Apply for Instant Loan

Download Our App

Apply for Instant Loan

Download Our App

Play Store

Apply for Instant Loan

Download Our App

Arrow Arrow

ವೇತನ ಮುಂಗಡ ಸಾಲ

ನಾವೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸಲು ನಮಗೆ ಪ್ರೇರಣೆ ನೀಡುವ ಗಳಿಕೆಯ ಮೂಲವಾಗಿರುವ ವೇತನಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ ಕೆಲವು ಅನಿರೀಕ್ಷಿತ ಪರಿಸ್ಥಿತಿಗಳಿದ್ದು, ಒಂದು ತಿಂಗಳ ವೇತನ ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಉದ್ಯೋಗಿಗಳು ತಮ್ಮ ಕಂಪೆನಿಯಿಂದಲೇ ಅಥವಾ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಂದ (ಎನ್ ಬಿಎಫ್ ಸಿ ಗಳು) ಮುಂಗಡ ವೇತನದ ಪ್ರಯೋಜನ ಪಡೆದುಕೊಳ್ಳಬಹುದು. ಆದ್ದರಿಂದ, ನಿಮ್ಮ ಮುಂದಿನ ತಿಂಗಳ ವೇತನ ಬರುವವರೆಗೂ ಮುಂಗಡವಾಗಿ ಆನ್ಲೈನ್ ಸುಲಭ ವೇತನ ಸಾಲ ಪಡೆದುಕೊಳ್ಳಬಹುದಾಗಿದೆ.

ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕಗಳು, ದುರಸ್ತಿಗಳು, ಯುಟಿಲಿಟಿ ಬಿಲ್ ಪಾವತಿ ಇತ್ಯಾದಿಗಳನ್ನು ವೇತನ ಮುಂಗಡ ಸಾಲದಿಂದ ಪೂರೈಸಬಹುದು. ವೇತನ ಸಾಲವನ್ನು ಅಲ್ಪಾವಧಿಗಾಗಿ ತೆಗೆದುಕೊಳ್ಳುವುದರಿಂದ, ಅದಕ್ಕೆ ಪಾವತಿಸಬೇಕಾದ ಇಎಂಐ ಕೈಗೆಟಕುವಂತೆ ಮತ್ತು ಸುಲಭವಾಗಿ ಮರುಪಾವತಿ ಮಾಡುವಂತೆ ಇರುತ್ತದೆ. ಇದು ವೇತನ ಮುಂಗಡವನ್ನು, ದೀರ್ಘಾವಧಿ ಸಾಲಕ್ಕಿಂತ ಉತ್ತಮವಾದುದಾಗಿ ಮಾಡುತ್ತದೆ.

ನೀವು ನಿಮ್ಮದೇ ಆನ್ಲೈನ್ ವೇತನ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಬೇರೆಲ್ಲಿಂದಾದರೂ ಹೆಚ್ಚುವರಿ ಹಣಕಾಸು ನೆರವು ಕೇಳುವಂತಹ ಒತ್ತಡ ಅಥವಾ ಮುಜುಗರಕ್ಕೆ ಒಳಗಾಗುವ ಅಗತ್ಯವಿರುವುದಿಲ್ಲ. ಹೀರೋಫಿನ್‌ಕಾರ್ಪ್ ನಿಂದ ತತ್ ಕ್ಷಣ ಸಾಲ ಸೌಲಭ್ಯವು ಸರಳ ಕಾಗದರಹಿತ ಅರ್ಜಿ ಸಲ್ಲಿಕೆಯೊಂದಿಗೆ ಮುಂಗಡ ವೇತನ ಸಾಲದ ಮೂಲದಂತೆ ಕೆಲಸ ಮಾಡುತ್ತದೆ.

ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
Salary Advance Loan
Salary Advance

ವೇತನ ಮುಂಗಡ ಸಾಲಕ್ಕಾಗಿ ಹೀರೋಫಿನ್‌ಕಾರ್ಪ್ ಏಕೆ?

