I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಸಿಐಬಿಐಎಲ್ ಸ್ಕೋರ್ ಎನ್ನುವುದು ವ್ಯಕ್ತಿಯ ಸಾಲಯೋಗ್ಯತೆಯನ್ನು ಪ್ರತಿಬಿಂಬಿಸುತ್ತದೆ. ಇದೊಂದು ಮೂರು-ಅಂಕೆಗಳ ವಿಶಿಷ್ಠ ಸಂಖ್ಯೆಯಾಗಿದ್ದು, ಸಾಲ ವರದಿಯಲ್ಲಿ ನೀಡಲಾಗಿರುವ ಸಾಲ ಇತಿಹಾಸ ಮತ್ತು ವಿವರಗಳನ್ನು ಪರಿಗಣಿಸಿ ಪಡೆಯಲಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 900 ಕ್ಕೆ ಸಮೀಪವಿದ್ದರೆ, ಸಾಲ ಅನುಮೋದನೆಯ ಸಾಧ್ಯತೆಗಳು ಅಧಿಕವಾಗಿರುತ್ತವೆ.
ಸಿಐಬಿಐಎಲ್ ಸ್ಕೋರ್ ನಾಲ್ಕು ಅಂಶಗಳ ಆಧಾರದಲ್ಲಿ ಕೆಲಸ ಮಾಡುತ್ತದೆ – ಪಾವತಿ ಇತಿಹಾಸ, ಸಾಲ ವಿಚಾರಣೆಗಳ ಸಂಖ್ಯೆ, ಸಾಲದ ಬಳಕೆ ಮತ್ತು ಪಡೆದುಕೊಳ್ಳಲಾಗಿರುವ ಸಾಲದ ವಿಧ. ನೀವು ಇಎಂಐಗಳ ಡಿಫಾಲ್ಟ್ ಮಾಡಿದ್ದರೆ, ಸಾಲಗಳ ಕುರಿತು ಪದೇ ಪದೇ ವಿಚಾರಣೆ ಮಾಡಿದ್ದರೆ, ಸಾಲದ ಬಳಕೆ ಪ್ರಮಾಣ ಅತ್ಯಂತ ಹೆಚ್ಚಾಗಿದ್ದರೆ, ಮತ್ತು ಭದ್ರತೆಸಹಿತ ಭದ್ರತೆ ರಹಿತ ಸಾಲಗಳು ಸಾಲದ ಹೊರೆಯನ್ನು ಹೆಚ್ಚಿಸಿದ್ದರೆ.
ಸಿಐಬಿಐಎಲ್ ಮೇಲೆ ಪರಿಣಾಮ ಬೀರುವ ಕೆಲವು ಮುಖ್ಯ ಅಂಶಗಳು – ಪ್ರಸಕ್ತ ಹೊಣೆಗಾರಿಕೆಗಳ ಹೆಚ್ಚಳ, ಸಾಲ ಬಳಕೆ ದರ ಶೇಕಡಾ 30 ಕ್ಕಿಂತ ಅಧಿಕ, ಸಾಲದ ಬಹು ನಿರಾಕರಣೆಗಳು ಮತ್ತು ಅಸ್ಥಿರ ಮರುಪಾವತಿ ಇತಿಹಾಸಗಳು ನಿಮ್ಮ ಸಿಐಬಿಐಎಲ್ ಸ್ಕೋರ್ ಅನ್ನು ಕಡಿಮೆ ಮಾಡುತ್ತವೆ.
