boticon

ವೈದ್ಯರಿಗಾಗಿ ಇರುವ ವೈಯಕ್ತಿಕ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಕಸ್ಟಮೈಸ್ಡ್ ಬಡ್ಡಿ ದರ

ಸಾಲದ ಅಸಲು ಮೊತ್ತದ ಮೇಲೆ ಯಾವಾಗಲೂ ಬಡ್ಡಿ ದರ ವಿಧಿಸಲಾಗುತ್ತದೆ. ವೈದ್ಯರಿಗಾಗಿರುವ ಸಾಲದ ಮೇಲೆ ವಿಧಿಸಲಾಗುವ ಬಡ್ಡಿ ದರವು ಅವರ ವೈದ್ಯಕೀಯ ಪ್ರೊಫೈಲ್ ಹಾಗೂ ಆದಾಯ ಸ್ಲ್ಯಾಬ್ ಮೇಲೆ ಆಧರಿತವಾಗಿರುತ್ತದೆ. ಮರುಪಾವತಿ ಹೊರೆಯಾಗದಂತೆ ವೈದ್ಯರಿಗಾಗಿರುವ ಸಾಲಗಳ ಮೇಲೆ ಸೂಕ್ತ ಬಡ್ಡಿ ವಿಧಿಸುವುದನ್ನು ಇದು ಖಾತರಿ ಪಡಿಸುತ್ತದೆ.

ಮೇಲಾಧಾರಗಳಿಂದ ಒತ್ತಡ-ಮುಕ್ತ

ವೈಯಕ್ತಿಕ ಸಾಲ ಎನ್ನುವುದು ಭದ್ರತೆರಹಿತವಾಗಿದ್ದು, ಪಡೆದುಕೊಳ್ಳುವ ಸಾಲಕ್ಕೆ ಪ್ರತಿಯಾಗಿ ಆಸ್ತಿಗಳನ್ನು ಅಥವಾ ಸ್ವತ್ತುಗಳನ್ನು ಅಡಮಾನ ಇರಿಸುವ ಅಗತ್ಯವಿಲ್ಲ. ಈ ಕಾರಣಕ್ಕಾಗಿಯೇ ವೈಯಕ್ತಿಕ ಸಾಲ ಅನುಮೋದನೆಗೆ ಬಹಳ ಕಡಿಮೆ ಸಮಯ ಬೇಕಾಗುತ್ತದೆ. ಆದ್ದರಿಂದ, ವೈದ್ಯರಿಗಾಗಿ ಇರುವ ವೈಯಕ್ತಿಕ ಸಾಲವು ಭದ್ರತೆ ರಹಿತ ಸಾಲಗಳ ವರ್ಗಗಳ ಅಡಿಯಲ್ಲಿ ಬರುತ್ತದೆ ಮತ್ತು ವೈದ್ಯರ ಸಾಲ ಮಂಜೂರಾತಿಗಾಗಿ ಯಾವುದೇ ಮೇಲಾಧಾರಕ್ಕಾಗಿ ಆಗ್ರಹಿಸುವುದಿಲ್ಲ.

ಪರ್ಸನಲೈಸ್ಡ್ ಸಾಲ ನಿರ್ವಹಣೆ

ಮೊಬೈಲ್ ಫೋನ್ ನಲ್ಲಿ ಇನ್ಸ್ ಟೆಂಟ್ ಸಾಲ ಆಪ್ ಗಳು, ವೈದ್ಯರು ಸುಲವಾಗಿ ತಮ್ಮ ಸಾಲ ಅರ್ಜಿ, ದಾಖಲೆ ಸಲ್ಲಿಕೆ ಮತ್ತು ಸಾಲ ಸ್ಥಿತಿಯನ್ನು ನಿರ್ವಹಣೆ ಮಾಡುವುದಕ್ಕೆ ಅನುವು ಮಾಡಿಕೊಡುತ್ತದೆ. ಇನ್ಸ್ ಟೆಂಟ್ ಸಾಲ ಆಪ್ ಗಳ ಮೂಲಕ ವೈದ್ಯರಿಗಾಗಿ ಇರುವ ಸಾಲಗಳ ಸ್ಥಿತಿಯನ್ನು ಪರಿಶೀಲಿಸುವುದು ಸೂಕ್ತ ವಿಧಾನವಾಗಿದ್ದು, ವೈದ್ಯರು ತಮ್ಮ ಕಾರ್ಯನಿರತ ಸಮಯಕ್ಕೆ ಯಾವುದೇ ತೊಂದರೆಯಾಗದಂತೆ ಕೇವಲ ನಿಮಿಷಗಳಲ್ಲಿ ತಮ್ಮ ಸಾಲಕ್ಕೆ ಸಂಬಂಧಿಸಿದ ಯಾವುದೇ ವಿಷಯ ಪರಿಶೀಲಿಸುವುದಕ್ಕೆ ಮತ್ತು ನಿರ್ವಹಣೆ ಮಾಡುವುದಕ್ಕೆ ಸುಲಭವಾಗಿದೆ.

