ತತ್ ಕ್ಷಣ ವೈಯಕ್ತಿಕ ಸಾಲದ ವೈಶಿಷ್ಟ್ಯಗಳಾವುವು
ವೈಯಕ್ತಿಕ ಸಾಲ ಸೌಲಭ್ಯ ತತ್ ಕ್ಷಣ ಕೆಲಸ ಮಾಡುತ್ತದೆ ಮತ್ತು ತುರ್ತಾಗಿ ರೂ. 50,000 ಸಾಲ ಪಡೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ರೂ. 50,000 ದ ಸಾಲ ಅಲ್ಪಾವಧಿ ಸಾಲ ವರ್ಗದ ಅಡಿಯಲ್ಲಿ ಬರುತ್ತದೆ ಮತ್ತು ಅದು ಸೆಕ್ಯೂರಿಟಿ ರಹಿತವಾಗಿ ಮತ್ತು ಮೇಲಾಧರ ರಹಿತವಾಗಿರುತ್ತದೆ.
ತತ್ ಕ್ಷಣದ ವೈಯಕ್ತಿಕ ಸಾಲದಿಂದ ಈ ಕೆಳಗಿನ ಪ್ರಯೋಜನಗಳನ್ನು ಪಡೆದುಕೊಳ್ಳಿ
- ರೂ. 50,000 ಗಳಷ್ಟು ಕಡಿಮೆ ಮೊತ್ತಕ್ಕಾಗಿ ಸಾಲ ಪಡೆದುಕೊಳ್ಳಿ
- ಕನಿಷ್ಠ ದಾಖಲೆಗಳ ಸಲ್ಲಿಕೆಯೊಂದಿಗೆ ಸಾಲ ಅನುಮೋದನೆ ಪಡೆದುಕೊಳ್ಳಿ
- ಮುಂಗಡವಾಗಿ ಫೈನಾನ್ಸ್ ಹೊಂದಾಣಿಕೆಗೆ ಸುಲಭವಾಗುವಂತೆ ಇಎಂಇ (ಸಮಾನ ಮಾಸಿಕ ಕಂತು) ಗಾಗಿ ಆಯ್ಕೆ ಮಾಡಿಕೊಳ್ಳಿ
- ಪ್ರಯಾಣ, ರಜೆ, ವಿವಾಹ, ಶಿಕ್ಷಣ, ಮತ್ತು ವೈದ್ಯಕೀಯ ತುರ್ತು ವೈದ್ಯಕೀಯ ಪರಿಸ್ಥಿತಿಗಳೇನಾದರೂ ಇದ್ದರೆ, ಇವುಗಳೆಲ್ಲವೂ ತತ್ ಕ್ಷಣ ಸಾಲಗಳ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆ
- ಬಡ್ಡಿ ದರಗಳು, ಪ್ರಾಸೆಸಿಂಗ್ ದರಗಳು, ಮುಂಗಡ-ಪಾವತಿ/ಫೋರ್ ಕ್ಲೋಷರ್, ಇತ್ಯಾದಿಗಳನ್ನು ಹೋಲಿಕೆ ಮಾಡಿ ನೋಡಿ. ಇವುಗಳೆಲ್ಲವೂ ಸಾಲದ ಅಸಲು ಮೊತ್ತದ ಮೇಲೆ ಪ್ರಭಾವ ಬೀರುತ್ತವೆ
ನೀವು
ಸಣ್ಣ ಸಾಲ ಮೊತ್ತಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಕೂಡಾ, ನಿಖರವಾಗಿ ಅಗತ್ಯವಿರುವ ಸಾಲ ಮೊತ್ತವೆಷ್ಟು ಎಂದು ತಿಳಿಯಲು ನಿಮ್ಮ ಅಗತ್ಯತೆಗಳನ್ನು ಅಂದಾಜಿಸುವುದು ಉತ್ತಮ. ಪ್ರಸಕ್ತ ಯಾವುದಾದರೂ ಸಾಲ ಖಾತೆಗಳನ್ನು ನೀವು ಹೊಂದಿದ್ದರೆ, ಅದಕ್ಕೆ ಅನುಗುಣವಾಗಿ ಇಎಂಐ ಗಳನ್ನು ಹೊಂದಾಣಿಕೆ ಮಾಡಿ. ಸಾಲ ಬಾಕಿಗಳ ಪಾವತಿಯಲ್ಲಿನ ವಿಳಂಬವು ನಿಮ್ಮ ಸಾಲ ಸ್ಕೋರ್ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಸಾಲ ಕೋರಿಕೆ ಅನುಮೋದನೆಯಾಗುವ ಸಾಧ್ಯತೆಗಳನ್ನು ಹೆಚ್ಚಿಸುವುದಕ್ಕಾಗಿ ಅಧಿಕ ಸಾಲ ಸ್ಕೋರ್ ನಿರ್ವಹಿಸುವುದಕ್ಕೆ ಪ್ರಯತ್ನಿಸಿ.
