1
ಗುರುತು ಪುರಾವೆ – ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಮತದಾರ ಗುರುತಿನ ಚೀಟಿ/ಚಾಲನಾ ಪರವಾನಗಿ
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಹೀರೋಫಿನ್‌ಕಾರ್ಪ್ಸಾಲ ಆಪ್ ಎನ್ನುವುದು, ಆಧುನಿಕ ದಿನದ ಫ್ಲೆಕ್ಸಿಬಲ್ ಡಿಜಿಟಲ್ ವೇದಿಕೆಗಳಲ್ಲಿ ಒಂದಾಗಿದ್ದು, ಸುಲಭ ನೋಂದಣಿ ಮತ್ತು ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇಲ್ಲದಂತೆ ಸಾಲ ವಿತರಣೆ ಪ್ರಕ್ರಿಯೆಗೆ ಅವಕಾಶ ನೀಡುತ್ತದೆ. ಇದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಲಭ್ಯವಿದೆ ಮತ್ತು ಆಂಡ್ರಾಯ್ಡ್ ಫೋನ್ ಗಳೊಂದಿಗೆ ಹೊಂದಾಣಿಕೆಯಾಗುತ್ತದೆ. ಆದ್ದರಿಂದ, ಇತ್ತೀಚಿನ ಎಲೆಕ್ಟ್ರಾನಿಕ್ಸ್, ವೈಯಕ್ತಿಕ ಗ್ಯಾಡ್ಜೆಟ್ ಗಳು ಇತ್ಯಾದಿ ಖರೀದಿಸುವುದಕ್ಕಾಗಿ, ಗ್ರಾಹಕ ಉಪಭೋಗ್ಯ ಸಾಲ ಅಗತ್ಯ ನಿಮಗಿದ್ದರೆ, ಈಗಲೇ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಆರಂಭಿಸಲು 100% ರಷ್ಟು ಸುರಕ್ಷಿತವಾದ ಸಾಲ ಅರ್ಜಿ ಪ್ರಕ್ರಿಯೆ ಆರಂಭಿಸಿ.
ಧೋರಣೆ ಬದಲಾದಾಗ, ನಮ್ಮ ವ್ಯಕ್ತಿಗತ ಗ್ಯಾಡ್ಜೆಟ್ ಗಳು ಮತ್ತು ಗೃಹೋಪಕರಣಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವಿರುತ್ತದೆ. ಆದಾಗ್ಯೂ, ಹಣದ ಕೊರತೆಯಿಂದಾಗಿ ಈಗಿರುವ ವಸ್ತುಗಳನ್ನು ಹೊಸ ವಸ್ತುಗಳೊಂದಿಗೆ ಬದಲಾಯಿಸಲು ಸಾಧ್ಯವಾಗುವುದಿಲ್ಲ. ಈ ಮುಖ್ಯ ಕಾರಣಕ್ಕಾಗಿಯೇ ಹಣಕಾಸು ಸಂಸ್ಥೆಗಳು, ಸಮೂಹಗಳಿಗೆ ಇತ್ತೀಚಿನ ಗ್ರಾಹಕ ಉಪಭೋಗ್ಯ ಉತ್ಪನ್ನಗಳ ಲಭ್ಯತೆ ಸುಲಭವಾಗುವಂತೆ ಮಾಡಲು ಆನ್ಲೈನ್ ಗ್ರಾಹಕ ಉಪಭೋಗ್ಯ ಸಾಲಗಳನ್ನು ಪರಿಚಯಿಸಿವೆ.