ದಾಖಲೆ ಸಲ್ಲಿಕೆಯ ಸುಲಭ ವಿಧಾನ

ಕಡ್ಡಾಯ ದಾಖಲೆಗಳ ಫೋಟೋಪ್ರತಿಗಳು ಇನ್ನುಮುಂದೆ ಅಗತ್ಯವಿರುವುದಿಲ್ಲ ಏಕೆಂದರೆ ದಾಖಲೆಗಳನ್ನು ಡಿಜಿಟಲ್ ಫಾರ್ಮಾಟ್ ನಲ್ಲಿ ಜೋಡಿಸಲಾಗುತ್ತದೆ. ವೈದ್ಯರಿಗಾಗಿನ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳುವುದಕ್ಕಾಗಿ, ಸಾಲ ಪಡೆಯುವವರು ಸಾಫ್ಟ್ ಪ್ರತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಅಥವಾ ಆಧಾರ್ ಕಾರ್ಡ್ ಸಂಖ್ಯೆ, ಪಾನ್ ಕಾರ್ಡ್ ಸಂಖ್ಯೆ ಇತ್ಯಾದಿ ವೈಯಕ್ತಿಕ ದಾಖಲೆಗಳಲ್ಲಿ ನೀಡಲಾಗಿರುವ ಅಧಿಕೃತ ಕೋಡ್ ಗಳನ್ನು ವೈದ್ಯರಿಗಾಗಿನ ಸಾಲಗಳ ಇ-ಕೆವೈಸಿ ಪರಿಶೀಲನೆಗಾಗಿ ನಮೂದಿಸಬೇಕಾಗುತ್ತದೆ.

ಸ್ವಯಂಚಾಲಿತ ಇಎಂಐ ಡಿಡಕ್ಷನ್


ವೈದ್ಯರಿಗಾಗಿ ಇರುವ ವೈಯಕ್ತಿಕ ಸಾಲ ಮಂಜೂರಾದ ನಂತರ, ಮತ್ತು ವಿತರಣೆಯಾದ ನಂತರ, ಪ್ರತಿ ತಿಂಗಳ ಇಎಂಐ ಪಾವತಿಯ ದಿನಾಂಕವನ್ನು ಅವರು ನೆನಪಿನಲ್ಲಿ ಇರಿಸಿಕೊಳ್ಳುವ ಅಗತ್ಯವಿಲ್ಲ. ಸ್ವಯಂಚಾಲಿತ ಡೆಬಿಟ್ ಆಯ್ಕೆಯ ಕಾರಣದಿಂದಾಗಿ, ವೈದ್ಯರಿಗಾಗಿನ ಸಾಲಗಳ ಇಎಂಐ ಪ್ರತಿತಿಂಗಳೂ ಸ್ವಯಂಚಾಲಿತವಾಗಿ ಡಿಡಕ್ಟ್ ಆಗುತ್ತದೆ ಮತ್ತು ಪಾವತಿಗಳು ತಪ್ಪಿಹೋಗುವುದಿಲ್ಲ.

