H.Ai Bot Logo
H.Ai Bot
Powered by GPT-4
Terms of Service

I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.

instant-loan-app.webp

ಅಲ್ಪಾವಧಿ ಸಾಲಕ್ಕಾಗಿ ಹೀರೋಫಿನ್‌ಕಾರ್ಪ್ ಏಕೆ?

ಹೀರೋಫಿನ್‌ಕಾರ್ಪ್ ಎನ್ನುವುದು ಹೀರೋಫಿನ್‌ಕಾರ್ಪ್ ನಿಂದ ಚಾಲಿತ ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಆಗಿದೆ. 50,000 ದಿಂದ 1,50,000 ರೂಪಾಯಿವರೆಗೆ ತತ್ ಕ್ಷಣ ಅಲ್ಪಾವಧಿ ಸಾಲಗಳನ್ನು ನೀಡಲು ಇವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅನುಮೋದನೆಯಾದ ನಂತರ ನಿಮಿಷಗಳಲ್ಲೇ ಮೊತ್ತ ಸುಲಭವಾಗಿ ಲಭ್ಯವಾಗುತ್ತದೆ. ತತ್ ಕ್ಷಣ ಅಲ್ಪಾವಧಿ ಹಣಕಾಸು ನೆರವು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ಕಾಗದರಹಿತ ದಾಖಲೆ ಸಲ್ಲಿಕೆ ಮತ್ತು ರಿಯಲ್ ಟೈಮ್ ಪರಿಶೀಲನೆ ಒಳಗೊಂಡಿದೆ. ಪರಿಶೀಲನೆ ಮತ್ತು ಅನುಮೋದನೆಯಾದ ನಂತರ, 24 ಗಂಟೆಗಳೊಳಗಾಗಿ ವಿತರಣೆ ನಡೆಯುತ್ತದೆ.

ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಎನ್ನುವುದು ಒಂದು ಸಂಪೂರ್ಣ ಡಿಜಿಟಲೀಕೃತ ತತ್ ಕ್ಷಣ ಸಾಲ ವೇದಿಕೆಯಾಗಿದೆ. ನೀವು ನಿಮ್ಮ ಸಾಲ ಖಾತೆಯನ್ನು ಆನ್ಲೈನ್ ನಿರ್ವಹಣೆ ಮಾಡಬಹುದು ಮತ್ತು ಬಡ್ಡಿ ದರ, ಇಎಂಐಗಳು ಮತ್ತು ಮರುಪಾವತಿ ಅವಧಿಯನ್ನು ಎಲ್ಲಿಂದ ಬೇಕಾದರೂ ಬೆರಳ ತುದಿಯಲ್ಲೇ ಪರಿಶೀಲಿಸಬಹುದು. ಆದ್ದರಿಂದ ಹೀರೋಫಿನ್‌ಕಾರ್ಪ್ ಮೂಲಕ ಒಂದು ಅಪಾಯ ಮುಕ್ತ ಅಲ್ಪಾವಧಿ ಸಾಲ ತೆಗೆದುಕೊಳ್ಳಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ 6 ತಿಂಗಳುಗಳಿಂದ 2 ವರ್ಷಗಳ ಫ್ಲೆಕ್ಸಿಬಲ್ ಅವಧಿಯಲ್ಲಿ ಮರುಪಾವತಿಸಿ.

ಸಾಲ ಮೊತ್ತ, ಬಡ್ಡಿ, ಮತ್ತು ಅವಧಿ ಆಧರಿಸಿ, ಅಲ್ಪಾವಧಿ ಸಾಲಗಳ ಮೇಲೆ ಇಚ್ಛೆಯ ಇಎಂಐ ಪಡೆದುಕೊಳ್ಳಲು ಹೀರೋಫಿನ್‌ಕಾರ್ಪ್ ಆಪ್ ನಲ್ಲಿರುವ ಇನ್ ಬ್ಯುಲ್ಟ್ ಇಎಂಐ ಕ್ಯಾಲುಕ್ಯುಲೇಟರ್ ಸಾಧನವನ್ನು ಉಪಯೋಗಿಸಿ.