ಸಾಲ ಪಡೆಯುವ ವ್ಯಕ್ತಿಗಳು ಹೀರೋಫಿನ್‌ಕಾರ್ಪ್ ವೈಯಕ್ತಿಕ ಸಾಲ ಆಪ್ ಉಪಯೋಗಿಸಿ, 15,000 ದಿಂದ 1.5 ಲಕ್ಷಗಳವರೆಗಿನ ವೈಯಕ್ತಿಕ ಸಾಲಗಳ ವಿವಿಧ ವಿಧಗಳನ್ನು ಪಡೆದುಕೊಳ್ಳಬಹುದು. ಗ್ರಾಹಕ ಉಪಭೋಗ್ಯ ಸಾಲ ಕೂಡಾ ಒಂದು ವೈಯಕ್ತಿಕ ಸಾಲವಾಗಿದ್ದು, ಶೂನ್ಯ ಡೌನ್ ಪೇಮೆಂಟ್ ಮತ್ತು ಕೈಗೆಟಕುವ ದರ ಇಎಂಐಗಳೊಂದಿಗೆ ಸುಲಭವಾಗಿ ಅನುಮೋದನೆಯಾಗಬಹುದಾಗಿದೆ.
ನಿಮ್ಮ ಮಾಸಿಕ ಇಎಂಐಗಳ ಬಗ್ಗೆ ನೀವು ಚಿಂತಿತರಾಗಿದ್ದರೆ, ಮುಂಗಡವಾಗಿಯೇ ಗ್ರಾಹಕ ಉಪಭೋಗ್ಯ ಸಾಲ ಕಂತುಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆಪ್ ನಲ್ಲಿ ಲಭ್ಯವಿರುವ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಬಹುದು. ನಿಮ್ಮ ಬಡ್ಜೆಟ್ ಗೆ ಅನುಗುಣವಾಗಿ ನೀವು ಇಎಂಐಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು. ಸೆಕೆಂಡುಗಳಲ್ಲಿ ನಿಖರ ಇಎಂಐ ಫಲಿತಾಂಶಗಳನ್ನು ತಿಳಿದುಕೊಳ್ಳಲು ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರಗಳ ವಿವಿಧ ವೇರಿಯೇಷನ್ ಗಳನ್ನು ಪರೀಕ್ಷಿಸಿ.
ಗ್ರಾಹಕ ಉಪಭೋಗ್ಯ ಸಾಲ ಎನ್ನುವುದು ಪ್ರತಿ ತಿಂಗಳೂ ಕೈಗೆಟಕುವ ದರದಲ್ಲಿ ಪಾವತಿಸಬಹುದಾದ ಬಡ್ಡಿ ದರದಲ್ಲಿ ಲಭ್ಯವಿದೆ. ಗ್ರಾಹಕ ಉಪಭೋಗ್ಯ ಸಾಲಗಳ ಮೇಲಿನ ಬಡ್ಡಿದರ 10% ರಿಂದ ಆರಂಭವಾಗುತ್ತದೆ ಮತ್ತು ಇದು ಸಾಲದಾತರಿಂದ ಸಾಲದಾತರಿಗೆ ವ್ಯತ್ಯಾಸವಾಗುತ್ತದೆ. ಕೆಲವು ಹಣಕಾಸು ಸಂಸ್ಥೆಗಳು ವಿಶೇಷವಾಗಿ ಹಬ್ಬಗಳ ಋತುವಿನಲ್ಲಿ 0% ಬಡ್ಡಿದರದಲ್ಲಿ ಗ್ರಾಹಕ ಉಪಭೋಗ್ಯ ಸಾಲಗಳನ್ನು ನೀಡುತ್ತವೆ.
ಬಡ್ಡಿ ದರ ಹೊರತುಪಡಿಸಿ, ಆನ್ಲೈನ್ ಇನ್ಸ್ ಟೆಂಟ್ ಗ್ರಾಹಕ ಉಪಭೋಗ್ಯ ಸಾಲಗಳು ಕಡಿಮೆ ಪ್ರಾಸೆಸಿಂಗ್ ಶುಲ್ಕ ವಿಧಿಸುತ್ತವೆ. ಹೆಚ್ಚಿನ ಸಾಲದಾತರು ಸಾಲ ಮೊತ್ತದ 1-3% ರ ನಡುವಿನ ಸಾಧಾರಣ ಶುಲ್ಕಗಳನ್ನು ಒಳಗೊಂಡಿವೆಯಾದರೂ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ.