ವೈದ್ಯರಿಗಾಗಿ ಇರುವ ವೈಯಕ್ತಿಕ ಸಾಲಕ್ಕಾಗಿ ಅರ್ಹತಾ ಮಾನದಂಡ

ಭಾರತದಲ್ಲಿನ ಹಣಕಾಸು ಸಂಸ್ಥೆಗಳು ವಿಭಿನ್ನ ಆದಾಯ ಗುಂಪುಗಳ ಹಣಕಾಸು ಅಗತ್ಯತೆಗಳ ಪೂರೈಕೆಗಾಗಿ ವೈಯಕ್ತಿಕ ಸಾಲ ಆಪ್ ಗಳನ್ನು ರಚಿಸಿವೆ. ವೈದ್ಯಕೀಯ ವೃತ್ತಿಪರರಿಗೆ ವಿವಿಧ ಹಣಕಾಸು ಅಗತ್ಯತೆಗಳಿಗಾಗಿ ಸಹಾಯ ಮಾಡುವಂತಹ ವೈಯಕ್ತಿಕ ಸಾಲದ ಒಂದು ವರ್ಗವೇ ವೈದ್ಯರಿಗಾಗಿ ಸಾಲ. ಸಾಲ ಅರ್ಜಿ ಸಲ್ಲಿಕೆಗೆ ಮುನ್ನ ಮಾಡುವ ಅರ್ಹತಾ ಪರಿಶೀಲನೆಯಂತೆಯೇ, ವೈದ್ಯರಿಗಾಗಿರುವ ವೈಯಕ್ತಿಕ ಸಾಲಕ್ಕಾಗಿ ಕೂಡಾ ಅರ್ಹತಾ ಮಾನದಂಡ ನಿಗದಿಯಾಗಿರುತ್ತದೆ. ವೈದ್ಯರಿಗಾಗಿ ಇರುವ ವೈಯಕ್ತಿಕ ಸಾಲ ಅರ್ಹತೆಗಳು ಅವರ ಆದಾಯ/ವೇತನ, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತವೆ.
1

ವೈದ್ಯರ ಪದವಿ ಪ್ರಮಾಣಪತ್ರ ಮತ್ತು ಪೋಸ್ಟ್ ಅರ್ಹತಾ ಅನುಭವ*

2

ವೈದ್ಯರು ಸ್ವಂತ ಮನೆ, ಕ್ಲಿನಿಕ್ ಅಥವಾ ಒಂದು ಆಸ್ಪತ್ರೆಯನ್ನು ಹೊಂದಿರಬೇಕು*

3

ವೈದ್ಯಕೀಯ ನೋಂದಣಿ ಪ್ರಮಾಣಪತ್ರ*

4


ವೇತನ/ಆದಾಯ ಕ್ರೆಡಿಟ್ ಆಗುವ ಸಕ್ರಿಯ ಬ್ಯಾಂಕ್ ಖಾತೆಯ ವಿವರಗಳು

5

ವ್ಯಾಪಾರದ ಪುರಾವೆ

6

ವೈದ್ಯರ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು.

7


ಗುರುತು ಪುರಾವೆ (ಆಧಾರ್ ಕಾರ್ಡ್/ಪಾಸ್ ಪೋರ್ಟ್/ ಚಾಲನಾ ಪರವಾನಗಿ)

8

ವಿಳಾಸ ಪುರಾವೆ (ಪಡಿತರ ಚೀಟಿ/ಪಾಸ್ ಪೋರ್ಟ್/ವಿದ್ಯುಚ್ಛಕ್ತಿ ಬಿಲ್/ ದೂರವಾಣಿ ಬಿಲ್)

9

ಆದಾಯ ಪುರಾವೆ (6 ತಿಂಗಳುಗಳ ಬ್ಯಾಕ್ ಖಾತೆ ಸ್ಟೇಟ್ಮೆಂಟ್ ಮತ್ತು ಆದಾಯ ತೆರಿಗೆ ರಿಟರ್ನ್ ಫೈಲ್)

ಸಾಲದಾತರಿಂದ ಸಾಲದಾತರ ಮೇಲೆ ಆಧರಿತವಾಗಿರುತ್ತದೆ.

ವೈದ್ಯರಿಗಾಗಿರುವ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ


ವೈದ್ಯ ಅಥವಾ ಆರೋಗ್ಯ ರಕ್ಷಣೆ ವೃತ್ತಿಪರರಾಗಿ ಇರುವುದು ಒಂದು ಜವಾಬ್ದಾರಿಯುತ ವೃತ್ತಿಯಾಗಿದ್ದು, ರೋಗಿಯ ಆರೋಗ್ಯದಲ್ಲಿ ಸುಧಾರಣೆ ತರಲು ಇದಕ್ಕೆ ನೈಪುಣ್ಯತೆ, ತಿಳುವಳಿಕೆ ಹಾಗೂ ಅನುಭವ ಬೇಕು. ವೈದ್ಯಕೀಯ ಚಿಕಿತ್ಸೆಗಳ ಗುಣಮಟ್ಟ ಸುಧಾರಣೆಗಾಗಿ ಹಲವಾರು ವೈದ್ಯರು ವೈದ್ಯರಿಗಾಗಿಯೇ ಇರುವ ಸಾಲಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವೃತ್ತಿಪರ ಕಾರಣಗಳನ್ನು ಹೊರತುಪಡಿಸಿ, ವೈಯಕ್ತಿಕ ಹಣಕಾಸು ಬದ್ಧತೆಗಳ ಪೂರೈಕೆಗಾಗಿ ಕೂಡಾ ವೈದ್ಯರು ಸಾಲಗಳನ್ನು ಪಡೆದುಕೊಳ್ಳುತ್ತಾರೆ. ವೈದ್ಯರುಗಳು ವೈಯಕ್ತಿಕ ಸಾಲವನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ತತ್ ಕ್ಷಣ ಆಯ್ಕೆಯನ್ನು ಆಯ್ದುಕೊಳ್ಳಬಹುದು.