ರೂ. 50,000 ವೈಯಕ್ತಿಕ ಸಾಲಕ್ಕಾಗಿ ಬಡ್ಡಿ ದರ ಮತ್ತು ಇತರ ದರಗಳು ಯಾವುವು
ರೂ. 50,000 ಸಾಲಕ್ಕಾಗಿ ನಿಮ್ಮ ಮಾಸಿಕ ಕಂತಿನ ಮೊತ್ತವನ್ನು ಸಮಾನವಾಗಿ ವಿಭಜಿಸಲು ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ. ಇಎಂಐ ಕ್ಯಾಲುಕ್ಯುಲೇಟರ್ ನಿಮಗೆ ಬಡ್ಡಿಯ ಶೇಕಡಾವಾರು ಮೇಲೆ ಸ್ಪಷ್ಟತೆ ನೀಡುತ್ತದೆ ಮತ್ತು ಅವಧಿಯನ್ನು ತಿಂಗಳುಗಳಲ್ಲಿ ತಿಳಿಸುತ್ತದೆ ಮತ್ತು ರೂ. 50,000 ವೈಯಕ್ತಿಕ ಸಾಲಕ್ಕಾಗಿ ನೀವು ನಿಮಗೆ ಸರಿಹೊಂದುವ ಇಎಂಐ ಆಯ್ಕೆ ಮಾಡಿಕೊಳ್ಳಬಹುದು.
ಇಎಂಐ ಕ್ಯಾಲುಕ್ಯೇಟರ್ ನಲ್ಲಿ ನೀವು ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರ ಆಯ್ಕೆ ಮಾಡಿಕೊಂಡ ನಂತರ ಕೇವಲ ಕೆಲವು ಸೆಕೆಂಡುಗಳ ಕಾಲ ಹಿಡಿಯುತ್ತದೆ. ರೂ. 50,000 ದ ಸಾಲ ಅರ್ಜಿಯ ಆರಂಭಿಕ ಹಂತದಲ್ಲಿಯೇ ಸಾಲಗಾರನಿಂದ ಪ್ರಾಸೆಸಿಂಗ್ ಶುಲ್ಕ, ತೆರಿಗೆ ಇತ್ಯಾದಿ ಇತರ ದರಗಳ ಕುರಿತು ಸ್ಪಷ್ಟನೆ ಪಡೆದುಕೊಳ್ಳಬೇಕು.
ರೂ. 50,000 ವೈಯಕ್ತಿಕ ಸಾಲಕ್ಕಾಗಿ ಬಡ್ಡಿ ದರ ಮತ್ತು ಇತರ ದರಗಳು ಯಾವುವು
ರೂ. 50,000 ದ ವೈಯಕ್ತಿಕ ಸಾಲವನ್ನು ತತ್ ಕ್ಷಣದಲ್ಲಿ, ಯಾವುದೇ ಸೆಕ್ಯೂರಿಟಿ ಅಥವಾ ಗ್ಯಾರಂಟರ್ ಇಲ್ಲದಂತೆಯೇ ಪಡೆದುಕೊಳ್ಳುವುದು ಬಹಳ ಸುಲಭ. ರೂ. 50,000 ದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ಇರುವ ಅರ್ಹತಾ ಮಾನದಂಡ ಗೊಂದಲ ಮುಕ್ತವಾಗಿರುತ್ತದೆ. ತತ್ ಕ್ಷಣದ ಸಾಲ ಬೇಕಾಗಿರುವ ಸಾಲ ಪಡೆಯುವ ವ್ಯಕ್ತಿಗಳು 21 – 58 ವರ್ಷ ವಯೋಮಾನದವಾಗಿರಬೇಕು, ಒಂದು ಸ್ಥಿರ ಉದ್ಯೋಗ/ವ್ಯಾಪಾರ (ವೇತನ ಸಹಿತ ಅಥವಾ ಸ್ವ ಉದ್ಯೋಗಿ) ಇರಬೇಕು ಮತ್ತು ಪ್ರತಿ ತಿಂಗಳಿಗೆ ಕನಿಷ್ಠ 15,000 ವೇತನ ಪಡೆಯುತ್ತಿರಬೇಕು.
