H.Ai Bot Logo
H.Ai Bot
Powered by GPT-4
Terms of Service

I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.

ವೈಯಕ್ತಿಕ ಸಾಲ ಆಪ್

ವೈಯಕ್ತಿಕ ಸಾಲ ಆಪ್

ಹಣಕಾಸು ಬಿಕ್ಕಟ್ಟಿನ ಸಮಯಗಳಲ್ಲಿ ಶಾಂತಿಯಿಂದ, ನಿಶ್ಚಿಂತೆಯಿಂದ ಇರಿ. ವೈಯಕ್ತಿಕ ಸಾಲ ಆಪ್ ಎನ್ನುವುದು ಒಂದು ವ್ಯವಸ್ಥಿತ ಡಿಜಿಟಲ್ ವೇದಿಕೆಯಾಗಿದ್ದು, 1.5 ಲಕ್ಷದವರೆಗೆ ತತ್ ಕ್ಷಣ ಸಾಲಗಳನ್ನು ಒದಗಿಸುತ್ತದೆ. ಅನುಭವ ಮತ್ತು ಪರಿಣತಿ ಪೇರೆಂಟ್ ಕಂಪೆನಿಯಾದ ಗೆ ಸೇರುತ್ತದೆ, ಹೀರೋ ಫಿನ್ ಕಾರ್ಪ್, ಈ ಸಂಸ್ಥೆಯ ತತ್ ಕ್ಷಣ ನಗದು ಸಾಲ ಪಡೆದುಕೊಳ್ಳುವ ಪ್ರಕ್ರಿಯೆಯ ಸರೀಕರಣಕ್ಕಾಗಿ ಹೀರೋಫಿನ್‌ಕಾರ್ಪ್ ಅನ್ನು ಪರಿಚಯಿಸಿದೆ. ಹೀರೋಫಿನ್‌ಕಾರ್ಪ್ ಆಪ್ ಅನ್ನು ಬಳಕೆದಾರ-ಸ್ನೇಹಿ ನೇವಿಗೇಷನ್ ಗಳೊದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಹಂತವಾರು ನೋಂದಣಿ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ. ಈ ಆಪ್ ನ ವಿಶಿಷ್ಟತೆಯು ಯಾವುದೇ ಭೌತಿಕ ದಾಖಲೆ ಸಲ್ಲಿಕೆಯ ಅಗತ್ಯವಿಲ್ಲದಂತೆ ಸಂಪೂರ್ಣ ಸಾಲ ಅರ್ಜಿಯನ್ನು ಪೂರ್ಣಗೊಳಿಸುವುದಕ್ಕೆ ಅನುಮತಿಸುತ್ತದೆ.

ವೈಯಕ್ತಿಕ ಸಾಲಗಳೊಂದಿಗೆ ಇರುವ ಒತ್ತಡಪೂರ್ಣ ಅಂಶವೆಂದರೆ, ಬಡ್ಡಿ ದರ. ಹೀರೋಫಿನ್‌ಕಾರ್ಪ್ ಶೇಕಡಾ 1.67 ರಷ್ಟು ಕಡಿಮೆ ಆರಂಭಿಕ ಬಡ್ಡಿದರವನ್ನು ಹೀರೋಫಿನ್‌ಕಾರ್ಪ್ ನೀಡುತ್ತದೆ. ಕಡಿಮೆಯಾಗಿರುವ ಬಡ್ಡಿದರವು ಹಲವಾರು ಬಳಕೆದಾರರು ಆಪ್ ಡೌನ್ಲೋಡ್ ಮಾಡಿಕೊಳ್ಳುವುದಕ್ಕೆ ಆಕರ್ಷಿತರಾಗುವಂತೆ ಮಾಡಿದೆ. 6 ತಿಂಗಳುಗಳಿಂದ 24 ಗಂಟೆಗಳ ಅವಧಿಗಾಗಿ ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಸಾಲಗಳೊಂದಿಗೆ ಸಕಾಲಿಕ ಹಣವನ್ನು ಏರ್ಪಾಟು ಮಾಡಿ.