ಹೀರೋಫಿನ್‌ಕಾರ್ಪ್ ತತ್ ಕ್ಷಣ ವೈಯಕ್ತಿಕ ಸಾಲ ಒಂದು ಆನ್ಲೈನ್ ಅಲ್ಪಾವಧಿ ಸಾಲವಾಗಿದ್ದು, ಯಾವುದೇ ತುರ್ತು ಉದ್ದೇಶಕ್ಕಾಗಿ ಸಾಲಗಾರರು ಇದನ್ನು ಉಪಯೋಗಿಸಬಹುದಾಗಿದೆ. ಇದು ಕೇವಲ ಒಂದು ಉದ್ದೇಶ ಪೂರೈಕೆಗಾಗಿ ಮಾತ್ರ ಸೀಮಿತವಲ್ಲ, ವಿವಿಧ ಹಣಕಾಸು ಅಗತ್ಯಗಳ ಪೂರೈಕೆಗಾಗಿ ಉಪಯೋಗಿಸಬಹುದು. ಅದು ಮನೆ ಬಾಡಿಗೆ ಪಾವತಿ, ಅನಿಯೋಜಿತ ಪ್ರಯಾಣದ ಬುಕಿಂಗ್, ಶಿಕ್ಷಣ ಶುಲ್ಕ ಪಾವತಿ, ದುರಸ್ತಿ ನಿರ್ವಹಣೆ ಇತ್ಯಾದಿ ಇರಬಹುದು. ವಾಣಿಜ್ಯಕ್ಕೆ ಸಂಬಂಧಿಸಿದಂತೆ ಕೂಡಾ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳು ಅಥವಾ ಸ್ಟಾರ್ಟಪ್ ಗಳಿಗೆ ಅಲ್ಪಾವಧಿ ಸಾಲ ಎನ್ನುವುದು ಬಹಳ ಅಮೂಲ್ಯವಾಗಿರುತ್ತದೆ.

ಅಲ್ಪಾವಧಿ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಹಣಕಾಸು ಬಿಕ್ಕಟ್ಟಿನ ನಿರ್ವಹಣೆಗೆ ಸುಲಭವಾದ ವಿಧಾನವೆಂದರೆ ಅಲ್ಪಾವಧಿ ಸಾಲ ಪಡೆದುಕೊಳ್ಳುವುದು. ಎರವರು ಪಡೆದ ಮೊತ್ತ ಭಾರಿಯಲ್ಲದ ಕಾರಣ ಮತ್ತು ಕ್ರಮೇಣ ಇಎಂಐಗಳಲ್ಲಿ ಮರುಪಾವತಿಸಬಹುದಾದ್ದರಿಂದ ಸಾಲಗಾರರಿಗೆ ಯಾವುದೇ ಅಪಾಯ ಇರುವುದಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆನ್ಲೈನ್ ಅಲ್ಪಾವಧಿ ಸಾಲ ಪಡೆದುಕೊಳ್ಳುವುದಕ್ಕಾಗಿ ತತ್ ಕ್ಷಣ ಸಾಲ ಆಪ್ ಗಳನ್ನು ಸರಳೀಕೃತಗೊಳಿಸಲಾಗಿದೆ. ಮನೆ, ಕಚೇರಿ ಅಥವಾ ಬೇರೆಲ್ಲಿಂದಲೇ ಆಗಲಿ, ನೀವು ವೈಯಕ್ತಿಕ ಸಾಲ ಆಪ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಅಲ್ಪಾವಧಿ ಅರ್ಜಿ ಸಾಲ ಪ್ರಕ್ರಿಯೆ ಆನ್ಲೈನ್ ಪ್ರಾರಂಭಿಸಬಹುದು.ಹೀರೋಫಿನ್‌ಕಾರ್ಪ್ ನಂತಹ ತತ್ ಕ್ಷಣ ಸಾಲ ಆಪ್ ಗಳ ಮೂಲಕ ಅಲ್ಪಾವಧಿ ಸಾಲ ಪಡೆದುಕೊಳ್ಳುವುದರ ಪ್ರಯೋಜನಗಳು ಮತ್ತು ಅದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಿ.