ಗ್ರಾಹಕ ಉಪಭೋಗ್ಯ ಸಾಲಕ್ಕಾಗಿನ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಕಾಗದ ರಹಿತ ದಾಖಲೆ ಸಲ್ಲಿಕೆಯನ್ನು ಒಳಗೊಂಡಿರುತ್ತದೆ. ಸಾಲ ಪ್ರಾಸೆಸಿಂಗ್ ನಲ್ಲಿ ಇದು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು 24 ಗಂಟೆಗಳಲ್ಲಿ ತ್ವರಿತ ಅನುಮೋದನೆಗೆ ಅನುವು ಮಾಡಿಕೊಡುತ್ತದೆ. ಗ್ರಾಹಕ ಉಪಭೋಗ್ಯ ಸಾಲಕ್ಕಾಗಿ ಅಗತ್ಯವಿರುವ ಮೂಲ ದಾಖಲೆಗಳಲ್ಲಿ ಈ ಕೆಳಗಿನವು ಇರುತ್ತವೆ:
ಗುರುತು ಪುರಾವೆ – ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಮತದಾರ ಗುರುತಿನ ಚೀಟಿ/ಚಾಲನಾ ಪರವಾನಗಿ
ನಿವಾಸ ಪುರಾವೆ – ಪಾಸ್ ಪೋರ್ಟ್ ಅಥವಾ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್
ನಿಮ್ಮ ಬ್ಯಾಂಕ್ ಶಾಖೆಯಿಂದ ಸಹಿ ಮಾಡಲ್ಪಟ್ಟ ಅಥವಾ ಪ್ರಮಾಣಿತವಾದ ಇಸಿಎಸ್ (ವಿದ್ಯುನ್ಮಾನ ಕ್ಲಿಯರಿಂಗ್ ಸೇವೆಗಳು) ಅಥವಾ ಇಎನ್ ಎ ಸಿ ಹೆಚ್ ಸಂಪೂರ್ಣ ಆನ್ಲೈನ್ ಪ್ರಕ್ರಿಯೆ
ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಗ್ರಾಹಕ ಉಪಭೋಗ್ಯ ಸಾಲಗಳು ವೇತನದಾರರು ಹಾಗೂ ಸ್ವ ಉದ್ಯೋಗಿಗಳು ಇಬ್ಬರಿಗೂ ಮುಕ್ತವಾಗಿರುತ್ತವೆ. ಸಾಲ ಪಡೆಯುವ ವ್ಯಕ್ತಿ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
ಕನಿಷ್ಠ ವಯಸ್ಸು ಮಿತಿ 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 58 ವರ್ಷಗಳು
ಕನಿಷ್ಠ ಆದಾಯ ಪ್ರತಿ ತಿಂಗಳಿಗೆ 15,000 ರೂಪಾಯಿ.