ಇದು ಅವರ ವೃತ್ತಿ ಸ್ಥಿರತೆಯನ್ನು ತೋರಿಸುತ್ತದೆ ಮತ್ತು ಸಾಲ ಪಡೆಯುವ ವ್ಯಕ್ತಿ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವ ಸಾಮರ್ಥ್ಯ ಹೊಂದಿದ್ದಾನೆಂದು ಖಾತರಿ ಪಡಿಸುತ್ತದೆ. ಸಾಲ ರೂ. 50,000 ಇರಲಿ ಅಥವಾ ಅದಕ್ಕಿಂತ ಹೆಚ್ಚೇ ಇರಲಿ, ಸಾಲ ಅನುಮೋದನೆಯ ಸಾಧ್ಯತೆಗಳನ್ನು ಖಚಿತ ಪಡಿಸುವ ಒಂದು ಮುಖ್ಯ ಸೇವಾ ವೈಶಿಷ್ಟ್ಯವೇ ಅರ್ಹತಾ ಮಾನದಂಡ.
ತತ್ ಕ್ಷಣ ರೂ. 50,000 ಸಾಲಕ್ಕಾಗಿ ಹೀರೋಫಿನ್‌ಕಾರ್ಪ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು
ಸಾಲಪಡೆಯುವವರು ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಮೂಲಕ ರೂ. 50000 ತತ್ ಕ್ಷಣ ಸಾಲ ಪಡೆದುಕೊಳ್ಳಬಹುದಾಗಿದೆ. ನೀವು ಸರಿಯಾಗಿ ಅರ್ಹತಾ ಮಾನದಂಡದ ಅಡಿಯಲ್ಲಿ ಬಂದರೆ, ಮತ್ತು ಸರಿಯಾದ ದಾಖಲೆಗಳನ್ನು ಹೊಂದಿದ್ದರೆ, 24 ಗಂಟೆಗಳೊಳಗಾಗಿ ರೂ. 50,000 ದ ತತ್ ಕ್ಷಣ ಸಾಲ ಅನುಮೋದನೆಯಾಗುತ್ತದೆ ಮತ್ತು ವಿತರಣೆಯಾಗುತ್ತದೆ. ಇಎಂಐ ಗಳನ್ನು ಒಂದು ವರ್ಷದಲ್ಲಿ ಅನುಕೂಲಕರವಾಗಿ ಪಾವತಿಸಬಹುದಾದ್ದರಿಂದ ರೂ. 50,000 ತತ್ ಕ್ಷಣ ಸಾಲ ಪಡೆದುಕೊಳ್ಳುವುದು ಹೊರೆಯೇನಲ್ಲ.
ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಸಾಲ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕಾಗಿ ಕೆಲವು ಸರಳ ಹಂತಗಳನ್ನು ಅನುಸರಿಸಿ:
- ಅಗತ್ಯ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಪಿನ್ ಕೋಡ್
- ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ನಿಮ್ಮ ಇಚ್ಛೆಯ ಇಎಂಐ ನಿಗದಿ ಮಾಡಿಕೊಳ್ಳಿ
- ಒಂದು ಭದ್ರತಾ ಕೋಡ್ ಉಪಯೋಗಿಸಿ ಕೆವೈಸಿ ವಿವರಗಳ ಕಾಗದ ರಹಿತ ಪರಿಶೀಲನೆ
- ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ; ಕ್ರೆಡೆನ್ಷಿಯಲ್ ಗಳನ್ನು ಎಂದಿಗೂ ಸಂಗ್ರಹ ಮಾಡುವುದಿಲ್ಲ
- ನಿಮಿಷಗಳಲ್ಲಿ ತತ್ ಕ್ಷಣ ಸಾಲ ಅನುಮೋದನೆಯಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ಕನಿಷ್ಠ ರೂ. 15,000 ಮಾಸಿಕ ಆದಾಯ ಇರುವಂತಹ ವೇತನ ಸಹಿತ ಮತ್ತು ಸ್ವ ಉದ್ಯೋಗಿಗಳಾಗಿರುವವರು ಇಬ್ಬರೂ ಕೂಡಾ
ಹೀರೋಫಿನ್‌ಕಾರ್ಪ್ ನಲ್ಲಿ ಒಂದು ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ತತ್ ಕ್ಷಣದ ಸಾಲಗಳು ಭದ್ರತೆ ರಹಿತ ಸಾಲಗಳಾಗಿರುತ್ತವೆ ಮತ್ತು ಯಾವುದೇ ಗ್ಯಾರಂಟಿ ಅಗತ್ಯವಿಲ್ಲದ ಕಾರಣ ಯಾವುದೇ ಮೇಲಾಧಾರ ಬೇಕಾಗುವುದಿಲ್ಲ.
ಆದ್ದರಿಂದ, ಇಂದಿನ ದಿನಗಳಲ್ಲಿ ಸಣ್ಣ ನಗದು ಸಾಲಗಳಿಂದ ರೂ. 50,000 ಅಥವಾ ಅಧಿಕ ಸಾಲ ಪಡೆದುಕೊಳ್ಳುವುದು ಈಗ ಬಹಳ ಸುಲಭವೆಂದು ಸ್ಪಷ್ಟವಾಗಿದೆ. ಸುರಕ್ಷಿತ ಕ್ರೆಡಿಟ್ ಸೌಲಭ್ಯವನ್ನು ತತ್ ಕ್ಷಣವೇ ಒದಗಿಸುವಂತಹ ಎಲ್ಲಾ ಡಿಜಿಟಲ್ ವೈಯಕ್ತಿಕ ಸಾಲ ವೇದಿಕೆಗಳಿಗೂ ಧನ್ಯವಾದ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಪ್ರ.1. ಒಂದೇ ದಿನದಲ್ಲಿ ನಾನು ರೂ. 50,000 ಸಾಲವನ್ನು ಹೇಗೆ ಪಡೆದುಕೊಳ್ಳಬಹುದು?
ಉತ್ತರ: ನೀವು ರೂ. 50,000 ವೈಯಕ್ತಿಕ ಸಾಲವನ್ನು ಆನ್ ಲೈನ್ ನಲ್ಲಿ ತತ್ ಕ್ಷಣ ಸಾಲ ಆಪ್ ಮೂಲಕ ಕೇವಲ ಒಂದೇ ದಿನದಲ್ಲಿ ಪಡೆದುಕೊಳ್ಳಬಹುದು. ಇದೊಂದು ಅಲ್ಪಾವಧಿ ಸಾಲ ಮೊತ್ತವಾಗಿರುವುದರಿಂದ, 50,000 ರೂ ಸಾಲಕ್ಕಾಗಿ ಅನುಮೋದನೆ ದೊರೆಯುವ ಸಾಧ್ಯತೆಗಳು ಬಹಳ ಅಧಿಕವಾಗಿರುತ್ತದೆ. ಕೇವಲ ಒಂದು ದಿನದಲ್ಲಿ ಗಣನೀಯ ಪ್ರಮಾಣದ ಪ್ರಾಸೆಸಿಂಗ್ ಸಮಯ ಮತ್ತು ಮಂಜೂರಾತಿ ಸಮಯಗಳನ್ನು ಉಳಿತಾಯ ಮಾಡುವಂತಹ 50,000 ರೂ. ಸಾಲ ಪಡೆದುಕೊಳ್ಳುವುದಕ್ಕೆ ಯಾವುದೇ ಭದ್ರತೆಯ ಅಥವಾ ಗ್ಯಾರಂಟರ್ ನ ಅಗತ್ಯ ಇರುವುದಿಲ್ಲ.