t1.svg
ಕಡಿಮೆ ಸಾಲ ಅವಧಿ

ಅಲ್ಪಾವಧಿ ಸಾಲವನ್ನು ಸಾಧಾರಣವಾಗಿ 2 ವರ್ಷಗಳ ಅವಧಿಗಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಇದರಿಂದಾಗಿ ಮರುಪಾವತಿಯ ಹೊರೆ ವರ್ಷಗಳ ಕಾಲ ಇರುವುದಿಲ್ಲ.

t2.svg
ಸಾಲ ಮೊತ್ತ

ಅಲ್ಪಾವಧಿ ಸಾಲ ಮೊತ್ತ 15,000 ದಿಂದ 1.5 ಲಕ್ಷ ರೂಪಾಯಿವರೆಗೂ ಇರುತ್ತದೆ, ಇದು ಸಾಲದಾತರ ಮೇಲೆ ಅವಲಂಬಿತವಾಗಿರುತ್ತದೆ ಇದನ್ನು ಇಎಂಐಗಳಾಗಿ ವಿಭಜಿಸಿದಾಗ ಮರುಪಾವತಿಸುವುದು ಸುಲಭವಾಗುತ್ತದೆ.

t3.svg
ಸಾಲ ಅನುಮೋದನೆ

ಅಲ್ಪಾವಧಿ ಸಾಲಕ್ಕಾಗಿ ತೆಗೆದುಕೊಳ್ಳುವ ಸಮಯ ಬಹಳ ತ್ವರಿತವಾಗಿದ್ದು ಕನಿಷ್ಠ ದಾಖಲೆಗಳು ಸಾಕಾಗುತ್ತವೆ, ಆದರೆ ಹೆಚ್ಚಿನ ಮೊತ್ತದ ದೀರ್ಘಾವಧಿ ಸಾಲಕ್ಕಾಗಿ ಸಾಲ ಪಡೆದುಕೊಳ್ಳುವವರ ಸಾಲಯೋಗ್ಯತೆ ಮತ್ತು ಆಸ್ತಿಪಾಸ್ತಿಗಳ ಹೆಚ್ಚಿನ ಪರಿಶೀಲನೆ ಅಗತ್ಯವಿರುತ್ತದೆ.

t4.svg
ಸಾಲಪಡೆಯುವವರಿಗೆಲ್ಲಾ ತೆರೆದಿರುತ್ತದೆ

ಅಲ್ಪಾವಧಿ ಸಾಲವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಕೂಡಾ ಲಭ್ಯವಿರುತ್ತದೆ.

t5.svg
ಮೇಲಾಧಾರ ಮುಕ್ತ

ಒಂದು ಭದ್ರತೆರಹಿತ ಸಾಲವಾಗಿರುವ ಕಾರಣ, ಸಾಲಕ್ಕೆ ಪ್ರತಿಯಾಗಿ ಯಾವುದೇ ಭದ್ರತೆ ಅಗತ್ಯವಿಲ್ಲ ಅಥವಾ ಆಸ್ತಿಗಳನ್ನು ಅಡಮಾನ ಇರಿಸುವ ಅಗತ್ಯವಿಲ್ಲ.

t6.svg
ಕಾಗದರಹಿತ ದಾಖಲೆ ಸಲ್ಲಿಕೆ

ಅಲ್ಪಾವಧಿ ಆನ್ಲೈನ್ ಸಾಲಗಳು, ಭೌತಿಕ ದಾಖಲೆ ಸಲ್ಲಿಕೆಯ ಅಗತ್ಯವನ್ನು ನಿವಾರಿಸಿವೆ. ತತ್ ಕ್ಷಣ ಸಾಲ ಆಪ್ ಗಳಿಗೆ ಧನ್ಯವಾದ. ಕೆವೈಸಿ ದಾಖಲೆಗಳು ಮತ್ತು ಆದಾಯ ಪುರಾವೆಗಳನ್ನು ಆನ್ಲೈನ್ ಪರಿಶೀಲನೆ ನಡೆಸಲಾಗುತ್ತದೆ.