ಭಾರತದಲ್ಲಿನ ತತ್ ಕ್ಷಣ ಸಾಲ ಆಪ್ ಗಳು, ತಕ್ಷಣ ಹಣ ಏರ್ಪಾಟು ಮಾಡಲು ಅಥವಾ ಜೀವನದ ಗುರಿಗಳನ್ನು ಸಾಧಿಸಲು, ಹಲವಾರು ನಗರಗಳಲ್ಲಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದೆ. ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಅನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹೀರೋಫಿನ್‌ಕಾರ್ಪ್ ನೊಂದಿಗೆ, ಶಿಕ್ಷಣ, ಪ್ರವಾಸ, ಮನೆ ನವೀಕರಣ, ಸಾಲಗಳನ್ನು ತೀರಿಸಲು, ವಿವಾಹ ಅಥವಾ ವೈದ್ಯಕೀಯ ತುರ್ತು ಸ್ಥಿತಿಗಳಂತಹ ವಿಭಿನ್ನ ಉದ್ದೇಶಗಳನ್ನು ಬೆಂಬಲಿಸಲು ನೀವು ತತ್ ಕ್ಷಣ ವೈಯಕ್ತಿಕ ಸಾಲ ಅನುಮೋದನೆ ಪಡೆದುಕೊಳ್ಳಬಹುದು. ಇದೊಂದು ತತ್ ಕ್ಷಣ ಸಾಲ ಆಪ್ ಆಗಿದ್ದು, ಸಾಲ ಪಡೆಯುವವರು ಕೇವಲ 24 ಗಂಟೆಗಳೊಳಗಾಗಿ ಸಾಲ ಮಂಜೂರಾತಿ ಮತ್ತು ವಿತರಣೆಯನ್ನು ಪಡೆದುಕೊಳ್ಳಬಹುದು. ಈಗ, ಸಾಲ ಮಂಜೂರಾತಿಗಾಗಿ ವಾರಗಳ ಕಾಲ ನಿರೀಕ್ಷಿಸುವ ಅಗತ್ಯವಿಲ್ಲ. ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸಾಲ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿ.

ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ಹೀರೋಫಿನ್‌ಕಾರ್ಪ್ ಎನ್ನುವುದು ಆರಂಭದಿಂದ ಕೊನೆಯವರೆಗೂ ಒಂದು ಸುಲಭವಾದ ವೈಯಕ್ತಿಕ ಸಾಲ ಆಪ್ ಆಗಿದೆ. ಸರಳ ಆಪ್ ವೈಶಿಷ್ಟ್ಯಗಳು ಹಣಕಾಸು ತುರ್ತು ಸ್ಥಿತಿಯಲ್ಲಿ ಸಾಲ ಪಡೆಯುವವರಿಗೆ ಬಹು ದೊಡ್ಡ ಪ್ರಯೋಜನಗಳನ್ನು ತರುತ್ತವೆ. ಇದೊಂದು ಚಿಕ್ಕದಾದ, ಸಣ್ಣ ಸಾಲ ಆಪ್ ಆಗಿದ್ದು, ಸಾಲ ಅರ್ಜಿ ಸಲ್ಲಿಕೆಗೆ, ಅನುಮೋದನೆಗೆ ಮತ್ತು ವಿತರಣೆಗಾಗಿ ಸೀಮಿತ ಹಂತಗಳಿರುತ್ತವೆ.

ಭಾರತದಲ್ಲಿ ಹಲವಾರು ವೈಯಕ್ತಿಕ ಸಾಲ ಆಪ್ ಗಳ ನಡುವೆಯೇ, ಹೀರೋಫಿನ್‌ಕಾರ್ಪ್ ಆಪ್ ಅದ್ಭುತ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಹೊಂದಿದ್ದು, ಸಾಲ ಪಡೆಯುವವರ ಪೈಕಿ ಅನೇಕರ ಜೀವನದಲ್ಲಿ ಗಣನೀಯ ಬದಲಾವಣೆಗಳನ್ನು ತಂದಿದೆ. ನಿಮ್ಮ ಕನಸುಗಳನ್ನು ಪೂರೈಸಲು ಹೀರೋಫಿನ್‌ಕಾರ್ಪ್ ಸಕಾಲಿಕ ಹಣ ಒದಗಿಸುವುದರಿಂದ ನಿಮ್ಮ ಗುರಿಗಳನ್ನು ಆಕಾಂಕ್ಷೆಗಳನ್ನು ಜೀವಂತವಾಗಿರಿಸಿಕೊಳ್ಳಿ. ಕೆಳಗೆ ವಿವರಿಸಲಾಗಿರುವ ಮುಖ್ಯ ವೈಶಿಷ್ಟ್ಯಗಳನ್ನು ನೋಡೋಣ:

collateral_free_2a1efcdf25.svg
ಬಳಕೆದಾರ – ಸ್ನೇಹಿ ಇಂಟರ್ಫೇಸ್

ಹೀರೋಫಿನ್‌ಕಾರ್ಪ್ ಆಪ್ ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿರುವ ಹೊಸ ಬಳಕೆದಾರರು ಪ್ರತಿಯೊಂದು ಹಂತದಲ್ಲೂ ಮುಂದುವರಿಯುವುದಕ್ಕೆ ಬಹಳ ಸುಲಭ ಎನ್ನುವುದನ್ನು ಮನಗಾಣುತ್ತಾರೆ. ನೊಂದಣಿ ಪ್ರಕ್ರಿಯೆಯನ್ನು ಸರಿಯಾಗಿ ಪೂರ್ಣಗೊಳಿಸುವುದನ್ನು ಇದು ಖಾತರಿ ಪಡಿಸುತ್ತದೆ.