how-to-apply-for-doctor-loan (1).webp

  • 1

    ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಒಂದು ವೈಯಕ್ತಿಕ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

  • 2

    ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ ಉಪಯೋಗಿಸಿ ನೋಂದಾಯಿಸಿಕೊಳ್ಳಿ

     

  • 3

    ಸಾಲ ಅರ್ಜಿ ತುಂಬಿ, ಕಡ್ಡಾಯ ಸ್ಥಳಗಳನ್ನೆಲ್ಲಾ ತುಂಬುವುದನ್ನು ಖಚಿತಪಡಿಸಿಕೊಳ್ಳಿ

     

  • 4

    ಸೂಕ್ತವಾದ ಇಎಂಐ ನಿರ್ಧರಿಸಲು ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ. ವೇರಿಯೆಬಲ್ ಗಳನ್ನು ಸುಲಭವಾಗಿ ಬದಲಾಯಿಸಲು ಸ್ಲೈಡರ್ ಉಪಯೋಗಿಸಿ

     

  • 5

    ಸಾಲಕ್ಕೆ ಪೂರ್ವ ಮನವಿಗಳನ್ನು – ಆಧಾರ್ ಕಾರ್ಡ್, ಆಧಾರ್ ಗೆ ಜೋಡಿಸಲಾಗ ಮೊಬೈಲ್ ಸಂಖ್ಯೆ (ಒಟಿಪಿಗಾಗಿ), ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅಪ್ಲೋಡ್ ಮಾಡಿ

     