t4.svg
ಪಾರದರ್ಶಕತೆ

ತತ್ ಕ್ಷಣ ಅಲ್ಪಾವಧಿ ಸಾಲಗಳು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಅಥವಾ ಅಧಿಕ ಪ್ರಾಸೆಸಿಂಗ್ ಶುಲ್ಕಗಳನ್ನು ಒಳಗೊಂಡಿಲ್ಲ. ಸಾಲ ಪ್ರಕ್ರಿಯೆಯಲ್ಲಿನ ಪಾರದರ್ಶಕತೆಯು ಭವಿಷ್ಯದ ಸಾಲ ಪರಿಗಣನೆಗಾಗಿ ಸಾಲದಾತರ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.

05-Collateral.svg
ಇಎಂಐಗಳನ್ನು ಲೆಕ್ಕ ಹಾಕಿ

ತತ್ ಕ್ಷಣ ಸಾಲ ಆಪ್ ಗಳು, ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸು ಮುಂಗಡವಾಗಿಯೇ ಇಎಂಐಗಳನ್ನು ಲೆಕ್ಕ ಹಾಕುವುದಕ್ಕೆ ಸಾಲಗಾರರಿಗೆ ಅವಕಾಶ ಮಾಡಿಕೊಡುತ್ತವೆ. ಅಲ್ಪಾವಧಿ ಸಾಲಗಳ ಸುಲಭ ನಿರ್ವಹಣೆ ಕುರಿತಂತೆ ಇದು ಸ್ಪಷ್ಟತೆ ನೀಡುತ್ತದೆ.

ಅಲ್ಪಾವಧಿ ಸಾಲ ಅರ್ಹತೆ ಮತ್ತು ಅಗತ್ಯವಿರುವ ದಾಖಲೆಗಳು


ಆನ್ಲೈನ್ ಅಲ್ಪಾವಧಿ ಸಾಲಗಳ ಪ್ರಯೋಜನವೆಂದರೆ, ಇದರ ಗೋಜಲು ಮುಕ್ತ ಅರ್ಹತಾ ಮಾನದಂಡ ಮತ್ತು ಕನಿಷ್ಠ ದಾಖಲೆಗಳು. ಕೇವಲ ಕೆಲವೇ ಫಾರ್ಮಾಲಿಟೀಸ್ ಕಾರಣದಿಂದಾಗಿ, ಅಲ್ಪಾವಧಿ ಸಾಲಗಳು ಆನ್ಲೈನ್ ನಲ್ಲಿ ಸುಲಭವಾಗಿ ಲಭ್ಯವಾಗುತ್ತವೆ. ಅಲ್ಪಾವಧಿ ಸಾಲಗಳ ತತ್ ಕ್ಷಣ ಅನುಮೋದನೆಗಾಗಿ ಅಗತ್ಯವಿರುವ ಅರ್ಹತಾ ಮಾನದಂಡ ಮತ್ತು ಕಡ್ಡಾಯ ದಾಖಲೆಗಳ ಬಗ್ಗೆ ತಿಳಿದುಕೊಳ್ಳಿ. :

ಸಾಲ 50,000 ಅಥವಾ 1,50,000 ರೂಪಾಯಿಗಾಗಿರಲಿ, ಅಲ್ಪಾವಧಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಸಾಲಗಾರರು ಅರ್ಹತಾ ಮಾನದಂಡವನ್ನು ಪರೀಕ್ಷಿಸಲೇ ಬೇಕು. ವಂಚನೆಯ ಯಾವುದೇ ಪ್ರಕರಣಗಳಿಲ್ಲ ಎಂದು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಇದನ್ನು ಮಾಡಬೇಕಾಗುತ್ತದೆ:

1

ವೇತನದಾರರಿಗಾಗಿ ಕನಿಷ್ಠ ಮಾಸಿಕ ಆದಾಯ: ಅರ್ಜಿದಾರರು ಮಾಸಿಕ ಕನಿಷ್ಠ ರೂ. 15,000 ಮೊತ್ತವನ್ನು ಗಳಿಸಬೇಕು

2

ಸ್ವ ಉದ್ಯೋಗಿಗಳಿಗಾಗಿ ಕನಿಷ್ಠ ಮಾಸಿಕ ಆದಾಯ: ಕನಿಷ್ಠ ಗಳಿಕೆ ಮಾಸಿಕ ರೂ. 15,000 ಆಗಿರಬೇಕು ಮತ್ತು ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ

3

ಆದಾಯ ಪುರಾವೆ: ವೇತನದಾರರಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ವೈಯಕ್ತಿಕ ಖಾತೆ

4

ಅಲ್ಪಾವಧಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬೇಕಾಗುವ ಮೊದಲ ದಾಖಲೆಯೆಂದರೆ ಅದು ಆಧಾರ್ ಕಾರ್ಡ್

ಆನ್ಲೈನ್ ಗೋಜಲುಮುಕ್ತ ದಾಖಲೆ ಸಲ್ಲಿಕೆಯು ಭೌತಿಕ ಸಾಲ ಅರ್ಜಿಯ ಒತ್ತಡವನ್ನು ಕಡಿಮೆ ಮಾಡುತ್ತದೆ. 1,5 ಲಕ್ಷ ರೂಪಾಯಿವರೆಗಿನ ತತ್ ಕ್ಷಣ ಅಲ್ಪಾವಧಿ ಸಾಲಕ್ಕಾಗಿ ಸಲ್ಲಿಸಬೇಕಾಗಿರುವ ಕಡ್ಡಾಯ ದಾಖಲೆಗಳು ಅಥವಾ ವಿವರಗಳು ಈ ಕೆಳಗಿನಂತಿವೆ:

5

ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನೀವು ನಿಮ್ಮ ಪ್ಯಾನ್ ಕಾರ್ಡ್/ಚಾಲನಾ ಪರವಾನಗಿ ಒದಗಿಸಬಹುದು

6

ಇತರ ಪ್ರಮುಖ ದಾಖಲೆಗಳಲ್ಲಿ, ನಿಮ್ಮ ವೃತ್ತಿಪರ ಮತ್ತು ಹಣಕಾಸು ವಿವರಗಳು ಇದರಲ್ಲಿ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಒಳಗೊಂಡಿರಬೇಕು

7

ಹಣಕಾಸು ಸಂಸ್ಥೆ ಸಲಹೆ ಮಾಡಿರುವ ಪ್ರಕಾರ ಅಂಗೀಕೃತ ಬ್ಯಾಂಕ್ ಗಳ ಪೈಕಿ ಯಾವುದಾದರೊಂದರಲ್ಲಿ ನಿಮ್ಮ ಖಾತೆ ಇರಬೇಕು

8

ವಯಸ್ಸಿನ ಮಾನದಂಡ: ಅರ್ಜಿದಾರರ ವಯಸ್ಸು 21 ರಿಂದ 58 ವರ್ಷದೊಳಗಿರಬೇಕು

ಅಲ್ಪಾವಧಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ


ಅಲ್ಪಾವಧಿ ಆಧಾರದಲ್ಲಿ ತತ್ ಕ್ಷಣ ಸಾಲಕ್ಕಾಗಿ ಹಲವಾರು ವೈಶಿಷ್ಟ್ಯಗಳನ್ನು ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಒಳಗೊಂಡಿದೆ. ಸಾಲ ಅರ್ಜಿ ಪ್ರಕ್ರಿಯೆ ಬಹಳ ಸುಲಭ, ಕೆಳಗಿನ ಹಂತಗಳನ್ನು ಅನುಸರಿಸಿ:

how-to-apply-for-doctor-loan (1).webp

  • 1

    ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

     

  • 2

    ಮೂಲ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ

     

