01
ಕನಿಷ್ಠ 15 ವರ್ಷಗಳು ಮತ್ತು ಗರಿಷ್ಠ 58 ವರ್ಷ ವಯಸ್ಸಿನೊಂದಿಗೆ ವಿವಾಹ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ನಿಮ್ಮ ವಿವಾಹಕ್ಕಾಗಿ ನೀವು ಆರಂಭದಿಂದಲೇ ಉಳಿತಾಯ ಮಾಡಲು ಆರಂಭಿಸಿಲ್ಲವಾದರೆ, ಭರ್ಜರಿ ವಿವಾಹಕ್ಕಾಗಿ ಹಣ ಒದಗಿಸುವುದು ಕಷ್ಟವಾಗಬಹುದು. ಅಗತ್ಯವಿರುವ ಹಣಕಾಸನ್ನು ತಕ್ಷಣವೇ ಪಡೆದುಕೊಳ್ಳುವುದಕ್ಕೆ ವಿವಾಹಕ್ಕಾಗಿ ವೈಯಕ್ತಿಕ ಸಾಲ ಎನ್ನುವುದು ಒಂದು ಸುಲಭ ಮಾರ್ಗವಾಗಿದೆ. ತತ್ ಕ್ಷಣ ಸಾಲ ಆಪ್ ಗಳು ಮತ್ತು ಜಾಲತಾಣಗಳ ಮೂಲಕ ಆನ್ಲೈನ್ ತ್ವರಿತ ವೈಯಕ್ತಿಕ ಸಾಲಗಳನ್ನು ಯಾವುದೇ ಒತ್ತಡವಿಲ್ಲದಂತೆ ವಿವಾಹದ ಅಗತ್ಯಗಳಿಗೆ ಏರ್ಪಾಡು ಮಾಡಿ. ವಿವಾಹ ಸಾಲ ಅರ್ಜಿಯ ಆನ್ಲೈನ್ ವಿಧವು ಒಂದು ಭದ್ರತೆ ಮೂಲವಾಗಿದ್ದು, ಸಾಲ ಮೊತ್ತದ ತ್ವರಿತ ವಿತರಣೆಗೆ ಅವಕಾಶ ನೀಡುತ್ತದೆ ಇದರಿಂದ ವಿವಾಹವನ್ನು ಉತ್ತಮವಾಗಿ ಆಚರಿಸುವುದಕ್ಕಾಗಿ ಸಾಲಪಡೆಯುವ ವ್ಯಕ್ತಿಯು ಸಕಾಲದಲ್ಲಿ ಪಾವತಿಗಳನ್ನು ಮಾಡಬಹುದಾಗಿದೆ.
ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ಅನುಕೂಲಕರ ತತ್ ಕ್ಷಣ ಸಾಲ ಆಪ್ ಆಗಿದ್ದು, ಆನ್ಲೈನ್ ನಲ್ಲಿ ವಿವಾಹ ಸಾಲ ಪಡೆದುಕೊಳ್ಳುವುದಕ್ಕೆ ಸೂಕ್ತವಾಗಿದೆ. ಸಾಲ ಅರ್ಜಿ ಪ್ರಕ್ರಿಯೆಯಲ್ಲಿ ಒಳಗೊಂಡ ಹಂತಗಳೆಂದರೆ ಇದು ಕಾಗದರಹಿತ ಸ್ವರೂಪದಲ್ಲಿರುತ್ತದೆ. – ಅರ್ಜಿ, ದಾಖಲೆ ಸಲ್ಲಿಕೆ, ಪರಿಶೀಲನೆ ಮತ್ತು ವಿತರಣೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತದೆ. ಇದರಿಂದ ಗಣನೀಯ ಪ್ರಮಾಣದ ಸಮಯ ಉಳಿತಾಯವಾಗುತ್ತದೆ ಮತ್ತು ನಿಮ್ಮ ಮನೆಯಿಂದಲೇ ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿವಾಹ ಸಾಲ ಪಡೆದುಕೊಳ್ಳುವ ಸೌಕರ್ಯವನ್ನು ಇದು ಒದಗಿಸುತ್ತದೆ.
ಹೀರೋಫಿನ್‌ಕಾರ್ಪ್ ಆಪ್ ಅನ್ನು ನೀವು ಎಕ್ಸ್ ಪ್ಲೋರ್ ಮಾಡಿದಂತೆಲ್ಲಾ, ವಿವಾಹ ಸಾಲದ ಮರುಪಾವತಿ ಬಹಳ ಸುಲಭ ಎನ್ನುವುದನ್ನು ನೀವು ಗಮನಿಸುತ್ತೀರಿ. ಇನ್ ಬ್ಯುಲ್ಟ್ ಇಎಂಐ ಕ್ಯಾಲುಕ್ಯುಲೇಟರ್ ಗೆ ಧನ್ಯವಾದ. ಸಾಲ ಪಡೆಯುವ ವ್ಯಕ್ತಿಗಳು ತಮ್ಮ ಬಜೆಟ್ ಗೆ ಅನುಗುಣವಾಗಿ ಇಎಂಐ ಅನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. ಅನುಗುಣವಾಗಿ ನೀವು ವಿವಾಹ ಆಹ್ವಾನಪತ್ರಿಕೆ, ಉಡುಪುಗಳು, ಸ್ಥಳ, ವಿಮಾನ ಪ್ರಯಾಣ ಟಿಕೆಟ್ ಗಳು ಇತ್ಯಾದಿಯನ್ನು ನೀವು ಯೋಜಿಸಬಹುದು.
ಉತ್ತಮ ಹಣಕಾಸು ಇತಿಹಾಸದೊಂದಿಗೆ, ಸಾಲ ಕಂಪೆನಿಗಳು ಮತ್ತು ಹಣಕಾಸು ಸಂಸ್ಥೆಗಳು ವಿವಾಹ ಸಾಲದ ಮೇಲೆ ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡುತ್ತವೆ. ಕೈಗೆಟಕುವ ಬಡ್ಡಿ ದರವು ಇಎಂಐ ಅನ್ನು ಕೈಗೆಟಕುವಂತೆ ಮಾಡುತ್ತದೆ ಮತ್ತು ಮರುಪಾವತಿ ಸುಲಭವಾಗುತ್ತದೆ. ಒಂದೇ ಸಮಯದಲ್ಲಿ ಅನೇಕ ಖರ್ಚುಗಳಿರುವ ಒಂದು ಸಮಾರಂಭವೆಂದರೆ ಅದುವೇ ವಿವಾಹ. ಆದ್ದರಿಂದ, ನಿಮಗೆ ಸೂಕ್ತವೆನಿಸುವ ಇಎಂಐ ನಿರ್ಧರಿಸಲು ಪ್ರಸಕ್ತ ಬಡ್ಡಿ ದರವನ್ನು ಪರಿಗಣಿಸಬೇಕೆಂದು ಸಲಹೆ ಮಾಡಲಾಗಿದೆ.
ನಿಮ್ಮ ಆಸ್ತಿಗಳು ಮತ್ತು ಹೂಡಿಕೆಗಳು ಲಿಕ್ವಿಡೇಟ್ ಆಗುವುದರಿಂದ ಹೀರೋಫಿನ್‌ಕಾರ್ಪ್ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಉಳಿಸುತ್ತವೆ. ಒಂದು ಗೊಂದಲ ಮುಕ್ತ ವಿಧಾನದಲ್ಲಿ ವಿವಾಹದ ಚೆಕ್ ಲಿಸ್ಟ್ ಪೂರ್ತಿಮಾಡಲು ಈ ಆಪ್ ತತ್ ಕ್ಷಣ ವೈಯಕ್ತಿಕ ಸಾಲಕ್ಕೆ ಅನುವು ಮಾಡಿಕೊಡುತ್ತದೆ. ಹೀರೋಫಿನ್‌ಕಾರ್ಪ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ನೀವು ಹೇಗೆ ಅರ್ಜಿ ಸಲ್ಲಿಸಬೇಕೆಂಬುದನ್ನು ಈ ಕೆಳಗೆ ನೀಡಲಾಗಿದೆ:
ಮೊದಲಿಗೆ, ನಿಮ್ಮ ಫೋನ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಪಡೆದುಕೊಳ್ಳಿ. ಅದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ.
ನಿಮ್ಮ ಖಾತೆ ಸೃಷ್ಟಿಸಲು ನೋಂದಾಯಿಸಿಕೊಳ್ಳಿ. ಇಮೈಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ. ಇದು ಸುರಕ್ಷಿತ ಮತ್ತು ಒನ್ ಟೈಮ್ ಪಾಸ್ವರ್ಡ್ ಉಪಯೋಗಿಸಿ ಪರಿಶೀಲಿಸಲ್ಪಡುತ್ತದೆ.