  • 6

    ಪರಿಶೀಲನೆಯಾದ ನಂತರ, ಸಾಲ ಅನುಮೋದನೆ ಮತ್ತು ವಿತರಣೆ ಕೇವಲ 48 ಗಂಟೆಗಳೊಳಗಾಗಿ ನಡೆಯುತ್ತದೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಆನ್ಲೈನ್ ನಲ್ಲಿ ಇನ್ಸ್ ಟೆಂಟ್ ಆಪ್ ಗಳ ಮೂಲಕ ಬಹಳ ತ್ವರಿತವಾಗಿ ವೈದ್ಯರಿಗಾಗಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ವೈದ್ಯರಿಗೆ ಇದೊಂದು ಬಹಳ ಸುಲಭವಾದ ಮಾರ್ಗವಾಗಿದೆ. ಸಾಲ ಅರ್ಜಿಗಾಗಿ ಶಾಖೆಗೆ ವೈಯಕ್ತಿಕವಾಗಿ ಭೇಟಿ ನೀಡುವ ಅವರ ಸಮಯವನ್ನು ಇದು ಉಳಿತಾಯ ಮಾಡುತ್ತದೆ.
ವೈದ್ಯರ ಸಾಲಕ್ಕಾಗಿ ಯಾವುದೇ ನಿಗದಿತ ಸಾಲ ಮೊತ್ತ ಇರುವುದಿಲ್ಲ. ವೈದ್ಯರಿಗಾಗಿರುವ ವೈಯಕ್ತಿಕ ಸಾಲವು ಸಂಪೂರ್ಣವಾಗಿ ಸಾಲದಾತರ ಗರಿಷ್ಠ ಸಾಲ ಮೊತ್ತದ ಮೇಲೆ ಆಧರಿತವಾಗಿರುತ್ತದೆ. ವಿಭಿನ್ನ ಸಾಲದಾತರಿಗೆ ಅನುಗುಣವಾಗಿ ಈ ಮಿತಿ ವ್ಯತ್ಯಾಸವಾಗಬಹುದು.
ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ, ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅನುಸರಿಸುವ ಮೂಲಕ, ಆನ್ಲೈನ್ ಪರಿಶೀಲನೆಗಾಗಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ವೈದ್ಯ ಸಾಲ ಪಡೆದುಕೊಳ್ಳಬಹುದು. ಅನುಮೋದನೆಗಾಗಿ ನಿರೀಕ್ಷಿಸಿ ಮತ್ತು 24 ಗಂಟೆಗಳೊಳಗಾಗಿ ನಿಮ್ಮ ಸಾಲ ಮೊತ್ತ ವಿತರಣೆಯಾಗುತ್ತದೆ.
ಆನ್ಲೈನ್ ನಲ್ಲಿ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವೈದ್ಯರು ತಮ್ಮ ಸಾಲ ಮೊತ್ತದ ಮೇಲೆ ವಿಧಿಸಲಾಗುವ ಸಾಲ ಮೊತ್ತವನ್ನು ತಿಳಿದುಕೊಳ್ಳುವುದಕ್ಕಾಗಿ ಇಎಂಐ ಕ್ಯಾಲುಕ್ಯುಲೇಟರ್ ಅಥವಾ ಬಡ್ಡಿ ದರ ಕ್ಯಾಲುಕ್ಯುಲೇಟರ್ ಉಪಯೋಗಿಸಬಹುದು. ಇದು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರುತ್ತದೆ ಮತ್ತು ನಿಮ್ಮ ಅಸಲು ಮೊತ್ತ ಮತ್ತು ಸಾಲ ಅವಧಿಯ ಆಧಾರದ ಮೇಲೆ ಭಿನ್ನವಾಗಿರುತ್ತದೆ.
ಹೌದು, ವೈದ್ಯರು ವೈಯಕ್ತಿಕ ಹಾಗೂ ವೃತ್ತಿಪರ ಕಾರಣಗಳೆರಡಕ್ಕೂ ಸಾಲಗಳನ್ನು ಪಡೆದುಕೊಳ್ಳಬಹುದು. ವೈದ್ಯಕೀಯ ಚಿಕಿತ್ಸೆಗಳ ಗುಣಮಟ್ಟ ಸುಧಾರಣೆಗೆ, ಕ್ಲಿನಿಕ್ ವಿಸ್ತರಣೆಗೆ ಅಥವಾ ಹೆಚ್ಚುವರಿ ವಿಧ್ಯಾಭ್ಯಾಸ, ಪ್ರವಾಣ, ನವೀಕರಣ ಇತ್ಯಾದಿ ವೈಯಕ್ತಿಕ ಹಣಕಾಸು ಗುರಿಗಳ ಪೂರೈಕೆಗಾಗಿ ಕೂಡಾ ವೈದ್ಯರಿಗಾಗಿರುವ ಸಾಲವನ್ನು ಪಡೆದುಕೊಳ್ಳಬಹುದು.
ವೈದ್ಯರು ತಮ್ಮ ವೈದ್ಯಕೀಯ ಪ್ರಮಾಣಪತ್ರ ಮತ್ತು ಪೋಸ್ಟ್ ಕ್ವಾಲಿಫಿಕೇಷನ್ ಕಾಗದಪತ್ರಗಳನ್ನು ಅವರ ಮೊಬೈಲ್ ಸಂಖ್ಯೆಗೆ ಜೋಡಿಸಲಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಂತಹ ಅಗತ್ಯ ಗುರುತಿನ ಪುರಾವೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಇಲ್ಲದಿದ್ದರೆ, ಪಾಸ್ ಪೋರ್ಟ್/ಚಾಲನಾ ಪರವಾನಗಿ/ಯುಟಿಲಿಟಿ ಬಿಲ್ ಗಳನ್ನು ಸಲ್ಲಿಸಬೇಕು
ದಾಖಲೆ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ, ಪರಿಶೀಲನೆ ಮುಗಿದ ನಂತರ, ವೈದ್ಯರಿಗಾಗಿ ಸಾಲ ವಿತರಣೆಗೆ 48 ಗಂಟೆಗಳಿಗಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ.
ವೈದ್ಯರಿಗಾಗಿರುವ ವೈಯಕ್ತಿಕ ಸಾಲ ಅರ್ಹತೆಗಳು, ಅವರ ಆದಾಯ/ವೇತನ, ನೀಡಲಾಗಿರುವ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ಅವರ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ.