ಶಿಕ್ಷಣ ಸಾಲ
ಗುಣಮಟ್ಟದ ಶಿಕ್ಷಣ ಎನ್ನುವದು, ಯಶಸ್ವೀ ಜೀವನಕ್ಕೆ ಪ್ರಮುಖವಾಗಿದೆ. ಈಗಿನ ದಿನಗಳಲ್ಲಿ, ಶಿಕ್ಷಣದ ಖರ್ಚುವೆಚ್ಚ ವೇಗವಾಗಿ ಹೆಚ್ಚಾಗುತ್ತಿದೆ, ಮತ್ತು ಭಾರತ ಮತ್ತು ವಿದೇಶದಲ್ಲಿ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣದ ಪ್ರವೇಶಕ್ಕಾಗಿ ತಾಯಿತಂದೆಯರು ಸೆಣಸಾಡುತ್ತಿದ್ದಾರೆ. ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿ ಮಾಡಿಸಲು ಸಾಕಷ್ಟು ಹಣದ ಅಗತ್ಯವಿರುತ್ತದೆ. ಆದ್ದರಿಂದ ತಾಯಿತಂದೆಯರು ಹಣವನ್ನು ಸರಿಯಾಗಿ ನಿಗದಿತ ಠೇವಣಿಗಳಲ್ಲಿ, ರಿಕರಿಂಗ್ ಠೇವಣಿಗಳಲ್ಲಿ, ಅಥವಾ ಮ್ಯೂಚುವಲ್ ಫಂಡ್ ಗಳಲ್ಲಿ ಧೀರ್ಘಾವಧಿ ಹೂಡಿಕೆಯಂತೆ ಇರಿಸುತ್ತಾರೆ. ನಿಮ್ಮ ಬಳಿ ಸಾಕಷ್ಟು ಉಳಿತಾಯ ಹಣ ಇಲ್ಲದಿದ್ದರೆ ಅಥವಾ ತುರ್ತು ಖರ್ಚುಗಳಿಗಾಗಿ ಹಣ ಉಳಿಸಲು ಬಯಸುತ್ತಿದ್ದರೆ, ಶೈಕ್ಷಣಿಕ ಮೈಲಿಗಲ್ಲುಗಳ ಸಾಧನೆಗಾಗಿ ಉತ್ತಮ ಆಯ್ಕೆಯೆಂದರೆ ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ತೆಗೆದುಕೊಳ್ಳುವುದು. ಶಿಕ್ಷಣಕ್ಕಾಗಿ ವೈಯಕ್ತಿಕ ಸಾಲ ಮಹತ್ವದ ಪಾತ್ರ ವಹಿಸುತ್ತದೆ; ಉನ್ನತ ಶಿಕ್ಷಣ ಅಥವಾ ಸೆಕೆಂಡರಿ ನಂತರದ ಶಿಕ್ಷಣ ಪಡೆಯುವ ಆಕಾಂಕ್ಷಿಗಳಿಗೆ ಶಿಕ್ಷಣ ಸಂಬಂಧ ಖರ್ಚುಗಳಿಗಾಗಿ ಹಣ ಎರವಲು ಪಡೆಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಟ್ಯೂಷನ್ ಶುಲ್ಕ, ಗ್ರಂಥಾಲಯ, ಮತ್ತು ವಸತಿನಿಲಯ ವೆಚ್ಚಗಳನ್ನು ಶಿಕ್ಷಣ ಸಾಲ ಒಳಗೊಳ್ಳುತ್ತದೆ. ಆದಾಗ್ಯೂ, ಆನ್ಲೈನ್ ಶಿಕ್ಷಣ ಸಾಲವು ಇತರ ವಿಧದ ಸಾಲಗಳಿಂದ ಭಿನ್ನವಾಗಿರುತ್ತದೆ. ವಿಧಿಸಲಾಗುವ ಬಡ್ಡಿದರ ಸಾಕಷ್ಟು ಕಡಿಮೆ ಇರುತ್ತದೆ ಮತ್ತು ವಿದ್ಯಾರ್ಥಿ ಆತನ/ಆಕೆಯ ವಿದ್ಯಾಭ್ಯಾಸದ ಅವಧಿ ಮುಗಿದಿರದಿದ್ದರೆ ಮರುಪಾವತಿ ಅವಧಿ ಮುಂದುವರಿಸಬಹುದಾದ ಆಯ್ಕೆ ಇರುತ್ತದೆ.
ಭಾರತದಲ್ಲಿನ ಅನೇಕ ಹಣಕಾಸು ಸಂಸ್ಥೆಗಳು ಶಿಕ್ಷಣ ಸಾಲಗಳನ್ನು ಬೆಂಬಲಿಸುತ್ತದೆ ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಸುಭದ್ರಗೊಳಿಸಲು ಪ್ರಯೋಜನವಾಗುತ್ತದೆ. ಶೈಕ್ಷಣಿಕ ಸಾಲ ಕಾರ್ಯಕ್ರಮದ ಅಡಿಯ ವ್ಯಾಪ್ತಿಯ ಕೋರ್ಸ್ ನ ವಿಧಕ್ಕೆ ಅನುಗುಣವಾಗಿ ಗರಿಷ್ಠ ಶಿಕ್ಷಣ ಸಾಲ ಮೊತ್ತ ವ್ಯತ್ಯಾಸವಾಗುತ್ತದೆ.
ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