ಹೀರೋಫಿನ್‌ಕಾರ್ಪ್ ಎನ್ನುವುದು ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಆಗಿದ್ದು, ಹೀರೋಫಿನ್‌ಕಾರ್ಪ್ ನಿಂದ ಚಾಲಿತವಾಗಿದೆ. ವೇತನ ಮುಂಗಡ ಸಾಲದ ತ್ವರಿತ ಅನುಮೋದನೆ ನಿರೀಕ್ಷಿಸುವುದಕ್ಕೆ ಇದೊಂದು ಸರಿಯಾದ ಆನ್ಲೈನ್ ವೇದಿಕೆಯಾಗಿದೆ. ತುರ್ತು ಮುಂಗಡ ಹಣದ ಅಗತ್ಯವಿರುವ ಸಾಲ ಪಡೆಯುವ ವ್ಯಕ್ತಿಗಳು ಹೀರೋಫಿನ್‌ಕಾರ್ಪ್ ಮೂಲಕ 50,000 ದಿಂದ 1.5 ಲಕ್ಷ ರೂಪಾಯಿವರೆಗೂ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ತತ್ ಕ್ಷಣ ವೇತನ ಮುಂಗಡ ಸಾಲ ಪಡೆಯುವುದಕ್ಕಾಗಿ ಇರುವ ಪ್ರಕ್ರಿಯೆಯು ಕಾಗದ ರಹಿತ ದಾಖಲೆ ಸಲ್ಲಿಕೆ ಹಾಗೂ ರಿಯಲ್ ಟೈಮ್ ಪರಿಶೀಲನೆ ಒಳಗೊಂಡಿರುತ್ತದೆ. ಪರಿಶೀಲನೆ ಹಾಗೂ ಅನುಮೋದನೆಯಾದ ನಂತರ 24 ಗಂಟೆಗಳೊಳಗಾಗಿ ವಿತರಣೆಯಾಗುತ್ತದೆ.

ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಂಡಿರುವ ಹೀರೋಫಿನ್‌ಕಾರ್ಪ್ ನೊಂದಿಗೆ, ತೆಗೆದುಕೊಂಡಿರುವ ಮುಂಗಡ ಸಾಲವನ್ನು ನಿರ್ವಹಿಸಲು ಮತ್ತು ಬಡ್ಡಿದರ, ಇಎಂಐ ಮತ್ತು ಮರುಪಾವತಿ ಅವಧಿಯನ್ನು ಎಲ್ಲಿಂದ ಬೇಕಾದರೂ ನಿಮ್ಮ ಬೆರಳ ತುದಿಯಲ್ಲೇ ಪರಿಶೀಲಿಸುವುದು ಬಹಳ ಸುಲಭ. ಆದ್ದರಿಂದ ಹೀರೋಫಿನ್‌ಕಾರ್ಪ್ ನಿಂದ ಒಂದು ಅಪಾಯ ಮುಕ್ತ ಅಲ್ಪಾವಧಿ ಸಾಲ ಪಡೆದುಕೊಳ್ಳಿ ಮತ್ತು 1 ರಿಂದ 2 ವರ್ಷಗಳ ಫ್ಲೆಕ್ಸಿಬಲ್ ಅವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮರುಪಾವತಿಸಿ.

ಸಾಲ ಮೊತ್ತ, ಬಡ್ಡಿ ಮತ್ತು ಅವಧಿಯ ಆಧಾರದ ಮೇಲೆ ಮುಂಗಡ ವೇತನ ಸಾಲಗಳ ಮೇಲೆ ಇಚ್ಛೆಯ ಇಎಂಐ ಪಡೆದುಕೊಳ್ಳುವುದಕ್ಕಾಗಿ ಹೀರೋಫಿನ್‌ಕಾರ್ಪ್ ಆಪ್ ನಲ್ಲಿರುವ ಅಂತರ್ಗತ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ.