  • 3

    ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಇಚ್ಛೆಯ ಇಎಂಐ ಸೆಟ್ ಮಾಡಿಕೊಳ್ಳಿ

     

  • 4

    ಭದ್ರತಾ ಕೋಡ್ ಉಪಯೋಗಿಸುತ್ತಾ ಕೆವೈಸಿ ವಿವರಗಳ ಕಾಗದರಹಿತ ಪರಿಶೀಲನೆ

     

  • 5

    ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆಯ ಪರಿಶೀಲನೆ ಕ್ರೆಡೆನ್ಷಿಯಲ್ ಗಳನ್ನು ಸಂಗ್ರಹಿಸಲಾಗುವುದಿಲ್ಲ

     

  • 6

    ನಿಮಿಷಗಳಲ್ಲೇ ತತ್ ಕ್ಷಣ ಸಾಲ ಅನುಮೋದನೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಅಲ್ಪಾವಧಿ ಸಾಲ ಎನ್ನುವುದು ಒಂದು ಸಣ್ಣ ನಗದು ಸಾಲವಾಗಿದ್ದು, 1-3 ವರ್ಷಗಳ ಅವಧಿಯಲ್ಲಿ ಸುಲಭವಾಗಿ ಮರುಪಾವತಿ ಮಾಡಬಹುದಾಗಿದೆ. ಇದೊಂದು ಸೀಮಿತ ಸಾಲ ಮೊತ್ತವಾಗಿದ್ದು, ತುರ್ತು ನಗದು ಅಗತ್ಯಗಳ ಪೂರೈಕೆಗೆ ಉಪಯೋಗಿಸಬಹುದಾಗಿದೆ. ಹೀರೋಫಿನ್‌ಕಾರ್ಪ್ ಅಲ್ಪಾವಧಿ ಸಾಲಗಳು, 50,000 ದಿಂದ 1.5 ಲಕ್ಷ ರೂಪಾಯಿವರೆಗೂ ಅಲ್ಪಾವಧಿ ಸಾಲಗಳನ್ನು ಪಡೆದುಕೊಳ್ಳುವುದಕ್ಕೆ ಸಾಲಗಾರರಿಗೆ ಅನುವು ಮಾಡಿಕೊಡುತ್ತದೆ.
ಅಲ್ಪಾವಧಿಯ ಸಾಲವನ್ನು ಪಡೆದುಕೊಳ್ಳುವುದಕ್ಕೆ ಉತ್ತಮ ಮೂಲವೆಂದರೆ, ಅದು ಆನ್ ಲೈನ್ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಮೂಲಕ. ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಸಾಲ ಅರ್ಜಿ ಆರಂಭಿಸಿ ಮತ್ತು ನಿಮಿಷಗಳಲ್ಲಿ ತತ್ ಕ್ಷಣ ಸಾಲ ಅನುಮೋದನೆಯನ್ನು ನಿರೀಕ್ಷಿಸಿ.