hassle.png
ಕಾಗದರಹಿತ ದಾಖಲೆ ಸಲ್ಲಿಕೆ

ನೋಂದಣಿಯ ಸಮಯದಲ್ಲಿ ಯಾವುದೇ ಭೌತಿಕ ದಾಖಲೆಗಳ ಅಗತ್ಯವಿರುವುದಿಲ್ಲ. ಕೆವೈಸಿ ವಿವರಗಳ ಮೂಲಕ ಪರಿಶೀಲನೆ ನಡೆಯುತ್ತದೆ ಮತ್ತು ಆದಾಯ ಪುರಾವೆಯನ್ನು ಆನ್ಲೈನ್ ನಲ್ಲಿ ಸಲ್ಲಿಸಬೇಕಾಗುತ್ತದೆ.

minimal-documentation.svg
ಮೇಲಾಧಾರ ರಹಿತ ಸಾಲ

ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲಕ್ಕೆ ಯಾವುದೇ ರೀತಿಯ ಭದ್ರತೆ ಅಥವಾ ಗ್ಯಾರಂಟರ್ ಅಗತ್ಯವಿಲ್ಲ. ಅರ್ಹತಾ ಮಾನದಂಡವನ್ನು ಪೂರೈಸುವವರು ತ್ವರಿತ ಸಾಲಗಳನ್ನು ಪಡೆದುಕೊಳ್ಳಬಹುದು.

small_cash_loan_aaa90e8c34.png
ಸಣ್ಣ ನಗದು ಸಾಲ:

50,000 ದಿಂದ 1.5 ಲಕ್ಷದವರೆಗಿನ ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲದಿಂದ ನಿಮ್ಮ ತುರ್ತು ಹಣಕಾಸು ಅಗತ್ಯತೆಗಳನ್ನು ಪೂರೈಸಿಕೊಳ್ಳಿ.

safetouse.png
ಕಡಿಮೆ ಬಡ್ಡಿ ದರ

ಸಾಮಾನ್ಯವಾಗಿ ಸಾಲ ಮೊತ್ತದ ಮೇಲೆ ಬಡ್ಡಿದರ ಪ್ರಮುಖವಾಗಿ ಪ್ರಭಾವ ಬೀರುತ್ತದೆ. ತಿಂಗಳಿಗೆ ಶೇಕಡಾ 1.67 ರಿಂದ ಆರಂಭವಾಗುವ ಬಡ್ಡಿದರದೊಂದಿಗೆ ಹೀರೋಫಿನ್‌ಕಾರ್ಪ್ ನ ಕಡಿಮೆ ಬಡ್ಡಿದರವು ಪ್ರತಿತಿಂಗಳು ಪಾವತಿಸಬೇಕಾದ ಇಎಂಐಗಳನ್ನು ಸಮತೋಲನಗೊಳಿಸುತ್ತದೆ.

instantDisbursal.png
ತ್ವರಿತ ವಿತರಣೆ

ನೋಂದಾಯಿತ ವಿವರಗಳ ಪರಿಶೀಲನೆಯ ನಂತರ ಕೇವಲ ನಿಮಿಷಗಳಲ್ಲೇ ಸಾಲ ಅನುಮೋದನೆಯಾಗುತ್ತದೆ. ವಿತರಣೆ ತ್ವರಿತವಾಗಿ ನಡೆಯಲಿದ್ದು ಸಾಲಗಾರರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪುತ್ತದೆ.

t6_ecb3678fff.svg
ಯಾವುದೇ ಹಿಡನ್ ಶುಲ್ಕಗಳಿಲ್ಲ

ಇತರ ವೈಯಕ್ತಿಕ ಸಾಲಗಳು ಮತ್ತು ವಿವಿಧ ಸಾಲಗಳಲ್ಲಿ ಇರಬಹುದಾದ, ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಯಾವುದೇ ಹಂತದಲ್ಲೂ ವಿಧಿಸಲಾಗುವುದಿಲ್ಲ.

ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಲಾ ಆಪ್ ಡೌನ್ಲೌಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ

ದಿನಬಳಕೆ ವಸ್ತುಗಳ ಬೆಲೆಏರಿಕೆ, ಸೇವಾಶುಲ್ಕಗಳು, ಮತ್ತು ಒಟ್ಟಾರೆ ಜೀವನದ ಪ್ರಮಾಣಗಳ ಏರಿಕೆಯಿಂದಾಗಿ ವೈಯಕ್ತಿಕ ಸಾಲ ಆಪ್ ಗಳ ಜನಪ್ರಿಯತೆ ಹೆಚ್ಚಾಗಿದೆ. ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಬಳಸುವುದಕ್ಕೆ ನೀವು ತಂತ್ರಜ್ಞಾನ ಪರಿಣಿತರಾಗಬೇಕೆಂದೇನಿಲ್ಲ. ಇದನ್ನು ಬಳಸುವುದು ಬಹಳ ಸರಳ ಮತ್ತು ವಿವಿಧ ರೀತಿಯ ಬಳಕೆದಾರರನ್ನು ಗಮನದಲ್ಲಿರಿಸಿಕೊಂಡು ಇದನ್ನು ವಿನ್ಯಾಸಮಾಡಲಾಗಿದೆ. ಹೀರೋಫಿನ್‌ಕಾರ್ಪ್ ಆಪ್ ಅನ್ನು ಹೇಗೆ ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಿಕೊಳ್ಳಬೇಕು ಎಂಬದರೊಂದಿಗೆ ಆರಂಭಿಸೋಣ:

  • 1


    ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರಾ ಹೀರೋಫಿನ್‌ಕಾರ್ಪ್ ಡೌನ್ಲೋಡ್ ಗೆ ಲಭ್ಯವಿದೆ. ನಿಮ್ಮ ಫೋನ್ ಕೈಗೆತ್ತಿಕೊಳ್ಳಿ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಗಾಗಿ ಹುಡುಕಿ.

     

  • 2

    ಆಪ್ ಡೌನ್ಲೋಡ್ ಆರಂಭಿಸಲು ‘ಇನ್ಸ್ಟಾಲ್‘ ಕ್ಲಿಕ್ ಮಾಡಿ.

     

  • 3

    ಯಶಸ್ವಿಯಾಗಿ ಆಪ್ ಡೌನ್ಲೋಡ್ ಮಾಡಿಕೊಂಡ ನಂತರ, ನಿಮ್ಮ ಫೋನ್ ನಲ್ಲಿ ಆಪ್ ಬಳಕೆ ಆರಂಭಿಸಲು ‘ಓಪನ್‘ ಕ್ಲಿಕ್ ಮಾಡಿ.

     

  • 4

    ನೀವಿರುವ ಸ್ಥಳವನ್ನು ಹುಡುಕಲು ಹೀರೋಫಿನ್‌ಕಾರ್ಪ್ ಗೆ ಅನುವಾಗುವಂತೆ ಲೊಕೇಷನ್ ಸೆಟ್ಟಿಂಗ್ ಗಳನ್ನು ಸಕ್ರಿಯಗೊಳಿಸಿ.

     

  • 5

    ನಂತರ, ನೋಂದಣಿ ಪ್ರಕ್ರಿಯೆ ಆರಂಭಿಸಲು ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ವಿಳಾಸ ನಮೂದಿಸಿ. ಬಳಕೆದಾರ ಸುರಕ್ಷತೆಗಾಗಿ ಈ ವಿವರಗಳನ್ನು ಒಂದು ಒಟಿಪಿ ಮುಖಾಂತರ ಪರಿಶೀಲಿಸಲಾಗುತ್ತದೆ.

ಹೀರೋಫಿನ್‌ಕಾರ್ಪ್ ಆಪ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

st1_76b8d5ed29.png
  • ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಇನ್ಸ್ಟಾಲ್ ಮಾಡಿಕೊಳ್ಳಿ
  • ಇಮೇಲ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಿ, ಈ ಹಂತವನ್ನು ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಯೊಂದಿಗೆ ಸುರಕ್ಷಿತಗೊಳಿಸಲಾಗುತ್ತದೆ
  • ನಿಮ್ಮ ಪ್ರಸಕ್ತ ವಿಳಾಸದ ಪಿನ್ ಕೋಡ್ ನಮೂದಿಸಿ
st2_a2ca962625.png
  • ನಿಮಗೆ ಮತ್ತಷ್ಟು ಉತ್ತಮವಾಗಿ ಸೇವೆ ನೀಡಲು ಅಗತ್ಯವಿರುವ ಅನುಮತಿಯನ್ನು ಹೀರೋಫಿನ್‌ಕಾರ್ಪ್ ಗೆ ಅನುಮತಿಸಿ
  • ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಇನ್ಸ್ ಟೆಂಟ್ ನಗದು ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ
  • ನಿಮ್ಮ ಕೆವೈಸಿ ವಿವರಗಳನ್ನು ಆಧಾರ್, ಪ್ಯಾನ್ ಅಥವಾ ಯಾವುದೇ ಇತರ ಮಾನ್ಯ ದಾಖಲೆಗಳೊಂದಿಗೆ (ಒವಿಡಿಗಳು) ತುಂಬಿ
st3_48f2d9696f.png
  • ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಲು ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಮಾಡಿ
  • ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಮತ್ತು ನಿಮ್ಮ ಕೆಲಸ ಆಯಿತೆಂದರ್ಥ
  • ನಿಮ್ಮ ಮರುಪಾವತಿ ಅಥವಾ ಇ-ಆದೇಶವನ್ನು ಸೆಟ್ ಮಾಡಿ
  • ಒಂದು ಕ್ಲಿಕ್ ನೊಂದಿಗೆ ಸಾಲ ಒಪ್ಪಂದಕ್ಕೆ ಇ-ಸಹಿ ಹಾಕಿ.
instant_Disbursal_cb0b2ac0e9.png
  • ನಿಮ್ಮ ಸಾಲ ಮೊತ್ತವನ್ನು ನಿಮ್ಮ ಖಾತೆಗೆ ನೇರವಾಗಿ ಕ್ರೆಡಿಟ್ ಮಾಡಲಾಗುತ್ತದೆ

ಹೀರೋಫಿನ್‌ಕಾರ್ಪ್ ನ ಪ್ರಮುಖ ವೈಶಿಷ್ಟ್ಯಗಳು

ಹೀರೋಫಿನ್‌ಕಾರ್ಪ್ ಒಂದು ವಿಶ್ವಾಸಾರ್ಹ ಆಪ್ ಆಗಿದ್ದು, ಅನೇಕರಿಗೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಿದೆ. ಅತಿ ವೇಗವಾಗಿ ಮುಂದೆ ಸಾಗುತ್ತಿರುವ ಪ್ರಪಂಚದಲ್ಲಿ ಜನರಲ್ಲಿ ಕಾಯುವಷ್ಟು ಸಮಯ ಇಲ್ಲ. ಹೀರೋಫಿನ್‌ಕಾರ್ಪ್ 24 ಗಂಟೆಗಳೊಳಗಾಗಿ ವೈಯಕ್ತಿಕ ಸಾಲವನ್ನು ಒದಗಿಸುತ್ತದೆ. ಭಾರತದಲ್ಲಿ ಅತ್ಯಂತ ಅನುಕೂಲಕರವಾದ ವೈಯಕ್ತಿಕ ಸಾಲ ಆಪ್ ಗಳ ಪೈಕಿ ಹೀರೋಫಿನ್‌ಕಾರ್ಪ್ ಒಂದಾಗಿರುವುದಕ್ಕೆ ಕಾರಣ ಅದರಲ್ಲಿರುವ ಈ ವಿಶೇಷ ವೈಶಿಷ್ಟ್ಯಗಳಾಗಿವೆ:
hero icon

ಲಭ್ಯವಾಗುವ ಸಾಲ ಮೊತ್ತ 50 ಸಾವಿರದಿಂದ 1.50 ಲಕ್ಷದವರೆಗೆ ಇರುತ್ತದೆ. ಸಾಲ ಮೊತ್ತ ಸೀಮಿತವಾಗಿರುವುದರಿಂದ, ಮರುಪಾವತಿ ಸುಲಭವಾಗುತ್ತದೆ.

hero icon

ನೆಟ್ ಬ್ಯಾಂಕಿಂಗ್, ಸರಳೀಕೃತ ಆನ್ಲೈನ್ ಬ್ಯಾಂಕಿಂಗ್ ಕಾರ್ಯಕಲಾಪಗಳನ್ನು ಹೊಂದಿರುವ ರೀತಿಯಲ್ಲೇ, ಹೀರೋಫಿನ್‌ಕಾರ್ಪ್ ಆಪ್ ಮೂಲಕ ಸಾಲ ಮರುಪಾವತಿ ಕೂಡಾ ಬಹಳ ಸುಲಭವಾಗಿರುತ್ತದೆ

hero icon

ಬಡ್ಡಿದರವು ಸಾಲವನ್ನು ಭಾರವಾಗಿಸುತ್ತದೆ. ಬಡ್ಡಿದರ ಕಡಿಮೆಯಿದ್ದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹಗುರವೆನಿಸುತ್ತದೆ. ಹೀರೋಫಿನ್‌ಕಾರ್ಪ್ ನಲ್ಲಿ ಪ್ರತಿತಿಂಗಳಿಗೆ ವಿಧಿಸಲಾಗುವ ಆರಂಭಿಕ ಬಡ್ಡಿದರವು ಶೇಕಡಾ 1.67 ರಷ್ಟು ಕಡಿಮೆ ಇರುತ್ತದೆ

hero icon

ಕನಿಷ್ಠ ಪ್ರಾಸೆಸಿಂಗ್ ಶುಲ್ಕ @2.5%+ GST (ಅನ್ವಯವಾಗುವ ಪ್ರಕಾರ). ಯಾವುದೇ ಹಂತದಲ್ಲೂ ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ

hero icon

ಆಪ್ ಮುಖಾಂತರ ಸ್ವಯಂಚಾಲಿಕ ಮರುಪಾವತಿ. ನೋಂದಣಿ ಸಮಯದಲ್ಲಿ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಯಿಂದ ಪ್ರತಿತಿಂಗಳೂ ಇಎಂಐ ಮೊತ್ತ ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಯಾವುದೇ ಇತರ ಮೊಬೈಲ್ ಆಪ್ ನಂತೆಯೇ, ವೈಯಕ್ತಿಕ ಸಾಲ ಆಪ್ ಬಳಸುವುದು ಕೂಡಾ ಬಹಳ ಸುಲಭ ಮತ್ತು ಇದು ದಿನದ ಯಾವುದೇ ಸಮಯದಲ್ಲಾದರೂ ಲಭ್ಯವಿರುತ್ತದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ, ನೋಂದಣಿಗಾಗಿ ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಂದುವರಿಸಿ.
ನಿಮ್ಮ ಫೋನ್ ನಲ್ಲಿ ವೈಯಕ್ತಿಕ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. ಆಪ್ ನಲ್ಲಿ ಮುಂದುವರಿಯಿರಿ. ಲಾಗಿನ್ ಮಾಡಿ ಅಥವಾ ಖಾತೆ ರಚಿಸಿ. ಸಾಲ ಮೊತ್ತ ಮತ್ತು ಇಎಂಐ ನಿರ್ಧರಿಸಿ, ವೈಯಕ್ತಿಕ ವಿವರಗಳನ್ನು, ಕೆವೈಸಿ ದಾಖಲೆಗಳನ್ನು ಮತ್ತು ಆದಾಯ ಪುರಾವೆಗಳನ್ನು ಪರಿಶೀಲಿಸಿ. ಸಲ್ಲಿಕೆಯಾದ ನಂತರ, ಪ್ರಕ್ರಿಯೆಗೆ ಕೆಲವು ನಿಮಿಷಗಳ ಕಾಲ ಹಿಡಿಯಬಹುದು. ಯಾವುದೇ ವ್ಯತ್ಯಾಸಗಳು ಕಂಡುಬಾರದೇ ಇದ್ದಲ್ಲಿ, ನೀಡಲಾಗಿರುವ ಬ್ಯಾಂಕ್ ಖಾತೆಯಲ್ಲಿ ತಕ್ಷಣವೇ ಸಾಲ ವಿತರಣೆಯಾಗುತ್ತದೆ.
ಹೀರೋಫಿನ್‌ಕಾರ್ಪ್ ಉಪಯೋಗಿಸುವುದು ಬಹಳ ಸುಲಭ ಮತ್ತು ಇನ್ಸ್ಟಾಲ್ ಮಾಡಿಕೊಂಡಿರುವವರಿಗೆ ಬಹಳ ಅನುಕೂಲಕರವಾಗಿರುತ್ತದೆ. ಇದು ಕೆಲಸ ಮಾಡುವ ರೀತಿ ಅದ್ಭುತವಾಗಿರುತ್ತದೆ ಮತ್ತು ಪ್ರತಿಯೊಂದು ಹಂತವನ್ನೂ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ: 1. ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ 2. ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯೊಂದಿಗೆ ನೋಂದಾಯಿಸಿಕೊಳ್ಳಿ 3. ಪ್ರಸಕ್ತ ಪ್ರದೇಶದ ಪಿನ್ ಕೋಡ್ ನಮೂದಿಸಿ 4. ಇಂಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಮತ್ತು ಸಾಲದ ಅಸಲು ಮೊತ್ತ ಹಾಗೂ ಬಡ್ಡಿದರ ಪರಿಗಣಿಸುತ್ತಾ ನಿಮ್ಮ ಇಚ್ಛೆಯ ಇಎಂಐ ಸೆಟ್ ಮಾಡಿ 5. ಸಲ್ಲಿಕೆಯಾದ ನಂತರ ಕೆವೈಸಿ ದಾಖಲೆಗಳು ಮತ್ತು ಬ್ಯಾಂಕ್ ಖಾತೆಯನ್ನು ಪರಿಶೀಲಿಸಲಾಗುತ್ತದೆ ಮತ್ತು ಸಾಲಗಾರರ ಬ್ಯಾಂಕ್ ಖಾತೆಗೆ ಸಾಲ ಮೊತ್ತ ತಕ್ಷಣವೇ ವಿತರಣೆಯಾಗುತ್ತದೆ
ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ ಟೆಂಟ್ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ನೀವು ಡೌನ್ಲೋಡ್ ಮಾಡಿಕೊಂಡಿರುವ ಆಪ್ ಗಾಗಿ ಅರ್ಹತಾ ಮಾನದಂಡವನ್ನು ತಿಳಿದುಕೊಳ್ಳಿ ಏಕೆಂದರೆ ವಿಭಿನ್ನ ಆಪ್ ಗಳು ವಿಭಿನ್ನ ಅರ್ಹತಾ ಅಗತ್ಯತೆಗಳನ್ನು ಹೊಂದಿರುತ್ತವೆ. ಅದರೊಂದಿಗೆ ಕಡ್ಡಾಯ ದಾಖಲೆಗಳ ವಿವರಗಳ ಸೆಟ್ ಅನ್ನು ಸಿದ್ಧವಾಗಿ ಇರಿಸಿಕೊಳ್ಳಿ ಮತ್ತು 24 ಗಂಟೆಗಳೊಳಗಾಗಿ ತ್ವರಿತ ಸಾಲ ಪಡೆದುಕೊಳ್ಳಲು ಇನ್ಸ್ ಟೆಂಟ್ ಸಾಲ ಆಪ್ ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಿ. ಹಂತಗಳನ್ನು ಅನುಸರಿಸಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಸಲ್ಲಿಕೆಯಾದ ವಿವರಗಳು ಪರಿಶೀಲನೆಗೊಂಡ ನಂತರ, ಅದೇ ದಿನ ಸಾಲ ವಿತರಣೆ ಮಾಡಲಾಗುತ್ತದೆ.
ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ನಂತಹ ವಿಶ್ವಾಸಾರ್ಹ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ. ಆನ್ಲೈನ್ ಸಾಲ ಅರ್ಜಿ ಸಲ್ಲಿಕೆಯನ್ನು ಸರಳ ನೋಂದಣಿ ಪ್ರಕ್ರಿಯೆಯೊಂದಿಗೆ ಆರಂಭಿಸಿ. ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಮೇಲಾಧಾರ ಮುಕ್ತವಾಗಿರುತ್ತವೆ ಮತ್ತು ತತ್ ಕ್ಷಣದ ಆಧಾರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಸಹಾಯವಾಗುವ ಕಾಗದ ರಹಿತ ದಾಖಲೆ ಸಲ್ಲಿಕೆ ಪ್ರಕ್ರಿಯೆಯನ್ನು ಅನುಸರಿಸಿ.
ಸ್ಮಾರ್ಟ್ ಫೋನ್ ಗಳಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳ ಮೂಲಕ ಆನ್ಲೈನ್ ವೈಯಕ್ತಿಕ ಸಾಲಗಳನ್ನು ಪಡೆದುಕೊಳ್ಳುವುದು ಸುಲಭ. ಒಂದು ಆನ್ಲೈನ್ ತತ್ ಕ್ಷಣ ಸಾಲ ಆಪ್ ಉಪಯೋಗಿಸಿ, 24 ಗಂಟೆಗಳೊಳಗಾಗಿ ಮಂಜೂರಾಗುವಂತಹ ವೈಯಕ್ತಿಕ ಸಾಲವನ್ನು ನೀವು ಪಡೆದುಕೊಳ್ಳಬಹುದು. ವೈಯಕ್ತಿಕ ಸಾಲ ಅರ್ಜಿಗಾಗಿ ಶಾಖೆಗೆ ಭೇಟಿ ನೀಡಿ ಅಲ್ಲಿ ಗಂಟೆಗಟ್ಟಲೆ ನಿರೀಕ್ಷಿಸುವುದಕ್ಕೆ ಬದಲಿಗೆ ನೀವು ಈಗ ನಿಮ್ಮ ಮನೆಯಿಂದಲೇ ನಿಮ್ಮ ಅನುಕೂಲಕ್ಕೆ ತಕ್ಕಂತೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.
ಗೂಗಲ್ ಪ್ಲೇ ಸ್ಟೋರ್ ನಂತಹ ವಿಶ್ವಾಸಾರ್ಹ ಮೂಲಗಳಿಂದ ತತ್ ಕ್ಷಣ ಸಾಲ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಅಥವಾ URL ನಿಂದ ಆರಂಭವಾಗುವ ಸುರಕ್ಷಿತ ಸಾಲ https:// ಜಾಲತಾಣಕ್ಕೆ ಭೇಟಿನೀಡುವುದು ಸುರಕ್ಷಿತ. ಅಷ್ಟೇ ಅಲ್ಲದೇ, ಭದ್ರತಾ ಕಾರಣಗಳಿಗಾಗಿ, ಇನ್ಸ್ ಟೆಂಟ್ ಸಾಲ ಆಪ್ ಗಳು ಒಟಿಪಿ ಪರಿಶೀಲನೆಗಳನ್ನು ಒಳಗೊಂಡಿರುತ್ತವೆ, ಇದು ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಇಡಿ ಮೂಲಕ ಸಾಲ ನೋಂದಣಿಯ ಮೊದಲ ಹಂತವಾಗಿದ್ದು, ಇದು ಬಹಳ ಪ್ರಮುಖವಾಗಿರುತ್ತದೆ. ಸುರಕ್ಷಾ ಸಲಹೆಗಳೊಂದಿಗೆ, ಸಾಲ ಪಡೆದುಕೊಳ್ಳುವವರು, ಸಾಲ ಅರ್ಜಿ ಸಲ್ಲಿಸುವ ಸಮಯದಲ್ಲಿ ತಮ್ಮ ತಿಳುವಳಿಕೆಯನ್ನು ಉಪಯೋಗಿಸಬೇಕು ಅಂದರೆ, ಸಾಲ ಆಪ್ ನ್ಯಾಯಯುತವಲ್ಲವೆಂದು ಯಾವುದೇ ಹಂತದಲ್ಲಿ ನಿಮಗೆ ಭಾಸವಾದರೆ, ಮತ್ತು ಅದು ಅಸಮಂಜಸ ವಿವರಗಳಿಗಾಗಿ ಕೇಳಿದರೆ, ನಿಮ್ಮ ಸಾಧನದಿಂದ ಆ ಆಪ್ ಅನ್ನು ಅನ್ ಇನ್ಸ್ಟಾಲ್ ಮಾಡುವುದು ಉತ್ತಮ.
ಸಾಲ ಪಡೆಯುವವರು ಆನ್ಲೈನ್ ವೈಯಕ್ತಿಕ ಸಾಲ ಆಪ್ ಗಳು ಸುರಕ್ಷಿತವೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸಬಹುದು. ವೈಯಕ್ತಿಕ ಸಾಲ ಆಪ್ ಅನ್ನು ಅದರ ಅಧಿಕೃತ ಜಾಲತಾಣದೊಂದಿಗೆ ಹೊಂದಿಸಿ ನೋಡಿ. ಸಾಲ ಆಪ್ ಮತ್ತು ಅದರ ಸಂಬಂಧಿತ ಜಾಲತಾಣ ಎರಡರಲ್ಲೂ ಮಾಹಿತಿಯ ಸ್ಥಿರತೆಯನ್ನು ಪರೀಕ್ಷಿಸಿ ನೋಡಿ. ಯಾವುದೇ ಹೊಂದಾಣಿಕೆಯಿಲ್ಲದ ದತ್ತಾಂಶ ಕಂಡುಬಂದರೆ, ಅಂತಹ ಸಾಲ ಆಪ್ ಗಳಿಂದ ಸಾಲ ಪಡೆದುಕೊಳ್ಳಬಾರದೆಂದು ಸಲಹೆ ಮಾಡಲಾಗಿದೆ. ಅಲ್ಲದೇ, ಎಲ್ಲಾ ವಿಶ್ವಾಸಾರ್ಹ ಕಂಪೆನಿಗಳಿಗೂ ತಮ್ಮ ಸಾಲ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಸ್ಕೋರ್ ಗಳೊಂದಿಗೆ ಲಭ್ಯವಿರುತ್ತದೆ. ವೈಯಕ್ತಿಕ ಸಾಲ ಆಪ್ ಗಳ ಜನಪ್ರಿಯತೆಯನ್ನು ತಿಳಿದುಕೊಳ್ಳಲು ಈ ಸ್ಕೋರ್ ನಿಮಗೆ ಸಹಾಯ ಮಾಡುತ್ತದೆ.