ಸಾಲಗಾರನ ಮರುಪಾವತಿ ಸಾಮರ್ಥ್ಯವನ್ನು ತನಿಖೆ ಮಾಡಲು ಸಾಲದಾತರು ಸಿಐಬಿಐಎಲ್ ಸ್ಕೋರ್ ಪರಿಗಣಿಸುತ್ತಾರೆ. ಒಂದುವೇಳೆ ಸಿಐಬಿಐಎಲ್ ಸ್ಕೋರ್ 300 ಕ್ಕೆ ಸಮೀಪವಿದ್ದರೆ, ಅದು ಕಡಿಮೆ ಸಿಐಬಿಐಎಲ್ ಸ್ಕೋರ್ ಅನ್ನು ಪ್ರತಿಬಿಂಬಿಸುತ್ತದೆ ಮತ್ತು ಉತ್ಕೃಷ್ಟ ಸಾಲ ಸ್ಕೋರ್ ಹೊಂದಿರುವ ಸಾಲ ಅರ್ಹತಾ ಮಾನದಂಡದ ಮೇಲೆ ಪರಿಣಾಮ ಬೀರುತ್ತದೆ.
ಸಾಲ ಅನುಮೋದನೆ ವಿಷಯಕ್ಕೆ ಬಂದಾಗ, ಕಡಿಮೆ ಕ್ರೆಡಿಟ್ ಸ್ಕೋರ್ ಒಂದು ಅಡಚಣೆಯಾಗಬಹುದು. ಸಾಲಗಳ ಮೇಲೆ ಅತ್ಯುತ್ತಮ ಬಡ್ಡಿ ದರಗಳನ್ನು ಪಡೆಯುವುದರಿಂದ ನಿಮ್ಮನ್ನು ಕಡಿಮೆ ಕ್ರೆಡಿಟ್ ಸ್ಕೋರ್ ವಂಚಿತರನ್ನಾಗಿ ಮಾಡಬಹುದು, ಅಧಿಕ ಸಾಲ ಮೊತ್ತಗಳು ಮಂಜೂರಾಗುವುದಿಲ್ಲ ಮತ್ತು ಭದ್ರತೆಗಾಗಿ ಮೇಲಾಧಾರ ಅಗತ್ಯವಾಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಸಾಲಗಾರರಿಗೆ ಸಾಲ ಅನುಮೋದನೆ ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಸಾಲಗಾರನ ಕಡಿಮೆ ಸಿಐಬಿಐಎಲ್ ಸ್ಕೋರ್ ಇನ್ಸ್ ಟೆಂಟ್ ಸಾಲ ಅನುಮೋದನೆ ಸಮಯದಲ್ಲಿ ಪ್ರಶ್ನಾತೀತ ಅಂಶವಾಗುತ್ತದೆ. ಆದರೆ ಗಾಬರಿಯಾಗುವ ಅಥವಾ ಚಿಂತಿಸುವ ಅಗತ್ಯವಿಲ್ಲ. ಹಣಕಾಸು ಹವ್ಯಾಸಗಳಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಡಿಮೆ ಕ್ರೆಡಿಟ್ ಸ್ಕೋರ್ ಸುಧಾರಣೆ ಮಾಡಬಹುದು – ಸಕಾಲದಲ್ಲಿ ಬಾಕಿಗಳ ಮರುಪಾವತಿ, ಹಳೆಯ ಸಾಲಗಳನ್ನು ತೀರಿಸುವುದು, ಯಾವುದೇ ದೋಷಗಳಿದೆಯೇ ಎಂದು ಆಗಾಗ್ಗೆ ನಿಮ್ಮ ಕ್ರೆಡಿಟ್ ವರದಿಯನ್ನು ಪರೀಕ್ಷಿಸುವುದು, ವಿಳಂಬವಾಗುವುದನ್ನು ತಪ್ಪಿಸುವುದಕ್ಕಾಗಿ ಇಎಂಐಗಳಿಗಾಗಿ ಆಟೋ-ಡೆಬಿಟ್ ಆಯ್ಕೆಗೆ ಬದಲಾಗುವುದು. ಸಾಲಗಾರನೊಂದಿಗೆ ವೈಯಕ್ತಿಕ ಸಾಲಗಳನ್ನು ಜಂಟಿಯಾಗಿ ತೆಗೆದುಕೊಳ್ಳಬೇಡಿ.
ಕಡಿಮೆ ಕ್ರೆಡಿಟ್ ಸ್ಕೋರ್ ವಿಶೇಷವಾಗಿ ಒಟ್ಟು ಮೌಲ್ಯದಲ್ಲಿನ ಕುಸಿತದಿಂದಾಗಿ ಉಂಟಾಗುತ್ತದೆ. ನಿಮ್ಮ ಹೂಡಿಕೆಗಳು, ನಗದಿ, ಮನೆ ಸಾಲಗಳು ಇತ್ಯಾದಿಯಂತಹ ನಿಮ್ಮ ಆಸ್ತಿಗಳು ನಿಮ್ಮ ಒಟ್ಟು ಮೌಲ್ಯವಾಗಿರುತ್ತವೆ. ಗ್ರಾಹಕ ಉಪಭೋಗ್ಯ ಸಾಲಗಳು, ಎಕ್ಸ್ಟ್ರಾವೇಗೆಂಟ್ ರಜೆ ಸಾಲ ಅಥವಾ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುವ ಇತರ ಅನಗತ್ಯ ಸಾಲಗಳನ್ನು ಕಡಿಮೆ ಮಾಡಿ.
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಮುಖ್ಯವಾದ ಅಂಶವೆಂದರೆ ಕ್ರೆಡಿಟ್ ಕಾರ್ಡ್ ಬಳಕೆ. ಪ್ರತಿ ತಿಂಗಳೂ ಸಮಯಕ್ಕೆ ಸರಿಯಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಮತ್ತು ಸಾಲ ಇಎಂಐಗಳನ್ನು ಪಾವತಿ ಮಾಡುವುದು ಬಹಳ ಮುಖ್ಯ. ಸಿಐಬಿಐಎಲ್ ವಿಶ್ಲೇಷಣೆಯ ಪ್ರಕಾರ, ವಿಳಂಬ ಪಾವತಿಯು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು 100 ಅಂಕಗಳಷ್ಟು ಕಡಿಮೆ ಮಾಡಬಹುದು.
ದೀರ್ಘಕಾಲದ ಸಾಲಗಳು ಅಥವಾ ಬಾಕಿ ಇರುವ ಬಿಲ್ ಗಳೇನಾದರೂ ಇದ್ದಲ್ಲಿ, ಗ್ರೇಸ್ ಅವಧಿ ಮುಕ್ತಾಯವಾಗುವುದಕ್ಕೆ ಮುನ್ನ ಅವುಗಳನ್ನು ತೀರಿಸಬೇಕು. ತಪ್ಪಿದ ಪಾವತಿಗಳು ಮರುಕಳಿಸಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಸಾಲ ಮಂಜೂರಾತಿಯಲ್ಲಿ ಕ್ಲಿಷ್ಟತೆ ಉಂಟಾಗುತ್ತದೆ.
ಕ್ರೆಡಿಟ್ ವರದಿ ರೀಡಿಂಗ್ ಗಳನ್ನು ನೀವು ಆಗಿಂದಾಗ್ಗೆ ಟ್ರ್ಯಾಕ್ ಮಾಡದೇ ಇದ್ದಲ್ಲಿ ಕ್ರೆಡಿಟ್ ಸ್ಕೋರ್ ಪ್ರಭಾವಕ್ಕೊಳಗಾಗಬಹುದು. ಪ್ರಸಕ್ತ ವಿವರಗಳೊಂದಿಗೆ ಅಪ್ಡೇಟ್ ಮಾಡದೇ ಇದ್ದಲ್ಲಿ, ನಿಮ್ಮ ಕ್ರೆಡಿಟ್ ವರದಿಗಳಲ್ಲಿ ತಪ್ಪುಗಳಾಗಬಹುದು ಮತ್ತು ತಪ್ಪು ವರದಿಯಾಗಬಹುದು.
ಕಡಿಮೆ ಸಿಐಬಿಐಎಲ್ ಸ್ಕೋರ್ ಎನ್ನುವುದು ವೈಯಕ್ತಿಕ ಸಾಲ ಅನುಮೋದನೆಯ ಸಾಧ್ಯತೆಗಳನ್ನು ಬಹುತೇಕ ಶೂನ್ಯವಾಗಿಸುತ್ತದೆಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ಸಾಲಗಾರನಿಗೆ ಇರಬಹುದಾದ ಒಂದೇ ಆಯ್ಕೆ ಎಂದರೆ, ಸಿಐಬಿಐಎಲ್ ಸುಧಾರಣೆಗಾಗಿ ಮಾರ್ಗಗಳಿಗಾಗಿ ನೋಡುವುದು ಮತ್ತು ಇಎಂಐಗಳ ಸಕಾಲ ಪಾವತಿಯ ಮೂಲಕ ಸಾಲದಾತರ ವಿಶ್ವಾಸ ಗಳಿಸುವುದು. ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸುವಾಗ ನಿರಾಕರಣೆಗಳ ಪುನರಾವರ್ತನೆಯನ್ನು ನೀವು ಎದುರಿಸದಂತೆ ಮಾಡುತ್ತದೆ.
ನಿಮ್ಮ ಸಿಐಬಿಐಎಲ್ ಸ್ಕೋರ್ ಶೂನ್ಯವಾಗಿದ್ದರೂ, ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಇಂದು ಸಾಲದಾತರಿಂದ ಸಾಲದಾತರನ್ನು ಅವಲಂಬಿಸಿರುತ್ತದೆ. ಸಿಐಬಿಐಎಲ್ ಸ್ಕೋರ್ ಇಲ್ಲದಂತೆ ವೈಯಕ್ತಿಕ ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸುತ್ತಿರುವಾಗ ನೀವು ಸಾಲದಾತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಂತಹ ಸಂದರ್ಭಗಳಲ್ಲಿ, ನಿಮಗೆ ಉದ್ಯೋಗ ಭದ್ರತೆ ಇರಬೇಕು ಅಥವಾ ನೀವು ಅಧಿಕ-ಆದಾಯ ಗುಂಪಿನ ಅಡಿಯಲ್ಲಿ ಬರಬೇಕು. ತಿಂಗಳಾಂತ್ಯದಲ್ಲಿ ನೀವು ನಿಮ್ಮ ಹಣಕಾಸು ವಹಿವಾಟನ್ನು ಯಾವರೀತಿ ನಿರ್ವಹಿಸುತ್ತೀರಿ ಎನ್ನುವುದು ಕೂಡಾ, ಅಧಿಕ ಕ್ರೆಡಿಟ್ ಸ್ಕೋರ್ ಇಲ್ಲದಂತೆಯೇ ಸಾಲ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಲ್ಲಾ ಅಂಶಗಳು ನಿಮ್ಮಲ್ಲಿದ್ದರೆ, ನಿಮ್ಮ ಹಿನ್ನೆಲೆ ಮತ್ತು ಉದ್ಯೋಗ/ವ್ಯಾಪಾರ ಸ್ಥಿರತೆಯ ಆಧಾರದ ಮೇಲೆ ವೈಯಕ್ತಿಕ ಸಾಲ ಪಡೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಗಮನಿಸಿ ನೀವು 21-58 ವರ್ಷ ವಯೋಮಾನದ ಗುಂಪಿನವರಾಗಿದ್ದರೆ, ಮತ್ತು 15,000 ರೂಪಾಯಿಗಳ ಕನಿಷ್ಠ ಮಾಸಿಕ ಆದಾಯ ಹೊಂದಿದ್ದರೆ, ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ನೀವು ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಅಥವಾ ಸಭೆಗಳು ಅಗತ್ಯವಿರುವುದಿಲ್ಲ. ವೈಯಕ್ತಿಕ ಸಾಲಕ್ಕಾಗಿ ಇಂದೇ ಅರ್ಜಿ ಸಲ್ಲಿಸಿ.
ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ ಅತ್ಯಂತ ಸರಳವಾಗಿದೆ, ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ0ದ