ಪ್ರಸಕ್ತ ತಿಂಗಳಿನ ವೇತನ ಖರ್ಚಾಗಿ ಖಾಲಿಯಾದಾಗ, ಆನ್ಲೈನ್ ಮುಂಗಡ ವೇತನ ಸಾಲ ಎನ್ನುವುದು ಜೀವರಕ್ಷಕವಾಗುತ್ತದೆ. ಆನ್ಲೈನ್ ನಲ್ಲಿ ವೇತನ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಬಹಳ ಉತ್ತಮ ಏಕೆಂದರೆ ಔಪಚಾರಿಕತೆಗಳಿಗಾಗಿ ಶಾಖೆಗೆ ಖುದ್ದಾಗಿ ಭೇಟಿನೀಡುವಂತಹ ಗೋಜಲುಗಳಿರುವುದಿಲ್ಲ. ನಿಮಗೆ ಬೇರೆನಾದರೂ ತುರ್ತು ಸ್ಥಿತಿಗಳಿಲ್ಲದ ಹೊರತು, 50, 000 ದಿಂದ 1,5 ಲಕ್ಷದವರೆಗಿನ ಅಲ್ಪಾವಧಿ ಸಾಲಗಳು ನಿಮ್ಮ ತಿಂಗಳ ಖರ್ಚುವೆಚ್ಚಗಳನ್ನು ನಿಭಾಯಿಸಲು ಸಾಕಾಗುತ್ತದೆ. ಮುಂಗಡವಾಗಿ ಪಡೆದುಕೊಂಡಂತಹ ವೇತನ ಸಾಲವು ತಿಂಗಳಿನ ಬಾಕಿ ದಿನಗಳ ಬಜೆಟ್ ಯೋಜನೆಗೆ ಅನುವು ಮಾಡಿಕೊಡುತ್ತದೆ. ಹೀಗಾಗಿ, ಹೀರೋಫಿನ್‌ಕಾರ್ಪ್ ನಂತರ ತತ್ ಕ್ಷಣ ಸಾಲ ಆಪ್ ಗಳ ಮೂಲಕ ಮುಂಗಡ ವೇತನ ಸಾಲಗಳಿಗಾಗಿ ಅರ್ಜಿ ಸಲ್ಲಿಸುವುದು ಯಾವಾಗಲೂ ಉತ್ತಮ ಆಲೋಚನೆಯಾಗಿರುತ್ತದೆ.

ವೇತನ ಮುಂಗಡ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳ ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳು ಆನ್ಲೈನ್ ವೇತನ ಸಾಲಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಪ್ರಸಕ್ತ ತಿಂಗಳಿಗಾಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಹುತೇಕ ಶೂನ್ಯವಾಗುತ್ತಿದ್ದರೆ, ಆನ್ಲೈನ್ ವೇತನ ಸಾಲಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತು ತಿಳಿದುಕೊಳ್ಳಿ ಮತ್ತು ಹೀರೋಫಿನ್‌ಕಾರ್ಪ್ ನಂತಹ ತತ್ ಕ್ಷಣ ಸಾಲ ಆಪ್ ಗಳ ಮೂಲಕ ಮುಂಗಡಕ್ಕಾಗಿ ವೇತನ ಸಾಲ ಅರ್ಜಿ ಸಲ್ಲಿಸಿ.

Salary Advance Loan Tenure

ಕಡಿಮೆ ಸಾಲ ಅವಧಿ

ಮುಂಗಡಗಳನ್ನು ಸಾಧಾರಣವಾಗಿ 1 ರಿಂದ 2 ವರ್ಷಗಳ ಅವಧಿಗಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ಮರುಪಾವತಿಯ ಹೊರೆ ನೀಡುವ ದೀರ್ಘಾವಧಿಗಾಗಿ ಅಲ್ಲ.

Instant Loan Amount

ಸಾಲ ಮೊತ್ತ

ಸಾಲದಾತರ ಆಧಾರದ ಮೇಲೆ ತೆಗೆದುಕೊಳ್ಳಲಾಗುವ ಮುಂಗಡ ಸಾಲ ಮೊತ್ತವು 15,000 ದಿಂದ 2 ಲಕ್ಷದವರೆಗೆ ಭಿನ್ನವಾಗಿರುತ್ತದೆ. ಇದನ್ನು ಇಎಂಐಗಳಾಗಿ ವಿಭಜಿಸಿದಾಗ ಮರುಪಾವತಿ ಸುಲಭವಾಗುತ್ತದೆ.