ಪ್ರ.2. ಆನ್ಲೈನ್ ಮೂಲಕ ನಾನು ರೂ. 50,000 ಸಾಲ ಹೇಗೆ ಪಡೆದುಕೊಳ್ಳಬಹುದು?
ಉತ್ತರ: ನೀವು ಹೀರೋಫಿನ್‌ಕಾರ್ಪ್ ನಂತಹ ವಿಶ್ವಾಸಾರ್ಹ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ರೂ. 50,000 ಸಾಲವನ್ನು ನೀವು ಆನ್ಲೈನ್ ಮೂಲಕ ಪಡೆದುಕೊಳ್ಳಬಹುದು. ತತ್ ಕ್ಷಣ ವೈಯಕ್ತಿ ಆಪ್ ಗಳು ಕೆಲವು ಔಪಚಾರಿಕತೆಗಳನ್ನು ಹೊಂದಿರುತ್ತವೆ ಮತ್ತು ಕಾಗದ ರಹಿತ ದಾಖಲಾತಿಯನ್ನು ಅಂಗೀಕರಿಸುತ್ತವೆ. ಇದು 24 ಗಂಟೆಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ರೂ. 50,000 ಅದಕ್ಕಿಂತ ಹೆಚ್ಚಿನ ವೈಯಕ್ತಿಕ ಸಾಲದ ಅನುಮೋದನೆಗೆ ಅವಕಾಶ ನೀಡುತ್ತದೆ.
ಪ್ರ.3. ರೂ. 50,000 ಸಾಲಕ್ಕಾಗಿ ನನಗೆ ಅಗತ್ಯವಿರುವ ಕ್ರೆಡಿಟ್ ಸ್ಕೋರ್ ಏನು?
ಉತ್ತರ : ರೂ. 50,000 ಅಥವಾ ಹೆಚ್ಚಿನ ಸಾಲ ಅನುಮೋದನೆಗಾಗಿ 900 ಕ್ಕೆ ಸಮೀಪವಿರುವ ಕ್ರೆಡಿಟ್ ಸ್ಕೋರ್ ಸೂಕ್ತವಾಗಿರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ತ್ವರಿತವಾಗಿ ಸಾಲ ಅನುಮೋದನೆಯಾಗುತ್ತದೆ. ಸಾಲಪಡೆಯುವ ವ್ಯಕ್ತಿಯ ಮರುಪಾವತಿ ಇತಿಹಾಸವನ್ನು ಕ್ರೆಡಿಟ್ ಸ್ಕೋರ್ ಪ್ರತಿಬಿಂಬಿಸುತ್ತದೆ ಮತ್ತು ಸಾಲದಾತನಿಗೆ ಭವಿಷ್ಯದ ಮರುಪಾವತಿ ವರ್ತನೆಯ ಕುರಿತು ಒಂದು ಕಲ್ಪನೆ ನೀಡುತ್ತದೆ.
ಪ್ರ.4. ರೂ. 50,000 ಸಾಲವನ್ನು ನಾನು ತ್ವರಿತವಾಗಿ ಹೇಗೆ ಪಡೆದುಕೊಳ್ಳಬಹುದು?
ಉತ್ತರ: ತ್ವರಿತ ನಗದು ಏರ್ಪಾಟು ಮಾಡುವ ನಿಮ್ಮ ತುರ್ತು ಪರಿಸ್ಥಿತಿಯ ಆಧಾರದ ಮೇಲೆ ನೀವು ಆನ್ಲೈನ್ ನಲ್ಲಿ ತತ್ ಕ್ಷಣ ವೈಯಕ್ತಿಕ ಸಾಲಗಳ ಆಪ್ ಮೂಲಕ ರೂ. 50000 ತ್ವರಿತ ಸಾಲವನ್ನು ಪಡೆದುಕೊಳ್ಳಬಹುದು. ಹೀರೋಫಿನ್‌ಕಾರ್ಪ್ ಎನ್ನುವುದು 24 ಗಂಟೆಗಳೊಳಗಾಗಿ ತ್ವರಿತ ಸಾಲ ಅನುಮೋದನೆ ನೀಡುವಂತಹ ಇತ್ತೀಚಿನ ತತ್ ಕ್ಷಣ
ಸಾಲ ಆಪ್ ಆಗಿದೆ. ರೂ. 50,000 ಅಥವಾ ಹೆಚ್ಚಿನ ತ್ವರಿತ ಸಾಲ ಅನುಮೋದನೆಗಾಗಿ ನಿಮ್ಮ ಕೆವೈಸಿ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ.
