ಅಲ್ಪಾವಧಿ ಸಾಲ
ಅಲ್ಪಾವಧಿ ಸಾಲ ಎನ್ನುವುದು, ತುರ್ತು ಸಾಲ ಅಗತ್ಯಗಳಿಗೆ ಬೆಂಬಲಿಸುವ ಹಣಕಾಸು ನೆರವಿನ ಒಂದು ವಿಧವಾಗಿದೆ. ಒಂದು ಹೊಸ ಸ್ಮಾರ್ಟ್ ಗ್ಯಾಜೆಟ್ ಖರೀದಿಯಿಂದ, ಬಾಕಿ ಸಾಲಗಳ ಪಾವತಿಯವರೆಗೂ ಅಲ್ಪಾವಧಿ ಸಾಲವು ಒಂದು ಸ್ಥಿರ ಆರ್ಥಿಕ ಸ್ಥಿತಿ ನಿರ್ವಹಣೆಗೆ ಸಹಾಯ ಮಾಡಬಲ್ಲದು. ಇತರ ಸಾಲಗಳಿಗೆ ಹೋಲಿಸಿದರೆ, ಅಲ್ಪಾವಧಿ ವೈಯಕ್ತಿಕ ಸಾಲವನ್ನು ಕಡಿಮೆ ಅವಧಿಗೆ ಅಂದರೆ ಸಾಧಾರಣವಾಗಿ ಒಂದು ವರ್ಷದ ಅವಧಿಗೆ ತೆಗೆದುಕೊಳ್ಳಲಾಗುತ್ತದೆ. ಸಾಲ ಪಡೆಯುವವರು ಅಲ್ಪಾವಧಿ ಸಾಲಗಳನ್ನು ಅವಲಂಬಿಸುವುದಕ್ಕೆ ಮುಖ್ಯ ಕಾರಣವೆಂದರೆ ಹಠಾತ್ ನಗದು ಅಗತ್ಯತೆಗಳು ಅಥವಾ ಹಣದ ಕೊರತೆಯ ಸಮತೋಲನ.
ತೆಗೆದುಕೊಂಡಿರುವ ಸಾಲ ಕಡಿಮೆ ಅವಧಿಯಾಗಿರುವುದರಿಂದ ಪಾವತಿಸಬೇಕಾದ ಇಎಂಐಗಳು ಕಡಿಮೆ ಮೊತ್ತದ್ದಾಗಿರುತ್ತವೆ ಮತ್ತು ಪಾವತಿಸಲು ಸುಲಭವಾಗಿರುತ್ತವೆ. ಈ ವೈಶಿಷ್ಟ್ಯದಿಂದಾಗಿ ದೀರ್ಘಾವಧಿ ಸಾಲಕ್ಕೆ ಹೋಲಿಸಿದರೆ ಅಲ್ಪಾವಧಿ ಸಾಲಗಳು ಹೆಚ್ಚು ಉಪಯುಕ್ತವೆನಿಸುತ್ತವೆ. ನೀವು ವಿವಿಧ ಹಣಕಾಸು ಸಂಸ್ಥೆಗಳ ಸಾಲ ಜಾಲತಾಣಗಳು, ತತ್ ಕ್ಷಣ ಸಾಲ ಆಪ್ ಗಳು, ಗ್ರಾಹಕ ಸಹಕಾರ ಇತ್ಯಾದಿ ಮೂಲಕ ಅಥವಾ ಖುದ್ದಾಗಿ ಶಾಖೆಗೆ ಭೇಟಿ ನೀಡುವ ಮೂಲಕ ಅಲ್ಪಾವಧಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