Quick Loan Approval

ಸಾಲ ಅನುಮೋದನೆ

ಮುಂಗಡ ಸಾಲ ಮಂಜೂರಾತಿಗೆ ತೆಗೆದುಕೊಳ್ಳುವ ಕಾಲ ಬಹಳ ತ್ವರಿತ ಮತ್ತು ಕನಿಷ್ಠ ದಾಖಲೆ ಸಲ್ಲಿಕೆ ಒಳಗೊಂಡಿರುತ್ತದೆ ಆದರೆ ಅಧಿಕ ಮೊತ್ತದ ದೀರ್ಘಾವಧಿ ಸಾಲಕ್ಕಾಗಿ ಹೆಚ್ಚಿನ ಪರಿಶೀಲನೆ ಮತ್ತು ಸಾಲ ಪಡೆಯುವ ವ್ಯಕ್ತಿಯ ಸಾಲಯೋಗ್ಯತೆ ಮತ್ತು ಆಸ್ತಿಪಾಸ್ತಿಗಳ ಪರಿಶೀಲನೆಯ ಅಗತ್ಯವಿರುತ್ತದೆ.

Easy for Working Individuals

ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಸುಲಭ

ವೇತನದಾರರು ಮತ್ತು ಸ್ವ ಉದ್ಯೋಗಿಗಳು ಮುಂಗಡ ವೇತನ ಸಾಲ ಪಡೆದುಕೊಳ್ಳುವುದಕ್ಕೆ ಫ್ರೆಷರ್ಸ್/ಉದ್ಯೋಗ ಅನ್ವೇಷಕರಿಗಿಂತ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಾರೆ.

No Collateral Required

ಮೇಲಾಧಾರ ಮುಕ್ತ

ಭದ್ರತೆ ರಹಿತ ಸಾಲವಾಗಿರುವ ಕಾರಣ, ನೀಡಲಾಗಿರುವ ಮುಂಗಡಗಳಿಗೆ ಪ್ರತಿಯಾಗಿ ಯಾವುದೇ ಭದ್ರತೆ ಅಥವಾ ಆಸ್ತಿಗಳನ್ನು ಅಡಮಾನ ಇರಿಸಬೇಕಾದ ಅಗತ್ಯವಿಲ್ಲ.

ವೇತನ ಮುಂಗಡ ಸಾಲಕ್ಕಾಗಿ ಅರ್ಹತಾ ಮಾನದಂಡ ಮತ್ತು ದಾಖಲೆಗಳು

ಸಾಲ 50,000 ಅಥವಾ 1 ಲಕ್ಷವೇ ಇರಲಿ, ಸಾಲ ಪಡೆಯುವವರು ಮುಂಗಡ ವೇತನ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮೊದಲು ಅರ್ಹತಾ ಮಾನದಂಡವನ್ನು ಪರಿಶೀಲಿಸಬೇಕು. ಯಾವುದೇ ವಂಚನೆ ಪ್ರಕರಣಗಳು ಇಲ್ಲ ಎನ್ನುವುದನ್ನು ಇದು ಖಚಿತಪಡಿಸುತ್ತದೆ:

  • 1

    ವೇತನದಾರರಿಗಾಗಿ ಕನಿಷ್ಠ ಮಾಸಿಕ ಆದಾಯ: ಅರ್ಜಿದಾರರು ಮಾಸಿಕ ಕನಿಷ್ಠ 15,000 ರೂ. ಮೊತ್ತವನ್ನು ಗಳಿಸಬೇಕು

  • 2

    ವೇತನದಾರರಿಗಾಗಿ ಕನಿಷ್ಠ ಮಾಸಿಕ ಆದಾಯ: ಅರ್ಜಿದಾರರು ಮಾಸಿಕ ಕನಿಷ್ಠ 15,000 ರೂ. ಮೊತ್ತವನ್ನು ಗಳಿಸಬೇಕು

  • 3

    ಸ್ವ ಉದ್ಯೋಗಿಗಳಿಗಾಗಿ ಕನಿಷ್ಠ ಮಾಸಿಕ ಆದಾಯ: ಕನಿಷ್ಠ ಗಳಿಕೆ ಮಾಸಿಕ 15,000 ರೂ. ಆಗಿರಬೇಕು ಮತ್ತು ಆರು ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಡ್ಡಾಯ

  • 4

    ಆದಾಯ ಪುರಾವೆ: ವೇತನದಾರರಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ವೈಯಕ್ತಿಕ ಖಾತೆ

  • 5

    ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಬೇಕಾಗುವ ಮೊದಲ ದಾಖಲೆಯೆಂದರೆ ಅದು ಆಧಾರ್ ಕಾರ್ಡ್ ಅಥವಾ ಯಾವುದೇ ಡಿಜಿಟಲ್ ಎನೇಬಲ್ಡ್ ಕೆವೈಸಿ ದಾಖಲೆಗಳು

  • 6

    ಆಧಾರ್ ಕಾರ್ಡ್ ಇಲ್ಲದೇ ಇದ್ದರೆ, ನೀವು ನಿಮ್ಮ ಪ್ಯಾನ್ ಕಾರ್ಡ್/ಚಾಲನಾ ಪರವಾನಗಿ ಒದಗಿಸಬಹುದು

  • 7

    ಇತರ ಪ್ರಮುಖ ದಾಖಲೆಗಳಲ್ಲಿ, ನಿಮ್ಮ ವೃತ್ತಿಪರ ಮತ್ತು ಹಣಕಾಸು ವಿವರಗಳು ಇದರಲ್ಲಿ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಒಳಗೊಂಡಿರಬೇಕು

  • 8

    ಹಣಕಾಸು ಸಂಸ್ಥೆ ಸಲಹೆ ಮಾಡಿರುವ ಪ್ರಕಾರ ಅಂಗೀಕೃತ ಬ್ಯಾಂಕ್ ಗಳ ಪೈಕಿ ಯಾವುದಾದರೊಂದರಲ್ಲಿ ನಿಮ್ಮ ಖಾತೆ ಇರಬೇಕು

ಹೀರೋಫಿನ್‌ಕಾರ್ಪ್ ಮೂಲಕ ವೇತನ ಮುಂಗಡ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ಮುಂಗಡ ವೇತನ ಸಾಲದ ಪ್ರಕ್ರಿಯೆ ಬಹಳ ಸುಲಭ, ಈ ಕೆಳಗಿನ ಹಂತಗಳನ್ನು ಅನುಸರಿಸಿ:

Salary Advance App
  • ಗೂಗಲ್ ಪ್ಲೇ ಸ್ಟೋರ್ ನಿಂದ ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

  • ಮೂಲ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸ

  • ಬಯಸುವ ಸಾಲ ಮೊತ್ತ ನಮೂದಿಸಿ ಮತ್ತು ಸಾಲ ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಇಎಂಐ ಕಸ್ಟಮೈಸ್ ಮಾಡಿಕೊಳ್ಳಿ

  • ಸೆಕ್ಯೂರಿಟಿ ಕೋಡ್ ಉಪಯೋಗಿಸಿ ಕೆವೈಸಿ ದಾಖಲೆಗಳ ಕಾಗದ ರಹಿತ ಪರಿಶೀಲನೆ

  • ನಿಮಿಷಗಳಲ್ಲಿ ತಕ್ಷಣ ಸಾಲ ಅನುಮೋದನೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆ

ಗಮನಿಸಿ: ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ ಬಹಳ ಸರಳ, ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಬ್ಲಾಗ್ಸ್
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
Exclusive deals

Subscribe to our newsletter and get exclusive deals you wont find anywhere else straight to your inbox!