ಕ್ರೆಡಿಟ್ ಇತಿಹಾಸ ಪೂರೈಸಬೇಕು. ವಿಭಿನ್ನ ಸಾಲದಾತರು ತಮ್ಮ ಪ್ರಮಾಣಗಳಿಗೆ ಅನುಗುಣವಾಗಿ ವಿಭಿನ್ನ ಬಾರ್ ಗಳನ್ನು ನಿಗದಿ ಪಡಿಸುವುದರಿಂದ ಕ್ರೆಡಿಟ್ ಸ್ಕೋರ್ ಕೂಡಾ ಭಿನ್ನವಾಗಿರಬಹುದು
ಕಡಿಮೆ ವೇತನ ವೈಯಕ್ತಿಕ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು
ನಿಮ್ಮ ವೇತನ 15000 ರೂಪಾಯಿ ಆಗಿದ್ದರೂ, ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕಾಗಿ ಅಗತ್ಯತೆಯನ್ನು ತಪ್ಪಿಸಿಕೊಳ್ಳುವುದು ಕಷ್ಟ. ಅಂತಹ ಪರಿಸ್ಥಿತಿಗಳಲ್ಲಿ, ಕಡ್ಡಾಯ ದಾಖಲೆಗಳ ಸರಿಯಾದ ಸೆಟ್ ಸಲ್ಲಿಕೆ ಮಾಡುವ ಮೂಲಕ ನಿಮ್ಮ ಸಾಲ ಅನುಮೋದನೆ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ.
ತತ್ ಕ್ಷಣ ಸಾಲ ಆಪ್ ಗಳು ಕಾಗದರಹಿತ ಪರಿಶೀಲನಾ ವಿಧಾನಗಳನ್ನು ಅನುಸರಿಸುವುದರಿಂದ, ದಯವಿಟ್ಟು ಸಾಲ ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಈ ಕೆಳಗಿನವುಗಳನ್ನು ಕೈಗೆ ಸಿಗುವಂತೆ ಇರಿಸಿಕೊಳ್ಳಿ
- ವೈಯಕ್ತಿಕ ಗುರುತಿಗಾಗಿ ಮತ್ತು ವಿಳಾಸ ಪುರಾವೆ ಪರಿಶೀಲನೆಗಾಗಿ ನೀವು ಕೆವೈಸಿ ವಿವರಗಳನ್ನು ಸಲ್ಲಿಸಬೇಕಾಗುತ್ತದೆ (ಆಧಾರ್ ಕಾರ್ಡ್/ಪಾಸ್ ಪೋರ್ಟ್/ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ)
- ನಿಮ್ಮ ಪ್ರಸಕ್ತ ಆದಾಯ ಮತ್ತು ಮರುಪಾವತಿಗೆ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವುದಕ್ಕಾಗಿ ಸಲ್ಲಿಸಬೇಕಾದ ಹಣಕಾಸು ದಾಖಲೆಗಳಲ್ಲಿ ಕಳೆದ 5 ತಿಂಗಳುಗಳ ವೇತನ ಸ್ಲಿಪ್/ಬ್ಯಾಂಕ್ ಸ್ಟೇಟ್ಮೆಂಟ್ಸ್ ಅಥವಾ ಇತ್ತೀಚಿನ ಬ್ಯಾಂಕ್ ವಹಿವಾಟಿನ ಸ್ಲಿಪ್ ಸೇರಿರುತ್ತವೆ.
- ಹೀರೋಫಿನ್‌ಕಾರ್ಪ್ ಮೂಲಕ 1,50,000 ರೂಪಾಯಿವರೆಗೆ ಅಪಾಯ-ಮುಕ್ತ ಸಾಲ ಪಡೆದುಕೊಳ್ಳಿ ಮತ್ತು 1 ರಿಂದ 2 ವರ್ಷಗಳ ಅನುಕೂಲಕರ ಅವಧಿಯಲ್ಲಿ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಪಾವತಿ ಮಾಡಿ.
ಪ್ರ.1. ನನ್ನ ವೇತನ ರೂ. 15,000 ಇದ್ದಲ್ಲಿ ನಾನು ಪಡೆದುಕೊಳ್ಳಬಹುದಾದ ವೈಯಕ್ತಿಕ ಸಾಲ ಎಷ್ಟು?
ಉತ್ತರ: ಸಾಮಾನ್ಯವಾಗಿ ರೂ. 15,000 ವೇತನವು ಕಡಿಮೆ-ವೇತನದ ಸಾಲಗಾರರ ಗುಂಪಿನ ವರ್ಗದ ಅಡಿಯಲ್ಲಿ ಬರುತ್ತದೆ. ಆದ್ದರಿಂದ, ರೂ. 15,000 ದಿಂದ ಆರಂಭವಾಗುವ ವೇತನ ಪಡೆಯುವ ಸಾಲಗಾರನು ಗರಿಷ್ಠ 1.5 ಲಕ್ಷದ ಸಾಲದ ಮೊತ್ತಕ್ಕೆ ಅನುಮೋದನೆ ಪಡೆಯಬಹುದು.
ಪ್ರ.2. ರೂ. 15,000 ವೇತನಗಳಿಗೆ ಯಾವ ಬ್ಯಾಂಕ್ ವೈಯಕ್ತಿಕ ಸಾಲಗಳನ್ನು ನೀಡುತ್ತದೆ?
ಉತ್ತರ :ಎಲ್ಲಾ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಮತ್ತು ತತ್ ಕ್ಷಣ ವೈಯಕ್ತಿಕ ಸಾಲ ಸೌಲಭ್ಯಗಳನ್ನು ಒದಗಿಸುವ ಎನ್ ಬಿ ಎಫ್ ಸಿ ಗಳು, ಸಾಲ ಪಡೆಯಲು ಬಯಸುವ ವೇತನಸಹಿತ ವ್ಯಕ್ತಿಗಳಿಗೆ ಕನಿಷ್ಠ ರೂ. 15,000 ಅಥವಾ ಹೆಚ್ಚು ಮೊತ್ತದ ವೇತನ ಸ್ಲ್ಯಾಬ್ ಗಳಿಗೆ ವೈಯಕ್ತಿಕ ಸಾಲ ನೀಡುತ್ತವೆ.
ಪ್ರ.3. ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಕನಿಷ್ಠ ವೇತನ ಯಾವುದು?
ಉತ್ತರ ಕನಿಷ್ಠ ವೇತನ ಅರ್ಹತಾ ಮಾನದಂಡವು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ. ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಲೋನ್ ಆಪ್ ನೊಂದಿಗೆ, ವೈಯಕ್ತಿಕ ಸಾಲಕ್ಕಾಗಿ ಇರುವ ಕನಿಷ್ಠ ವೇತನ ರೂ. 15,000.
ಪ್ರ.4. ಮೊದಲ ತಿಂಗಳ ವೇತನದ ಆಧಾರದಲ್ಲಿ ನಾನು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದೇ?
ಉತ್ತರ: ಮೊದಲ ತಿಂಗಳಿನ ವೇತನದ ಆಧಾರದಲ್ಲಿ ವೈಯಕ್ತಿಕ ಸಾಲಕ್ಕೆ ಅನುಮೋದನೆ ಪಡೆದುಕೊಳ್ಳುವುದು ಕಷ್ಟ. ಏಕೆಂದರೆ, ಸಾಲದಾತರಿಗೆ ಕಡ್ಡಾಯ ದಾಖಲೆಯಂತೆ ಕನಿಷ್ಠ 6 ತಿಂಗಳುಗಳ ವೇತನ ಸ್ಲಿಪ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗುತ್ತದೆ.
ಪ್ರ.5. ಅತ್ಯಂತ ಕಡಿಮೆ ವೈಯಕ್ತಿಕ ಸಾಲ ಮೊತ್ತ ಯಾವುದು?
ಉತ್ತರ: ಇದು ಸಾಲದಾತ ಗುಂಪುಗಳಾದ್ಯಂತ ವಸ್ತುನಿಷ್ಠ ಆಯ್ಕೆ ಇದಾಗಿದೆ. ತಮ್ಮ ಅರ್ಹತಾ ಮಾನದಂಡ ಮತ್ತು ಆರಂಭಿಕ ಸಾಲ ಮೊತ್ತದ ಆಧಾರದ ಮೇಲೆ, ಸಾಲ ಪಡೆಯುವವರು ಕನಿಷ್ಠ ಸಾಲ ಪಡೆಯುವ ಮಿತಿಗಳನ್ನು ನಿಗದಿ ಪಡಿಸುತ್ತಾರೆ. ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲವು ರೂ. 50,000 ಯಿಂದ 1.5 ಲಕ್ಷದವರೆಗೆ ಎಷ್ಟಾದರೂ ಸಾಲ ಮೊತ್ತವನ್ನು ನೀಡುತ್ತದೆ.