ವೇತನದಾರರಿಗೆ ಮತ್ತು ಸ್ವ ಉದ್ಯೋಗಿಗಳಿಗೆ ವ್ಯಾಪಾರ ಸ್ಥಿರತೆಗಾಗಿ 1-2 ವರ್ಷಗಳ ಕನಿಷ್ಠ ಕೆಲಸದ ಅನುಭವ
ನಿಮ್ಮ ಆಧಾರ್ ಕಾರ್ಡ್ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಜೋಡಿಸಲ್ಪಟ್ಟಿದ್ದರೆ, ಮೇಲಿನ ದಾಖಲೆಗಳು ಕಡ್ಡಾಯವಲ್ಲ. *
ಬ್ರಾಂಡೆಡ್ ಫೋನಿನ ಇತ್ತೀಚಿನ ಮಾದರಿಗೆ ಅಪ್ ಗ್ರೇಡ್ ಮಾಡಲು ಅಥವಾ ಟಿವಿ ಪರದೆಯನ್ನು ದೊಡ್ಡ ಮತ್ತು ಉತ್ತಮವಾದುದಕ್ಕೆ ಬದಲಾಯಿಸಲು ಯಾರು ತಾನೇ ಬಯಸುವುದಿಲ್ಲ! ಈ ಐಷಾರಾಮಿಗಳು ನಮ್ಮ ಜೀವನದ ಭಾಗವಾಗಿವೆ ಮತ್ತು ಅವುಗಳನ್ನು ಉತ್ತಮ ದರದಲ್ಲಿ ಸ್ವಂತ ಮಾಡಿಕೊಳ್ಳಲು ನಾವು ಬಯಸುತ್ತೇವೆ, ಹೌದಲ್ಲವೇ? ಗ್ರಾಹಕ ಉಪಭೋಗ್ಯ ಸಾಲ ಆನ್ಲೈನ್ ವೈಯಕ್ತಿಕ ಸಾಲದಂತೆಯೇ ಮೇಲಾಧಾರ ಮುಕ್ತ ಸೌಲಭ್ಯವಾಗಿದೆ. ಒಂದು ತತ್ ಕ್ಷಣ ಉಪಭೋಗ್ಯ ಸಾಲವನ್ನು ನಿಮಿಷಗಳಲ್ಲೇ ಪಡೆದುಕೊಳ್ಳಬಹುದು. ಆದ್ದರಿಂದ, ನಿಮ್ಮ ಆತ್ಮೀಯರಿಗೆ ಕೆಲವು ಹೈ-ಎಂಡ್ ಆಶ್ಚರ್ಯಗಳ ಉಡುಗೊರೆ ನೀಡುವುದಕ್ಕಾಗಿ, ಸಕಾಲದಲ್ಲಿ ಅದನ್ನು ಉಪಯೋಗಿಸುವುದು ಉತ್ತಮ ಚಿಂತನೆಯಾಗಿದೆ. ಗ್ರಾಹಕ ಉಪಭೋಗ್ಯ ಸಾಲವು ಈ ಕೆಳಗಿನ ಪ್ರಯೋಜನಗಳೊಂದಿಗೆ ಈ ತಂತ್ರಜ್ಞಾನ ಉತ್ಪನ್ನಗಳ ಇತ್ತೀಚಿನ ಆವೃತ್ತಿ ಖರೀದಿಯನ್ನು ಸಾಧ್ಯವಾಗಿಸುತ್ತದೆ:
ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ಗ್ರಾಹಕ ಉಪಭೋಗ್ಯ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮುನ್ನ ಅದನ್ನು ಸರಿಪಡಿಸಿ. ಅಲ್ಲದೇ ಇತರ ಹಣಕಾಸು ಸಂಸ್ಥೆಗಳ ತತ್ ಕ್ಷಣ ಸಾಲ ಆಪ್ ಉಪಯೋಗಿಸಿ ಅವರ ಬಡ್ಡಿ ದರಗಳು, ಪ್ರಾಸೆಸಿಂಗ್ ಶುಲ್ಕಗಳು, ಪೂರ್ವ ಪಾವತಿ ಶುಲ್ಕಗಳು ಇತ್ಯಾದಿ ಹೋಲಿಕೆ ಮಾಡಿ. ಈ ನಿಯಮಗಳು ಮತ್ತು ಷರತ್ತುಗಳನ್ನು ಮೌಲ್ಯಮಾಪನ ಮಾಡಿ ಮತ್ತು ನಿಮಗೆ ಅತ್ಯುತ್ತಮ ಡೀಲ್ ನೀಡುವ ಸಾಲದಾತರನ್ನು ಆಯ್ಕೆ ಮಾಡಿ.