ಪ್ರ.5. ರೂ. 50,000 ಸಾಲವನ್ನು ನಾನು ಹೇಗೆ ಪಡೆದುಕೊಳ್ಳಬಹುದು?
ಉತ್ತರ: ರೂ. 50,000 ಸಾಲ ಪಡೆದುಕೊಳ್ಳುವ ಅತ್ಯಂತ ತ್ವರಿತ ಮಾರ್ಗವೆಂದರೆ ವೈಯಕ್ತಿಕ ಸಾಲ ಅರ್ಜಿ ಆನ್ಲೈನ್ ಮೂಲಕ. ಸಾಲದಾತ ಜಾಲತಾಣಗಳನ್ನು, ವೈಯಕ್ತಿಕ ಸಾಲ ಆಪ್ ಗಳನ್ನು ಅಥವಾ ಕ್ರೆಡಿಟ್ ಪೋರ್ಟಲ್ ಗಳನ್ನು ಸಣ್ಣ ನಗದು ಸಾಲ ಆಫರ್ ಗಳಿಗಾಗಿ ಸಂದರ್ಶಿಸಿ ಮತ್ತು 24 ಗಂಟೆಗಳಲ್ಲಿ ರೂ. 50,000 ಸಾಲ ಪಡೆದುಕೊಳ್ಳಿ.
ಪ್ರ.6. ರೂ. 50,000 ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು ಯಾವುವು?
ಉತ್ತರ: ರೂ. 50,000 ಸಾಲಕ್ಕಾಗಿ ಅಗತ್ಯವಿರುವ ಕಡ್ಡಾಯ ದಾಖಲೆಗಳಲ್ಲಿ ಕೆವೈಸಿ ವಿವರಗಳು ಮತ್ತು ಆದಾಯ ದಾಖಲೆಗಳು ಒಳಗೊಂಡಿವೆ:
- ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಚಾಲನಾ ಪರವಾನಗಿ/ಪಾಸ್ ಪೋರ್ಟ್
- ವೇತನಸಹಿತ ವ್ಯಕ್ತಿಗಳಿಗೆ ಇತ್ತೀಚಿನ ವೇತನ ಚೀಟಿ ಮತ್ತು ಸ್ವ ಉದ್ಯೋಗಿಗಳಿಗೆ ಬ್ಯಾಂಕ್ ಸ್ಟೇಟ್ಮೆಂಟ್
- ಕೆಲಸದ ಹಿನ್ನೆಲೆಯನ್ನು ಪರಿಶೀಲಿಸಲು ಕಂಪೆನಿ ವಿವರಗಳು
ಪ್ರ.7. ರೂ. 50,000 ಸಾಲದ ಮೇಲಿನ ಇಎಂಐ ಪಾವತಿಗಳು ಎಷ್ಟು?
ಉತ್ತರ: ತೆಗೆದುಕೊಂಡ ಸಾಲದ ಮೊತ್ತದ ಮೇಲೆ, ಆಯ್ಕೆ ಮಾಡಿಕೊಂಡಿರುವ ಬಡ್ಡಿಯ ಶೇಕಡಾವಾರು ಮೇಲೆ ಮತ್ತು ಸಾಲದ ಅವಧಿಯ ಮೇಲೆ ಇಎಂಐ ಮೊತ್ತ ಆಧರಿಸಿರುತ್ತದೆ. ಪ್ರತಿ ತಿಂಗಳೂ ಮರುಪಾವತಿ ಸುಲಭವಾಗುವಂತೆ ಮಾಡಲು ಸಾಲ ಪಡೆಯುವವರು ಇಎಂಐ ಕ್ಯಾಲುಕ್ಯೇಟರ್ ಉಪಯೋಗಿಸಿ ತಮ್ಮ ಸ್ವಂತ ಇಎಂಐ ಗಳನ್ನು ನಿಗದಿ ಪಡಿಸಿಕೊಳ್ಳಬಹುದು.