ಅಲ್ಪಾವಧಿ ಹಣಕಾಸು ನೆರವು ವಿವಿಧ ಆರ್ಥಿಕ ವೆಚ್ಚಗಳನ್ನು ನಿರ್ವಹಿಸುವುದಕ್ಕೆ ಉಪಯುಕ್ತವಾಗಿರುತ್ತದೆ. ತುರ್ತು ಹಣಕಾಸು ಅಗತ್ಯತೆಗಳ ನಿರ್ವಹಣೆಗಾಗಿ ಅಥವಾ ಮಧ್ಯಮ ಗಾತ್ರದ ವ್ಯಾಪಾರಕ್ಕೆ ಬೆಂಬಲಿಸುವ ವಾಣಿಜ್ಯ ಬಂಡವಾಳದಂತೆ ಕೂಡಾ ಉಪಯೋಗಿಸಬಹುದು. ಮನೆ ದುರಸ್ತಿ, ನವೀಕರಣ, ಶೈಕ್ಷಣಿಕ ಶುಲ್ಕಗಳು, ವೈದ್ಯಕೀಯ ಖರ್ಚುಗಳು ಇತ್ಯಾದಿಗಳೆಲ್ಲವನ್ನೂ ಅಲ್ಪಾವಧಿ ಹಣಕಾಸು ನೆರವಿನ ಅಡಿಯಲ್ಲಿ ಬರುತ್ತದೆ. ಅಲ್ಪಾವಧಿ ಸಾಲ ಮತ್ತು ದೀ
ಅಲ್ಪಾವಧಿ ಸಾಲ ಎನ್ನುವುದು ಎರಡು ವರ್ಷಗಳಿಗಿಂತ ಹೆಚ್ಚಿಲ್ಲದಂತೆ ಕಡಿಮೆ ಅವಧಿಗಾಗಿ ತೆಗೆದುಕೊಳ್ಳಬಹುದಾದ ಭದ್ರತೆ ರಹಿತ ಸಾಲವಾಗಿದೆ, ಆದರೆ ದೀರ್ಘಾವಧಿ ಸಾಲಗಳು ಭದ್ರತೆ ಸಹಿತ ಸಾಲಗಳಾಗಿದ್ದು, ಅನುಮೋದನೆಗಾಗಿ ಮೇಲಾಧಾರ/ಗ್ಯಾರಂಟರ್ ಅಗತ್ಯವಿರುತ್ತದೆ. ದೀರ್ಘಾವಧಿ ಸಾಲಗಳು ಸಾಧಾರಣವಾಗಿ 5 ವರ್ಷಗಳು ಅಥವಾ ಹೆಚ್ಚಿನ ದೀರ್ಘ ಅವಧಿಯ ಸಾಲಗಳಾಗಿರುತ್ತವೆ.
ತುರ್ತು ಹಣಕಾಸಿನ ಅಗತ್ಯತೆಗಳಿಗೆ ಬೆಂಬಲಿಸುವದಕ್ಕಾಗಿ ತಕ್ಷಣ ನಗದು ಸಾಲ ಪಡೆದುಕೊಳ್ಳುವುದಕ್ಕೆ ಹೀರೋಫಿನ್‌ಕಾರ್ಪ್ ನಂತರ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ತತ್ ಕ್ಷಣ ನಗದು ಸಾಲಗಳು ಅಲ್ಪಾವಧಿ ಸಾಲಗಳಾಗಿದ್ದು, 24 ಗಂಟೆಗಳೊಳಗಾಗಿ ಅನುಮೋದನೆಯಾಗುತ್ತದೆ ಮತ್ತು ವಿತರಣೆಯಾಗುತ್ತದೆ.
ಅಲ್ಪಾವಧಿ ಹಣಕಾಸು ನೆರವಿನ ಪ್ರಯೋಜನಗಳು ಹಲವಾರು ಇವೆ: - ತತ್ ಕ್ಷಣ ಸಾಲ ಆಪ್ ಗಳ ಮೂಲಕ ತ್ವರಿತ ಸಾಲ ಅನುಮೋದನೆ - ಸಾಲ ಪ್ರಕ್ರಿಯೆಯಲ್ಲಿ ತೆಗೆದುಕೊಳ್ಳುವ ಸಮಯ ಕಡಿಮೆ ಮಾಡುವ ಮೇಲಾಧಾರ ಮುಕ್ತ - ತುರ್ತು ಸಮಯದಲ್ಲಿ ತುರ್ತು ನಗದು ಅಗತ್ಯಗಳನ್ನು ಪೂರೈಸುತ್ತದೆ - ಜೇಬಿಗೆ ಹೊರೆಯಾಗುವುದಿಲ್ಲ, ಸಾಲಗಾರರು ಅಲ್ಪಾವಧಿ ಹಣದ ನೆರವು ಪಡೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. - ಮರುಪಾವತಿ ಸುಲಭ ಏಕೆಂದರೆ ತೆಗೆದುಕೊಳ್ಳುವ ಸಾಲ ಮೊತ್ತ ಮರುಪಾವತಿಗೆ ಕೈಗೆಟಕುವಂತಿರುತ್ತದೆ