ಮುಂದಿನ ಹಂತ ನಿಮ್ಮನ್ನು ಇಎಂಐ ಕ್ಯಾಲುಕ್ಯುಲೇಟರ್ ಗೆ ಕರೆದೊಯ್ಯುತ್ತದೆ. ಇಲ್ಲಿ ನೀವು 50,000 ದಿಂದ 1.5 ಲಕ್ಷದ ನಡುವೆ ನಿಮ್ಮ ಇಚ್ಛೆಯ ಸಾಲ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಸಲು ಮೊತ್ತ, ಬಡ್ಡಿ ಮತ್ತು ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಕ್ಯಾಲುಕ್ಯುಲೇಟರ್ ನಿಮಗೆ ನೀಡುತ್ತದೆ. ನಿಮ್ಮ ಬಜೆಟ್ ಗೆ ಹೊಂದಾಣಿಕೆಯಾಗುವ ಸೂಕ್ತ ಇಎಂಆ ಸೆಟ್ ಮಾಡಿ. ಹಸ್ತಚಾಲಿತ ಇಎಂಐ ಕ್ಯಾಲುಕ್ಯುಲೇಟರ್ ಸಂಕೀರ್ಣವಾಗಿರುತ್ತವೆ, ಈ ಸಾಧನ ನಿಮಗೆ ಶೇಕಡಾ 100 ರಷ್ಟು ನಿಖರ ಫಲಿತಾಂಶ ನೀಡುತ್ತದೆ.
ಸಾಲ ಪೂರ್ವ ಮನವಿಗಳನ್ನೆಲ್ಲಾ ಪೂರ್ಣಗೊಳಿಸಿ, ಆಧಾರ್ ಕಾರ್ಡ್ ಸಂಖ್ಯೆ, ನಿಮ್ಮ ಆಧಾರ್ ಕಾರ್ಡ್ ಗೆ ಜೋಡಿಸಲಾಗಿರುವ ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಹೀರೋಫಿನ್‌ಕಾರ್ಪ್ ಗೆ ಅಫಿಲಿಯೇಟ್ ಆಗಿರುವ ಬ್ಯಾಂಕ್ ಖಾತೆಯನ್ನು ನಮೂದಿಸಿ.
ಬ್ಯಾಂಕ್ ಖಾತೆಗೆ ಲಾಗಿನ್ ಮಾಡಿ ಮತ್ತು ನೀವು ಆಗಿಂದಾಗ್ಗೆ ವಹಿವಾಟುಗಳಿಗಾಗಿ ಉಪಯೋಗಿಸುವ ಬ್ಯಾಂಕ್ ಖಾತೆಯ (ವೇತನದಾರರು ತಮ್ಮ ವೇತನ ಬ್ಯಾಂಕ್ ಖಾತೆಯನ್ನು ಮಾತ್ರಾ ಉಪಯೋಗಿಸಬೇಕು) ವಿವರಗಳನ್ನು ಪರಿಶೀಲಿಸಿ
ನಿಮ್ಮ ಮರುಪಾವತಿ ಅಥವಾ ಇ-ಆದೇಶ ಸೆಟಪ್ ಮಾಡಿ ಮತ್ತು ವಿದ್ಯುನ್ಮಾನ ಸಹಿಯೊಂದಿಗೆ ಒಂದೇ ಕ್ಲಿಕ್ ನಲ್ಲಿ ಸಾಲ ಒಪ್ಪಂದಕ್ಕೆ ಸಹಿ ಮಾಡಿ.
ವಿವರಗಳ ಪ್ರಾಸೆಸಿಂಗ್ ಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಅಂತಿಮವಾಗಿ, ಸಾಲ ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಅರ್ಹತಾ ಮಾನದಂಡ ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗಬಹುದು, ಆದರೆ, ಹೀರೋಫಿನ್‌ಕಾರ್ಪ್ ನಲ್ಲಿ ಈ ಕೆಳಗಿನ ಅಂಶಗಳನ್ನು ಪರಿಗಣಿಸುತ್ತಾ ವೈಯಕ್ತಿಕ ಸಾಲ ಪಡೆದುಕೊಳ್ಳಿ:
ವಿವಾಹ ವೈಯಕ್ತಿಕ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು ಮುಖ್ಯವಾಗಿ ಕೆವೈಸಿ ದಾಖಲೆಗಳಾಗಿರುತ್ತವೆ.- ಆಧಾರ್ ಕಾರ್ಡ್ ಅಥವಾ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಮತ್ತು ಭಾವಚಿತ್ರ ಸಹಿತ ಗುರುತಿನ ಚೀಟಿ, ಉದ್ಯೋಗಿಯಾಗಿದ್ದರೆ ವೇತನ ವಿವರಗಳು ಮತ್ತು ಆದಾಯ ಪುರಾವೆಯಂತೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್