ಅಲ್ಪಾವಧಿ ಸಾಲಗಳಲ್ಲಿ ಕೆಲವೇ ಕೆಲವು ಅನಾನುಕೂಲಗಳಿವೆ: - ಸೀಮಿತ ಸಾಲ ಮೊತ್ತ ಅನುಮೋದನೆಯಾಗುತ್ತದೆ ಮತ್ತು ನಿಮ್ಮ ತಕ್ಷಣದ ನಗದು ಅಗತ್ಯಗಳನ್ನು ಪೂರೈಸುವುದಕ್ಕೆ ಇದು ಸಾಲದೇ ಇರಬಹುದು - ಸಾಲವು ಸ್ವರೂಪದಲ್ಲಿ ಮೇಲಾಧಾರ ಮುಕ್ತವಾಗಿರುವುದರಿಂದ ವಿಧಿಸಲಾಗುವ ಬಡ್ಡಿ ಅಧಿಕವಾಗಿರಬಹುದು - ಪೂರ್ವ ಪಾವತಿ ಮಾಡಿದಲ್ಲಿ, ದಂಡ ಶುಲ್ಕ ವಿಧಿಸಲ್ಪಡಬಹುದು
ಅಲ್ಪಾವಧಿ ಸಾಲಗಳನ್ನು ಒದಗಿಸುವ ಹಲವಾರು ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಭಾರತದಲ್ಲಿವೆ. 1.5 ಲಕ್ಷ ರೂಪಾಯಿವರೆಗೆ ಅಲ್ಪಾವಧಿ ಸಾಲದೊಂದಿಗೆ ಸಾಲಗಾರರಿಗೆ ಸಹಾಯ ಮಾಡುವ ಪ್ರಮುಖ ತತ್ ಕ್ಷಣ ಸಾಲ ಆಪ್ ಗಳ ಪೈಕಿ HeroFinCorp ನಿಂದ ಚಾಲಿತ ಹೀರೋಫಿನ್‌ಕಾರ್ಪ್ ಆಪ್ ಕೂಡಾ ಒಂದಾಗಿದೆ.
ಅಲ್ಪಾವಧಿ ಸಾಲ ಇಎಂಐಗಳನ್ನು ನೆಟ್ ಬ್ಯಾಂಕಿಂಗ್ ಅಥವಾ ಸ್ವಯಂಚಾಲಿತ ಪಾವತಿ ವಿಧಾನದ ಮೂಲಕ ಸುಲಭವಾಗಿ ಮರುಪಾವತಿ ಮಾಡಬಹುದು.
ಅಲ್ಪಾವಧಿ ಸಾಲ ಇಎಂಐಗಳನ್ನು ನೆಟ್ ಬ್ಯಾಂಕಿಂಗ್ ಅಥವಾ ಸ್ವಯಂಚಾಲಿತ ಪಾವತಿ ವಿಧಾನದ ಮೂಲಕ ಸುಲಭವಾಗಿ ಮರುಪಾವತಿ ಮಾಡಬಹುದು.
ಸಾಲ ಮೊತ್ತ ಕಡಿಮೆ ಇರುವುದರಿಂದ ಮತ್ತು ಕಡಿಮೆ ಅವಧಿಗಾಗಿ ತೆಗೆದುಕೊಳ್ಳುವುದರಿಂದ ಸಾಲಕ್ಕೆ ಪ್ರತಿಯಾಗಿ ಯಾವುದೇ ಮೇಲಾಧಾರ ಅಥವಾ ಭದ್ರತೆ ಅಗತ್ಯವಿಲ್ಲ.
ಅಲ್ಪಾವಧಿ ಸಾಲಗಳಿಗಾಗಿ ಮರುಪಾವತಿ ಅವಧಿ ಸಾಧಾರಣವಾಗಿ ಸಾಲದಾತರನ್ನು ಆಧರಿಸಿ 2 ವರ್ಷಗಳವರೆಗೆ ಇರುತ್ತದೆ.